ಲಸಿಕೆ ಪಡೆದವರಿಗೆ ಮಹತ್ವದ ಸುದ್ದಿ

www.karnatakatv..net: ರಾಷ್ಟ್ರೀಯ- ಭಾರತದಲ್ಲಿ ಕೋವಿಶೀಲ್ಡ್ ಲಸಿಕೆಯ ಡೋಸ್ ಗಳ ನಡುವಿನ ಅಂತರವನ್ನ ಹೆಚ್ಚಿಸಿರುವುದಕ್ಕೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಹಲವರು ಇದಕ್ಕೆ ವಿರೋಧವನ್ನು ವ್ಯಕ್ತಪಡಿಸಿದ್ದು, ಲಸಿಕೆಯ ಕೊರತೆಯಿಂದ ಕೇಂದ್ರ ಸರ್ಕಾರ ಈ ಕ್ರಮಕೈಗೊಂಡಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಆದ್ರೆ, ಕೋವಿಶೀಲ್ಡ್ ಬ್ರಿಟನ್ ಲಸಿಕೆ ಆಸ್ಟ್ರಾಜೆನಿಕಾದ ಬಗ್ಗೆ ಆಕ್ಸ್ ಫರ್ಡ್ ಅಧ್ಯಯನ ನಡೆಸಿದ್ದು, ಆಸ್ಟ್ರಾಜೆನಿಕಾ ಲಸಿಕೆಯ 2 ಪ್ರಮಾಣಗಳನ್ನು 44-45 ವಾರಗಳ ಅಂತರದಲ್ಲಿ ತೆಗೆದುಕೊಂಡರೆ 8-12 ವಾರಗಳ ಅಂತರವನ್ನು ನೀಡಿದ್ದಕ್ಕಿಂತ ನಾಲ್ಕು ಪಟ್ಟು ಹೆಚ್ಚು ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ ಅಂದರೆ, ಆ್ಯಂಟಿಬಾಡಿ ಮಟ್ಟವು ಸುಮಾರು ಒಂದು ವರ್ಷದವರೆಗೆ ಹೆಚ್ಚಿರುತ್ತದೆ ಎಂದು ವರದಿ ನೀಡಿದೆ.

About The Author