- Advertisement -
ಮಂಡ್ಯ : ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಗ್ರಾಮದಲ್ಲಿ ಮನಕಲಕುವ ಘಟನೆ ನಡೆದಿದೆ. 46 ವರ್ಷಗಳ ಸುಖದ ದಾಂಪತ್ಯ ನಡೆಸಿದ ಗೌರಮ್ಮ (50) ಮತ್ತು ನಿಂಗರಾಜ ನಾಯ್ಕ (65) ದಂಪತಿಗಳು ಒಂದೇ ದಿನ ಸಾವನ್ನಪ್ಪಿದ್ದಾರೆ.
ಅನಾರೋಗ್ಯದಿಂದ ಗೌರಮ್ಮ ನಿಧನರಾದ ಬಳಿಕ, ಅವರ ಅಂತ್ಯಸಂಸ್ಕಾರ ಸಿದ್ಧತೆ ನಡೆಯುತ್ತಿದ್ದಾಗ ಪತಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಸಾವಿನಲ್ಲೂ ಒಂದಾದ ಈ ದಂಪತಿಗಳ ವಿಯೋಗದಿಂದ ಕುಟುಂಬದವರು ತೀವ್ರ ದುಃಖದಲ್ಲಿದ್ದಾರೆ. ಒಂದೇ ದಿನ ತಂದೆ-ತಾಯಿ ಕಳೆದುಕೊಂಡ ಇಬ್ಬರು ಪುತ್ರರು ತಬ್ಬಲಿಯಾಗಿದ್ದಾರೆ. ಸಕ್ಕರೆನಾಡು ಮಂಡ್ಯದಲ್ಲಿ ಈ ಘಟನೆ ಸೂತಕದ ಛಾಯೆ ಬೀರಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ
- Advertisement -

