Thursday, December 4, 2025

Latest Posts

ದಂಪತಿ–ಪಾಲಿಕೆ ಅಧಿಕಾರಿಗಳ ಕಿರುಕುಳ : ವೈಟ್‌ಫೀಲ್ಡ್‌ನಲ್ಲಿ ಟೆಕ್ಕಿಯ ಆತ್ಮ*ಹತ್ಯೆ

- Advertisement -

ವೈಟ್‌ಫೀಲ್ಡ್ ಪ್ರದೇಶದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ 45 ವರ್ಷದ ಮುರುಳಿ ಗೋವಿಂದರಾಜು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಬೆಳಕಿಗೆ ಬಂದಿದೆ. ನಿರ್ಮಾಣ ಹಂತದ ಕಟ್ಟಡದಲ್ಲಿ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಅವರು ಪತ್ತೆಯಾಗಿದ್ದಾರೆ.

ಮುರುಳಿ ಅವರ ತಾಯಿ ಲಕ್ಷ್ಮಿ ಅವರ ದೂರು ಆಧರಿಸಿ ಪೊಲೀಸರು ಶಶಿ ನಂಬಿಯಾರ್ (64) ಮತ್ತು ಉಷಾ ನಂಬಿಯಾರ್ (57) ದಂಪತಿಯನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ವರುಣ್ ನಂಬಿಯಾರ್ ಪರಾರಿಯಾಗಿದ್ದು, ಹುಡುಕಾಟ ಮುಂದುವರಿದಿದೆ. 2018ರಲ್ಲಿ ಮುರುಳಿ ನಲ್ಲೂರಹಳ್ಳಿಯಲ್ಲಿ ಖರೀದಿಸಿದ ನಿವೇಶನದಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದರು. ಆದರೆ ನಂಬಿಯಾರ್ ದಂಪತಿ ಕಳೆದ ಕೆಲ ತಿಂಗಳಿಂದ ₹20 ಲಕ್ಷ ಬೇಡಿಕೆ ಇಟ್ಟು ಬೆದರಿಕೆ ಹಾಕುತ್ತಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.

ಬುಧವಾರ ಬೆಳಗ್ಗೆ 9.30ಕ್ಕೆ ಕಾರ್ಪೆಂಟರ್ ಕಟ್ಟಡಕ್ಕೆ ಬಂದಾಗ ಮುರುಳಿ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಅದರಲ್ಲಿಗೆ ಮುರುಳಿ ಅವರು ನಂಬಿಯಾರ್ ದಂಪತಿ ಹಾಗೂ ಕೆಲವು ಪಾಲಿಕೆ ಅಧಿಕಾರಿಗಳು ಆಸ್ತಿ ಗಲಾಟೆ ಮತ್ತು ಹಣ ಬೇಡಿಕೆಯಿಂದ ಕಿರುಕುಳ ನೀಡುತ್ತಿದ್ದರು ಎಂದು ಸ್ಪಷ್ಟವಾಗಿ ಬರೆದಿದ್ದಾರೆ.
ನನ್ನ ಸಾವಿಗೆ ಕಾರಣ ಉಷಾ, ಶಶಿ ಮತ್ತು ವರುಣ್ ಎಂದು ಉಲ್ಲೇಖಿಸಿದ್ದಾರೆ.

ಸ್ಥಳೀಯರ ಪ್ರಕಾರ, ಉಷಾ ನಂಬಿಯಾರ್ ಹೊಸ ಕಟ್ಟಡ ಮಾಲೀಕರನ್ನು ಬೆದರಿಸಿ ಹಣ ವಸೂಲಿ ಮಾಡುವ ಅಭ್ಯಾಸ ಹೊಂದಿದ್ದಳು ಎಂದು ಆರೋಪ. ಈ ದಂಪತಿಯಿಂದ ಯಾರಾದರೂ ಇನ್ನೂ ಕಿರುಕುಳಕ್ಕೆ ಒಳಗಾಗಿದ್ದರೆ ಮುಂದೆ ಬಂದು ದೂರು ನೀಡುವಂತೆ ವೈಟ್‌ಫೀಲ್ಡ್ ಪೊಲೀಸರು ತಿಳಿಸಿದ್ದಾರೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss