Sunday, September 8, 2024

Latest Posts

20 ಮಿಲಿಯನ್ ಅಮೆರಿಕನ್ನರಿಗೆ ಕೊರೊನಾ ಸೋಂಕು..!

- Advertisement -

ಅಮೆರಿಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 20 ಮಿಲಿಯನ್‌ಗೆ ಏರಿಕೆಯಾಗಿದ್ದು, ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಯು.ಎಸ್‌ ಅಧಿಕಾರಿಗಳು ಅಂದಾಜು ಮಾಡಿದ್ದಾರೆ.

ಇನ್ನು ಸೋಂಕಿತರಲ್ಲಿ ಹೆಚ್ಚಿನವರಿಗೆ ಅದರ ಗುಣಲಕ್ಷಣಗಳೇ ಇರಲಿಲ್ಲ. ಇದು ಸೋಂಕಿತರ ಸಂಖ್ಯೆ ಹೆಚ್ಚಾಗುವಂತೆ ಮಾಡಿದೆ. ಯುಎಸ್‌ನಲ್ಲಿ 12ಕ್ಕೂ ಅಧಿಕ ರಾಜ್ಯಗಳು ಕೊರೊನಾ ವಿಷಯದಲ್ಲಿ ಆತಂಕಕಾರಿ ಬೆಳವಣಿಗೆ ಹೊಂದಿದೆ ಎಂದು ಹೇಳಲಾಗಿದೆ.

https://youtu.be/F9RiUtFPnvM

ಇನ್ನು 20 ಮಿಲಿಯನ್ ಜನರಿಗೆ ಸೋಂಕು ತಗುಲಿದೆ ಎಂದರೆ, ದೇಶದ ಶೇ.6ರಷ್ಟು ಜನರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ. ಇನ್ನು ಇವರೆಲ್ಲರೂ ಚಿಕಿತ್ಸೆ ಪಡೆಯುತ್ತಿರುವುದರಿಂದ 20 ಮಿಲಿಯನ್ ಸೋಂಕಿತರು ಎಂದು ಗೊತ್ತಾಗಿದೆ. ಆದ್ರೆ, ಅಮೆರಿಕದಲ್ಲಿ ಕಾಣಸಿಗದ ಕೊರೊನಾ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎನ್ನಲಾಗಿದೆ.

ಅಮೆರಿಕದಲ್ಲಿ ಈಗಾಗಲೇ 1ಲಕ್ಷಕ್ಕೂ ಅಧಿಕ ಜನ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಭಾರತದ ರೀತಿ ಅಮೆರಿಕದಲ್ಲೂ ಲಾಕ್‌ಡೌನ್ ಮಾಡಲಾಗಿತ್ತು. ಇದರಿಂದ ಕೆಲ ರಾಜ್ಯ ಕೊರೊನಾ ಸೋಂಕಿನಿಂದ ಮುುಕ್ತಿ ಪಡೆದಿತ್ತಾದರೂ, ಮತ್ತೆ ಕೊರೊನಾರ್ಭಟ ಮುಂದುವರೆದಿದೆ.

ಭಾರತದಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತ ಹೊರಟಿದ್ದು, ದೆಹಲಿಯಲ್ಲೇ ಜುಲೈ 30ರ ತನಕ 5 ಲಕ್ಷ ಕೊರೊನಾ ಸೋಂಕಿತರು ಹೆಚ್ಚಾಗಲಿದ್ದಾರೆಂದು ಹೇಳಲಾಗಿದೆ.

- Advertisement -

Latest Posts

Don't Miss