Thursday, September 25, 2025

Latest Posts

ಚಿನ್ನಯ್ಯನಿಗಾಗಿ ಸಮಯ ಮೀಸಲಿಟ್ಟ ಕೋರ್ಟ್

- Advertisement -

ಮಾಸ್ಕ್‌ಮ್ಯಾನ್‌ ಚಿನ್ನಯ್ಯ ಇಂದೂ ಕೂಡ ನ್ಯಾಯಾಲಯದ ಎದುರು ಹಾಜರಾಗಲಿದ್ದಾರೆ. ಚಿನ್ನಯ್ಯನ ವಿಚಾರಣೆಗಾಗಿಯೇ, ಕೋರ್ಟಿನ ಅರ್ಧ ದಿನದ ಸಮಯವನ್ನೇ ಮೀಸಲಿಡಲಾಗಿದೆ. ಸೆಪ್ಟೆಂಬರ್‌ 23ರಂದು ಚಿನ್ನಯ್ಯನನ್ನು, ಶಿವಮೊಗ್ಗ ಕಾರಾಗೃಹದಿಂದ ಬೆಳ್ತಂಗಡಿಗೆ ಕರೆದುಕೊಂಡು ಬರಲಾಗಿತ್ತು.

ಜೆಎಂಎಫ್‌ಸಿ ಕೋರ್ಟ್‌ ನ್ಯಾಯಾಧೀಶರಾದ ವಿಜಯೇಂದ್ರ ಅವರು ವಿಚಾರಣೆ ನಡೆಸಿದ್ರು. ಸಂಜೆ 3 ಗಂಟೆಯಿಂದ 6 ಗಂಟೆವರೆಗೆ, ನಿರಂತರವಾಗಿ 3 ಗಂಟೆಗಳ ಕಾಲ ವಿಚಾರಣೆ ನಡೆದಿದೆ. ಬಳಿಕ, ನ್ಯಾಯಾಲಯದ ಅವಧಿ ಮುಗಿದಿದ್ರಿಂದ ವಿಚಾರಣೆ ಮುಂದೂಡಲಾಗಿತ್ತು. ಇಂದು ಮಧ್ಯಾಹ್ನ 12 ಗಂಟೆಯಿಂದ ಸಂಜೆ 6 ಗಂಟೆವರೆಗೆ, ಚಿನ್ನಯ್ಯನಿಗಾಗಿ ಸಮಯ ಮೀಸಲಿಡಲಾಗಿದೆ. ಗುರುವಾರ ಮಧ್ಯಾಹ್ನ ನಡೆಯಬೇಕಿದ್ದ ಬೇರೆ ಪ್ರಕರಣಗಳ ವಿಚಾರಣೆಗೆ, ಬೇರೆ ದಿನಾಂಕದ ನೀಡಲಾಗಿದೆ.

ನಿನ್ನೆ ನ್ಯಾಯಾಧೀಶರ ಎದುರು ಚಿನ್ನಯ್ಯ, ಕಣ್ಣೀರಾಕಿಕೊಂಡೇ ಹೇಳಿಕೆ ನೀಡಿದ್ದಾನೆ. ತನ್ನ ಬಾಲ್ಯ, ಬೆಳೆದು ಬಂದ ಹಾದಿ, ವೈವಾಹಿಕ ವಿಚಾರಗಳ ಬಗ್ಗೆ ಹೇಳಿಕೊಂಡಿದ್ದಾನೆ. ಇಂದು ಧರ್ಮಸ್ಥಳ ಪ್ರಕರಣ ಬಗ್ಗೆ ಹೇಳಿಕೆ ದಾಖಲಿಸಿಕೊಳ್ಳಲಾಗುತ್ತದೆ. ಚಿನ್ನಯ್ಯ ಎಸ್‌ಐಟಿ ತನಿಖೆ ವೇಳೆ, ಹಲವು ಮಾಹಿತಿಗಳನ್ನು ನೀಡಿದ್ದ. ಪ್ರಕರಣದಲ್ಲಿ ಭಾಗಿಯಾಗಿರುವವರ ಹೆಸರು ಮತ್ತು ಯಾವ ರೀತಿ ಪ್ರಕರಣದಲ್ಲಿ ತನ್ನನ್ನ ಎಳೆದುತರಲಾಯ್ತು. ಹೀಗೆ ಪ್ರಕರಣದ ಸಂಪೂರ್ಣ ಚಿತ್ರಣವನ್ನು ನ್ಯಾಯಾಲಯದ ಎದುರು ಚಿನ್ನಯ್ಯ ವಿವರಿಸಲಿದ್ದಾನೆ.

- Advertisement -

Latest Posts

Don't Miss