ಬೆಂಗಳೂರು : ಕೊರೊನಾ ನಮ್ಮಕರ್ನಾಟಕ ಮಾತ್ರವನ್ನ, ದೇಶವಷ್ಟೆ ಅಲ್ಲ ಇಡೀ ವಿಶ್ವವನ್ನ ಕಾಡ್ತಿದೆ.. ಅರ್ಧಕ್ಕರ್ಧ ವಿಶ್ವವೇ ಲಾಕ್ ಡೌನ್ ಆಗಿದೆ. ಇನ್ನು ನಮ್ಮ ದೇಶವೂ ಸಂಪೂರ್ಣ ಸ್ತಬ್ಧವಾಗಿದೆ.. ಒಂದು ಕೋಟಿ ಜನಸಂಖ್ಯೆ ಇರುವ ಬೆಂಗಳೂರು ಸಹ ಸೈಲೆಂಟ್ ಆಗಿದೆ.. ಆದರೂ ಕೆಲವೆಡೆ ಜನ ಕೊರೋನಾ ನಮಗೆ ಬರೋದಿಲ್ಲಅಂತ ಓಡಾಡ್ತಿದ್ದಾರೆ.. ಇಂಥಹವರ ದೃಷ್ಟಿಯಲ್ಲಿಟ್ಟಕೊಂಡು ಇಷ್ಟು ದಿನ ಸಂಚಾರಿ ರೂಲ್ಸ್ ಫಾಲೋ ಮಾಡಿ ಅಂತ ಹೇಳ್ತಿದ್ದ ನಮ್ಮ ಬೆಂಗಳೂರು ಟ್ರಾಫಿಕ್ ಪೊಲೀಸರು ಇದೀಗ ಕೊರೊನಾ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ಪೇಂಟಿಂಗ್ ಮೂಲಕ ಕೊರೊನಾ ಪೆಂಡಂಭೂತದ ಬಗ್ಗೆ ಮಾಹಿತಿ..!
ಬೆಂಗಳೂರು ಪಶ್ಚಿಮ ಸಂಚಾರಿ ವಿಭಾಗ ವಿಜಯ ನಗರ ಠಾಣೆಯ ಇನ್ಸ್ ಪೆಕ್ಟರ್ ರೂಪ ಹಡಗಲಿಯವರ ನೃತೃಥ್ವದಲ್ಲಿ ವಿಜಯ ನಗರ ಟೋಲ್ ಗೇಟ್ ಬಳಿಯ ಎಂಸಿ ಸರ್ಕಲ್ ನಲ್ಲಿ ಬೃಹದ್ ಕೊರೊನಾ ಭೂತವನ್ನ ಬಿಡಿಸುವ ಮೂಲಕ ಜನರಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿವ ಕೆಲಸ ಮಾಡಿದ್ದಾರೆ.. ವಿಜಯ ನಗರ, ವೆಸ್ಟ್ ಆಫ್ ಕಾರ್ಡ್ ರಸ್ತೆ ಹಾಗೂ ಮಾಗಡಿ ರೋಡ್ ಕಡೆ ಲಾಕ್ ಡೌನ್ ಉಲ್ಲಂಘಿಸಿ ಸಂಚರಿಸುವವರಿಗೆ ಸಂಚಾರಿ ಪೊಲೀಸರು ವಿಭಿನ್ನ ರೀತಿಯಲ್ಲಿ ಜಾಗೃತಿ ಮೂಡಇಸಲು ಮುಂದಾಗಿದ್ದಾರೆ.. ಒಟ್ಟಾರೆ ಬೆಂಗಳೂರು ಪೊಲೀಸರ ಈ ಕೊರೋನಾ ಜಾಗೃತಿ ಅಭಿಯಾನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ,.