ಮದ್ದೂರಿಗೂ ಎಂಟ್ರಿ ಕೊಟ್ಟ ಕೊರೊನಾ: ಸೋಂಕಿತ ವ್ಯಕ್ತಿ ಟೊಯೋಟಾ ಕಾರ್ಖಾನೆ ನೌಕರ..

ಮಂಡ್ಯ: ಮಂಡ್ಯ ನಗರದಲ್ಲಿ ಹೆಚ್ಚಾಗಿದ್ದ ಕೊರೊನಾ ಸೋಂಕಿತರ ಸಂಖ್ಯೆ ಇದೀಗ ಮದ್ದೂರಿಗೂ ಎಂಟ್ರಿ ಕೊಟ್ಟಿದೆ. ಪಾಂಡವಪುರದ ವ್ಯಕ್ತಿ ಮದ್ದೂರಿನಲ್ಲಿ ವಾಸಿಸುತ್ತಿದ್ದು, ಈತನಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ.

ಪಟ್ಟಣದ 4 ನೇ ವಾರ್ಡ್‌ನಲ್ಲಿ ಈ ಘಟನೆ ನಡೆದಿದ್ದು, ಪಾಸಿಟಿವ್ ಬಂದಿರುವ ವ್ಯಕ್ತಿ ಟೊಯೋಟಾ ಕಾರ್ಖಾನೆಯ ನೌಕರನಾಗಿದ್ದಾನೆ.

ಇನ್ನು 3 ತಿಂಗಳಿನಿಂದ ಪಾಂಡವಪುರದಲ್ಲಿ ವಾಸವಿದ್ದ ವ್ಯಕ್ತಿ ನಿನ್ನೆ ಮದ್ದೂರಿನಲ್ಲಿರುವ ತನ್ನ ರೂಮಿಗೆ ಬಂದು ಹೋಗಿದ್ದಾನೆ. ಪುರಸಭೆ ಅಧಿಕಾರಿಗಳು ಈ ರೂಮ್‌ನಲ್ಲಿ ಸ್ಯಾನಿಟೈಸರ್ ಸಿಂಪಡಿಸಲು ಸಿದ್ಧತೆ ನಡೆಸಿದ್ದು, ಮದ್ದೂರು ಪಟ್ಟಣದಲ್ಲಿ ಈ ಬಗ್ಗೆ ಆತಂಕ ಶುರುವಾಗಿದೆ.
ಪ್ರವೀಣ್ ಕುಮಾರ್ ಜಿ.ಟಿ, ಕರ್ನಾಟಕ ಟಿವಿ, ಮಂಡ್ಯ

https://youtu.be/sCihnjoLmew

About The Author