Friday, April 18, 2025

Latest Posts

Cow : ವಿಜಯನಗರದಲ್ಲಿ ಎರಡು ಕಾಲುಗಳುಳ್ಳ ಕರು ಜನನ: ಏನಿದು ಅಚ್ಚರಿ ಎಂದ ಗ್ರಾಮಸ್ಥರು!

- Advertisement -

Vijayanagara News : ಈ ಪ್ರಕೃತಿಯೇ ವಿಸ್ಮಯಗಳ ಆಗರ. ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಹೀಗೆ ಯಾರಿಗೂ, ಯಾವ ಕ್ಷೇತ್ರಕ್ಕೂ ನಿಲುಕದ ನಿಗೂಢಗಳು ಅದೆಷ್ಟೋ ಈ ಭೂಮಿಯ ಮೇಲೆ ನಡೆದಿವೆ, ನಡೆಯುತ್ತಲೇ ಇವೆ. ಅವುಗಳ ಪೈಕಿ ಕೆಲವು ಘಟನೆಗಳಿಗೆ ವೈಜ್ಞಾನಿಕ ಮೂಲ ನೀಡಿದರೂ, ಇನ್ನೆಷ್ಟೋ ಘಟನೆಗಳು ಊಹೆಗೂ ಮೀರಿದ್ದೇ ಆಗಿವೆ.

ಇದೀಗ ಮತ್ತೊಂದು ವಿಸ್ಮಯಕಾರಿ ಘಟನೆ ರಾಜ್ಯದ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ. ಹೌದು, ಕೂಡ್ಲಿಗಿ ತಾಲೂಕಿನ ಹಾರಕಬಾವಿ ಗ್ರಾಮದಲ್ಲಿ ಹಸುವೊಂದು 2 ಕಾಲುಗಳನ್ನು ಹೊಂದಿರುವ ಕರುವಿಗೆ ಜನ್ಮ ನೀಡಿದೆ. ಕರುವಿಗೆ ಎರಡೇ ಕಾಲು ಇರುವುದನ್ನು ಕಂಡು ಗ್ರಾಮಸ್ಥರಿಗೆ ಆಶ್ಚರ್ಯವಾಗಿದೆ.

ಸದ್ಯ ಕರು ಹಾಗೂ ತಾಯಿ ಹಸು ಆರೋಗ್ಯವಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಈ ಹಿಂದೆ ಕೂಡ್ಲಗಿ ತಾಲೂಕಿನ ಚೌಡಪುರ ಹಾಗೂ ಗುಡೆಕೋಟೆ ಗ್ರಾಮದಲ್ಲೂ ಎರಡು ಕಾಲು ಇರೋ ಕರು ಜನನವಾಗಿತು, ಇಂತಹ ಅಪರೂಪದ ಕರು ಇದೀಗ ಹಾರಕಬಾವಿ ಗ್ರಾಮದಲ್ಲಿ ಜನಿಸಿದೆ.

ಎರಡು ಮುಂಗಾಲುಗಳನ್ನು ಹೊಂದಿರದೆ ಕೇವಲ ಎರಡು ಹಿಂಗಾಲುಗಳನ್ನು ಮಾತ್ರ ಹೊಂದಿರುವ ಗಂಡು ಕರುವಿಗೆ ಹಸು ಜನ್ಮ ನೀಡಿದೆ. ಇದು ಗ್ರಾಮಸ್ಥರಲ್ಲಿ ಬಹು ಅಚ್ಚರಿ ಮೂಡಿಸಿದ್ದಲ್ಲದೆ, ಸುದ್ದಿ ತಿಳಿದ ನೆರೆ ಹೊರೆಯ ಗ್ರಾಮಗಳ ಗ್ರಾಮಸ್ಥರು, ನೆಂಟರು ಕರುವನ್ನು ನೋಡಲು ಧಾವಿಸುತ್ತಿದ್ದಾರೆ.

Dhananjay : ಹುಲಿ ಉಗುರು ಪ್ರಕರಣ : ಧನಂಜಯ್ ಗುರೂಜಿ ಮನೆ ಮೇಲೆ ಅರಣ್ಯಾಧಿಕಾರಿಗಳ ರೇಡ್..!

Devara Gudda : ಮಹಿಳೆಯ ಹಸ್ತಕ್ಷೇಪದಿಂದ ಇಕ್ಕಟ್ಟಿಗೆ ಸಿಲುಕಲಿದೆ ಸರ್ಕಾರ ; ದೇವರಗುಡ್ಡ ಕಾರ್ಣಿಕ ನುಡಿ

Jaggesh : ಜಗ್ಗೇಶ್ ಕತ್ತಲ್ಲೂ ಇದೆ ಹುಲಿ ಉಗುರಿನ ಲಾಕೆಟ್ ; ಅವರೇ ಒಪ್ಪಿಕೊಂಡಿದ್ರು

- Advertisement -

Latest Posts

Don't Miss