Saturday, July 5, 2025

Latest Posts

ಮಂಡ್ಯದಲ್ಲಿ ಸೋಂಕಿತರ ಸಂಖ್ಯೆ 5ಕ್ಕೆ ಏರಿಕೆ..!

- Advertisement -

ಮಂಡ್ಯ : ಮಂಡ್ಯದಲ್ಲಿ ಮತ್ತೋರ್ವ ವ್ಯಕ್ತಿ ಕೊತೊನಾ ಸೋಂಕು ತಗುಲಿದೆ.. ಮಂಡ್ಯ ನಗರದ ಸ್ವರ್ಣಸಂದ್ರ ಬಡಾವಣೆಯ ಯುವಕನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ನಂಜನಗೂಡಿನ ಜುಬಿಲೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡ್ತಿದ್ದ ಯುವಕನಲ್ಲಿ ಸೋಒಂಕು ಕಾಣಿಸಿಕೊಂಡಿದ್ದು ಇದೀಗ ಸೋಂಕಿತನ ಸಂಪರ್ಕದಲ್ಲಿದ್ದವರ ಮಾಹಿತಿ ಸಂಗ್ರಹಿಸಿದ್ದು ಹಲವರನ್ನ ಹೋಂ ಕ್ಯ್ಆರಂಟೈನ್ ನಲ್ಲಿ ಮಾಡಿ ಕೆಲವರನ್ನ ಐಸೋಲೇಷನ್ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ.. ಇದಲ್ಲದೇ ಸ್ವರ್ಣಸಂದ್ರ ಬಡಾವಣೆಯನ್ನ ಬಫರ್ ಝೋನ್ ಎಂದು ಘೊಷಣೆ ಮಾಡಿ ಜನರ ಓಡಾಟವನ್ನ ನಿಷೇಧ ಮಾಡುವ ಸಾಧ್ಯತೆ ಇದೆ.

ಮೊನ್ನೆ ಮಂಡ್ಯದಲ್ಲಿ ಮಳವಳ್ಳಿಯ ಮೂವರಿಗೆ ಸೋಂಕು ಪಫಾಸಿಟಿವ್ ಬಂದಿತ್ತು, ನಿನ್ನೆಅದೇ ಗುಂಪಿನ ಮತ್ತೋರ್ವನಿಗೆ ಪಾಸಿಟಿನ್ ಬಂದಿತ್ತು. ಇದೀಗ ಔಷಧಿ ಕಾರ್ಖಾನೆಯ ಸಿಬ್ಬಂದಿಯ ಸೋಂಕು ಧೃಡಪಟ್ಟ ಹಿನ್ನೆಲೆ ಮಂಡ್ಯದಲ್ಲಿ ಸೋಂಕಿತರ ಸಂಖ್ಯೆ 5ಕ್ಕೆ ಏರಿಕೆಯಾದಂತಾಗಿದೆ..

https://www.youtube.com/watch?v=ASvEo5Kt5F4

ಪ್ರವೀಣ್ ಕುಮಾರ್ ಜಿಟಿ. ಕರ್ನಾಟಕ ಟಿವಿ, ಮಂಡ್ಯ

https://www.youtube.com/watch?v=4Znjpvn_kl8
- Advertisement -

Latest Posts

Don't Miss