Sunday, April 13, 2025

Latest Posts

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ಕ್ರಿಕೇಟಿಗ, ಕರುನಾಡ ಅಳಿಯ ಸೂರ್ಯಕುಮಾರ್

- Advertisement -

Cricket News: ಟೀಂ ಇಂಡಿಯಾ ಕ್ರಿಕೇಟಿಗ ಸೂರ್ಯಕುಮಾರ್ ಯಾದವ್ ಕರ್ನಾಟಕದ ಅಳಿಯ. ದಕ್ಷಿಣ ಕನ್ನಡದ ದೇವಿಶಾ ಶೆಟ್ಟಿಯನ್ನು ವಿವಾಹವಾಗಿರುವ ಸೂರ್ಯಕುಮಾರ್ ಆಗಾಗ ದಕ್ಷಿಣ ಕನ್ನಡಕ್ಕೆ ಬಂದು, ದೇವಸ್ಥಾನಗಳಿಗೆ ಭೇಟಿ ಕೊಡುತ್ತಿರುತ್ತಾರೆ.

ಕಳೆದ ಬಾರಿ ಟೀಂ ಇಂಡಿಯಾ ವರ್ಲ್ಡ್ ಕಪ್ ಗೆದ್ದಾಗ, ಮಾರಿಗುಡಿ, ಬಪ್ಪನಾಡು ದುರ್ಗಾ ಪರಮೇಶ್ವರಿ ಸೇರಿ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ, ಹರಕೆ ತೀರಿಸಿದ್ದರು. ಇದೀಗ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದಾರೆ. ಸುಬ್ರಹ್ಮಣ್ಯ ಕ್ಷೇತ್ರ ನಾಗ ದೇವರಿಗೆ ಸೇರಿದ ಪೂಜೆಗಳನ್ನು ಮಾಡುವಲ್ಲಿ ಪ್ರಸಿದ್ಧಿ ಪಡೆದಿದ್ದು, ಇಲ್ಲಿ ಬಂದು ನಾಗನಿಗೆ ವಿಶೇಷ ಪೂಜೆ ಸಲ್ಲಿಸಿದರೆ, ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಅನ್ನೋ ನಂಬಿಕೆ ಇದೆ. ಹಾಗಾಗಿ ಸೂರ್‌ಯಕುಮಾರ್ ಯಾದವ್, ಪತ್ನಿ ಸಮೇತರಾಗಿ ಇಲ್ಲಿ ಬಂದು ಆಶ್ಲೇಷ ಬಲಿ, ಮಹಾಪೂಜೆ, ಅಭಿಷೇಕ ನೆರವೇರಿಸಿದರು.

ಈ ವೇಳೆ ಸೂರ್‌ಯಕುಮಾರ್ ಯಾದವ್ ದಂಪತಿಗೆ ದೇವಸ್ಥಾನದ ಆಡಳಿತ ಮಂಡಳಿಯಿಂದ ಗೌರವ ಸಲ್ಲಿಸಲಾಯಿತು. ಇನ್ನು ವರ್ಲ್ಡ್‌ಕಪ್ ಮ್ಯಾಚ್ ಗೆದ್ದ ಬಳಿಕ ಸೂರ್ಯ ಮಾರಿಯಮ್ಮ ಗುಡಿಗೆ ಬಂದಾಗ ಅಲ್ಲಿನ ಅರ್ಚಕರು, ಟೀಂ ಇಂಡಿಯಾ ನಾಯಕನಾದ ಬಳಿಕ ಮತ್ತೊಮ್ಮೆ ದರ್ಶನಕ್ಕೆ ಬನ್ನಿ ಎಂದು ಹೇಳಿದ್ದರು. ಅರ್ಚಕರ ಬಾಯಲ್ಲಿ ಬಂದ ಮಾತು ಕೊನೆಗೂ ಸತ್ಯವಾಗಿದೆ. ಇದೀಗ ಸೂರ್ಯಕುಮಾರ್ ಟೀಂ ಇಂಡಿಯಾ ನಾಯಕರಾಗಿದ್ದಾರೆ. ಜೊತೆಗೆ ದಕ್ಷಿಣ ಕನ್ನಡದ ದೇವಸ್ಥಾನಗಳಿಗೆ ಭೇಟಿ ನೀಡಲು ಮತ್ತೆ ಬಂದಿದ್ದಾರೆ.

- Advertisement -

Latest Posts

Don't Miss