ಕೆಲವೊಂದು ಬಾರಿ ಸಣ್ಣ ವಿಚಾರಕ್ಕೆ ಏನೆಲ್ಲಾ ಘಟನೆ ನಡೆದು ಹೋಗುತ್ತೆ ಅನ್ನೋದನ್ನ ನಾವು ನೊಡಿದ್ದೇವೆ. ಇದೀಗ ದಾವಣಗೆರೆಯಲ್ಲೂ ಅಂತಹದ್ದೇ ಒಂದು ಘಟನೆ ನಡೆದಿದೆ. ಕುರ್ ಕುರೇ ವಿಚಾರವಾಗಿ 10 ಕ್ಕೂ ಹೆಚ್ಚು ಮಂದಿ ಆಸ್ಪತ್ರೆ ಪಾಲಾಗಿದ್ದಾರೆ. ಆ ಬಗ್ಗೆ ಹೇಳ್ತೀವಿ ಇಂದಿನ ಈ ವೀಡಿಯೋದಲ್ಲಿ.
ಹೌದು ಈ ವಿಚಾರ ಶಾಕ್ ಅನ್ಸಿದ್ರೂ ಕೂಡ ಇದು ನಿಜ . ಕುರ್ ಕುರೇ ವಿಚಾರವಾಗಿ 2 ಕುಟುಂಬಗಳ ಮಡುವೇ ಮಾರಾಮಾರಿಯೇ ನಡೆದು ಹೋಗಿದೆ. ಅಲ್ಲದೇ 10 ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೀತಾ ಇದ್ದಾರೆ. ಅಲ್ಲದೇ 25 ಮಂದಿ ಊರನ್ನೇ ಬಿಟ್ಟು ಹೋಗಿದ್ದಾರೆ.
ಅಂದಹಾಗೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೊನ್ನೆಬಾಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕ್ಷುಲಕ ಕಾರಣಕ್ಕೆ ಮಾರಾಮಾರಿಯಾಗಿ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಹೊನ್ನೇಬಾಗಿಯ ಅತೀಫ್ ಉಲ್ಲಾ ಫ್ಯಾಮಿಲಿ ಹಾಗೂ ಸದ್ದಾಂ ಫ್ಯಾಮಿಲಿ ನಡುವೆ ದೊಡ್ಡ ಜಗಳವೇ ನಡೆದಿದೆ.
ಅತೀಪ್ ಉಲ್ಲಾ ಅದೇ ಗ್ರಾಮದಲ್ಲಿ ಸಣ್ಣದೊಂದು ಕಿರಾಣಿ ಅಂಗಡಿ ಇಟ್ಟುಕೊಂಡಿದ್ದರು. ಅತೀಫ್ ಉಲ್ಲಾ ಅಂಗಡಿಯಲ್ಲಿ ಸದ್ದಾಂ ಕುಟುಂಬದ ಮಕ್ಕಳು ಕುರ್‌ಕುರೇ ಖರೀದಿ ಮಾಡಿದ್ದಾರೆ. ಎಕ್ಸಪರಿಯಾದ ಕುರ್‌ಕುರೇ ಮಾರಾಟ ಮಾಡಿದ್ದೀಯಾ ಬೇರೆಯದ್ದು ಕೊಡು ಅಂತ ಕೇಳಿದ್ದಕ್ಕೆ ಎರಡು ಕುಟುಂಬಸ್ಥರ ನಡುವೆ ಗಲಾಟೆಯಾಗಿದೆ. ಈ ಸಮಯದಲ್ಲಿ ಅತೀಫ್ ಹಾಗೂ ಸದ್ದಾಂ ಕುಟುಂಬಸ್ಥರು ನಡುವೆ ವಾಗ್ವಾದ ನಡೆದಿದೆ. ಮಾತಿನ ಚಕಮಕಿ ಮೀತಿ ಮೀರಿ ಎರಡು ಕುಟುಂಬದ ಸದಸ್ಯರು ಪರಸ್ಪರ ಕೈ ಕೈ ಮೀಲಾಯಿಸಿದ್ದಾರೆ.
ಇನ್ನು ರಸ್ತೆ ಬದಿ ಹೋಟೆಲ್ ಇಟ್ಟುಕೊಂಡು ಸದ್ದಾಂ ಫ್ಯಾಮಿಲಿ ಜೀವನ ನಡೆಸುತ್ತಿದ್ದರು. ವಾಗ್ವಾದ ಮತ್ತು ಗಲಾಟೆ ಹಿನ್ನೆಲೆ ಅತೀಫ್ ಮೇಲೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಸದ್ದಾಂ ದೂರು ದಾಖಲಿಸಿದ್ದಾರೆ. ಅದೇ ದ್ವೇಷ ಇಟ್ಟುಕೊಂಡು ಅತೀಫ್ ಕುಟುಂಬದ 30ಕ್ಕೂ ಹೆಚ್ವು ಜನರಿಂದ ಸದ್ದಾಂ ಕುಟುಂಬಸ್ಥರ ಮೇಲೆ ಹಲ್ಲೆ ಹಾಗೂ ಹೋಟೆಲ್ ಧ್ವಸಂ ಮಾಡಿರೋದಾಗಿ ಆರೋಪ ಕೇಳಿಬಂದಿದೆ.
ಎರಡು ಕಡೆಯವರ ಅಂಗಡಿಗಳು ಧ್ವಂಸ ಆಗಿದೆ . ಇನ್ನೂ ಗಲಾಟೆಯನ್ನು ಬಿಡಿಸಲು ಬಂದವರ ಮೇಲೆ ಹಲ್ಲೆ ಮಾಡಲಾಗಿದೆ. ಎರಡು ಕಡೆಯವರಿಂದ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳದಲ್ಲಿ ಪೊಲೀಸರ ಭಿಗಿ ಭದ್ರತೆ ಇದೆ. ಇನ್ನೂ ಬಂಧನ ಭೀತಿಯಿಂದ 25ಕ್ಕೂ ಹೆಚ್ಚು ಜನ ಗ್ರಾಮವನ್ನು ತೊರೆದಿದ್ದಾರೆ. ಕೂಡಲೇ ಹಲ್ಲೆ ಮಾಡಿದವರನ್ನು ಬಂಧಿಸಿ ಶಿಕ್ಷೇ ಕೊಡಿಸುವಂತೆ ಆಗ್ರಹ ಕೂಡ ಕೇಳಿಬಂದಿದೆ.