ಕರ್ನಾಟಕ ಟಿವಿ : ಸರ್ಕಾರ, ಜನಪ್ರತಿನಿಧಿಗಳು ಪ್ರಜೆಗಳ ಮಾತು ಕೇಳದಿದ್ದಾಗ ಎಲ್ರೂ ಕೋರ್ಟ್ ಮೊರೆ ಹೋಗ್ತಾರೆ.. ಯಾಕಂದ್ರೆ ನಮ್ಮ ವಾದ ಸರಿಯಾಗಿದ್ದಾಗ ಏನಾದ್ರೂ ನ್ಯಾಯ ಸಿಗುತ್ತೇನೋ ಅಂತ ಆದ್ರೆ, ಮದ್ಯಮಾರಾಟ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ ಇದೀ ಕೋರ್ಟ್ ನಿಲುವಿನಿಂದ ನಿರಾಸೆ ಅನುಭವಿಸಿದ್ದಾರೆ.. ವಿಷ್ಯ ಏನಪ್ಪಅಂದ್ರೆ, ಮದ್ಯಮಾರಾಟದಿಂದ ಫಿಸಿಕಲ್ ಡಿಸ್ಟೆನ್ಸ್ ಇಲ್ಲದಂತಾಗಿದೆ.. ಕೊರೊನಾ ಹರಡುವ ಸಾಧ್ಯತೆ ಇದೇ ಹೀಗಾಗಿ ಮದ್ಯ ಮಾರಾಟ ಬ್ಯಾನ್ ಮಾಡುವಂತೆ ಸುಪ್ರಿಂ ಕೋರ್ಟ್ ಗೆ ವ್ಯಕ್ತಿ ಯೋರ್ವರು ಅರ್ಜಿ ಸಲ್ಲಿಸಿದ್ರು ಅರ್ಜಿದಾರರ ಪರ ವಕೀಲ ಸಾಯಿ ದೀಪಕ್ ವಾದ ಮಂಡಿಸಿದ್ರು.. . ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನಾವು ಮದ್ಯ ಮಾರಾಟಕ್ಕೆ ತಡೆ ಕೊಡುವುದಿಲ್ಲ ಎಂದು ಕಡ್ಡಿ ತುಂಡಾದಂತೆ ಹೇಳಿದೆ.. ಇದೇ ವೇಳೆ ರಾಜ್ಯ ಸರ್ಕಾರಗಳಿಗೆ ಮದ್ಯವನ್ನ ಹೋಂ ಡೆಲಿವರಿ ವ್ಯವಸ್ಥೆ ಮಾಡಿಸುವುದರ ಕುರಿತು ಸಲಹೆ ನೀಡಿದೆ..