www.karnatakatv.net : ಕೊರೊನಾ ಮಹಾಮಾರಿಯಿಂದ ಇಡೀ ದೇಶ ತತ್ತರಿಸಿ ಹೋಗಿದೆ, ಹಾಗೇ ಕೊರೊನಾ ವೈರಸ್ ತಡೆಯಲು ಎಲ್ಲರಿಗೂ ಉಚಿತ ಲಸಿಕೆಯನ್ನು ಕೊಡುತ್ತಿದ್ದು, ಆದರೆ 18 ವರ್ಷದೊಳಗಿನ ಮಕ್ಕಳಿಗೆ ಮಾತ್ರ ಲಸಿಕೆ ಯಾವಾಗ ಸಿಗುತ್ತೊ ಅನ್ನೋ ಮಾತು ತುಂಬಾ ಕೇಳಿಬರುತ್ತಿದ್ದು ಇದೀಗ ಅದಕ್ಕೆ ಉತ್ತರ ಸಿಕ್ಕಿದೆ.
ಹೌದು.. ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುವ ಕೊವ್ಯಾಕ್ಸಿನ್ ಲಸಿಕೆಯನ್ನು 2-18 ವಯೋಮಾನದ ಮಕ್ಕಳ ಮೇಲೆ ತುರ್ತು ಬಳಕೆಗೆ ಕೊವಿಡ್-19 ತಜ್ಞರ ಸಮಿತಿ ಅನುಮೋದನೆ ನೀಡಿದೆ. 18ವರ್ಷದೊಳಗಿನ ಮಕ್ಕಳ ಮೇಲೆ ಕೋವಾಕ್ಸಿನ್‌ನ ಹಂತ -2 ಮತ್ತು ಹಂತ -3 ಪ್ರಯೋಗಗಳನ್ನು ಪೂರ್ಣಗೊಳಿಸಿತು ಮತ್ತು ಈ ತಿಂಗಳ ಆರಂಭದಲ್ಲಿ ಟ್ರಗ್ ದತ್ತಾಂಶವನ್ನು ಡ್ರಗ್ಸ್ ಮತ್ತು ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ ಸಲ್ಲಿಸಿತು.
ಈಗ ಮಕ್ಕಳಿಗೂ ಕೂಡಾ ಲಸಿಕೆಯನ್ನು ಹಾಕಿಸಬಹುದು ಎಂದು ತಜ್ಞರು ಸಲಹೆಯನ್ನು ಕೊಟ್ಟಿದ್ದಾರೆ. 2 ರಿಂದ 18 ವಯೋಮಾನದವರಿಗೆ ಕೊವ್ಯಾಕ್ಸಿನ್ ಲಸಿಕೆಯನ್ನು ನೀಡಿ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆಯ ಎರಡು ಡೋಸ್ ಅನ್ನು ನೀಡಲಾಗುವುದು. ಮೊದಲ ಡೋಸ್ ಮತ್ತು ಎರಡನೇ ಡೋಸ್ ನಡುವೆ 20 ದಿನಗಳ ಅಂತರವಿರಬೇಕು ಎಂದು ತಿಳಿಸಿದ್ರು.