Thursday, October 16, 2025

Latest Posts

Covid ಸೂಪರ್ ಸ್ಪ್ರೆಡರ್ ಡಿಕೆಶಿ : ಬಿಜೆಪಿ ವ್ಯಂಗ್ಯ

- Advertisement -

ಬೆಂಗಳೂರು : ಡಿಕೆಶಿ ಅವರೇ ನಿಮ್ಮ ಆರೋಗ್ಯ ಹೇಗಿದೆ ? ನಿಮ್ಮ ಜತೆ ಹೆಜ್ಜೆ ಹಾಕಿದವರಿಗೆಲ್ಲ ಕೋವಿಡ್ ದೃಢಪಟ್ಟಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ಶಿವಕುಮಾರ್ ಅವರನ್ನು ಕೋವಿಡ್ ಸೂಪರ್ ಸ್ಪ್ರೆಡರ್ ಎಂದು ಆರೋಪಿಸಿದೆ.

ಮಾನ್ಯ ಡಿಕೆಶಿ ಅವರೇ, ನಿಮ್ಮ ಆರೋಗ್ಯ ಹೇಗಿದೆ?ಅಂದ ಹಾಗೆ ನಿಮ್ಮ ಜೊತೆಯಲ್ಲಿ ಕೋವಿಡ್‌ಜಾತ್ರೆಯಲ್ಲಿ ಹೆಜ್ಜೆ ಹಾಕಿದ ಹಲವು ನಾಯಕರಿಗೆ ಈಗ ಕೋವಿಡ್ ದೃಢಪಟ್ಟಿದೆ. ಅಂದರೆ ಕೋವಿಡ್ ನಿಮ್ಮ ಅಕ್ಕಪಕ್ಕದಲ್ಲಿತ್ತು, ಅದಕ್ಕಾಗಿ ನಿಮ್ಮ ಬಗ್ಗೆ ನಮಗೆ ಕಾಳಜಿ! ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರು ಅತ್ಯಂತ ಅಗತ್ಯವಾಗಿ ಕೋವಿಡ್ ಪರೀಕ್ಷಾ ವರದಿ ಬಿಡುಗಡೆಗೊಳಿಸಬೇಕು. ಇವರು ಪಾದಯಾತ್ರೆ ನಡೆಸಿದ ಭಾಗದಲ್ಲಿ ಈಗ ಕೋವಿಡ್ ಸೋಂಕು ಹೆಚ್ಚುತ್ತಿದೆ ಎಂದು ಆರೋಪಿಸಿದೆ.

ಈ ಬಾರಿ ಕೋವಿಡ್ ಸೂಪರ್ ಸ್ಪ್ರೆಡರ್ ರೀತಿ ಕೆಲಸ ಮಾಡಿದ್ದೀರಿ. ಸಾರ್ವಜನಿಕ ಹಿತದೃಷ್ಟಿಯಿಂದ ನಿಮ್ಮ‌ ಕೋವಿಡ್ ವರದಿ ಬಹಿರಂಗಗೊಳಿಸುವಿರಾ?ಯಾರಿಗೆ ಆರೋಗ್ಯ ಸರಿ ಇಲ್ಲವೋ, ಅವರು ಮಾತ್ರ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಉಡಾಫೆ ಉತ್ತರ ಕೊಟ್ಟರೆ ಹೇಗೆ ಡಿಕೆಶಿ ಅವರೇ? ಹಳೇ ಮೈಸೂರು ಭಾಗದಲ್ಲಿ‌ ಕೋವಿಡ್ ಹಂಚಿಕೆಯ ಅನಧಿಕೃತ ಫ್ರಾಂಚೈಸಿದಾರರು ನೀವು. ಸಾಂಕ್ರಾಮಿಕ ಕಾಯಿದೆ ಉಲ್ಲಂಘನೆಯ ನೇತಾರರಲ್ಲವೇ ನೀವು? ಎಂದು ಪ್ರಶ್ನಿಸಿದೆ. ಮೇಕೆದಾಟು ಪಾದಯಾತ್ರೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ರಕ್ಷಣೆಗೆ ನಿಯೋಜನೆಯಾಗಿದ್ದ ಪೊಲೀಸರು ಕೋವಿಡ್ ಸೋಂಕಿತರಾಗುತ್ತಿದ್ದಾರೆ. ಕೋವಿಡ್ ಸೂಪರ್ ಸ್ಪ್ರೆಡರ್ ಡಿಕೆಶಿ ಅವರೇ ಇದಕ್ಕೆ ಹೊಣೆ ಯಾರು? ಎಂದು ಬಿಜೆಪಿ ಪ್ರಶ್ನೆ ಮಾಡಿದೆ.

- Advertisement -

Latest Posts

Don't Miss