Sunday, September 8, 2024

Latest Posts

ನಟನ ಬಿಗ್‌ಬಾಸ್ ನಿರೂಪಣೆ ಬಗ್ಗೆ ನೆಟ್ಟಿಗರಿಂದ ಟೀಕೆ: ಮೊದಲ ನಿರೂಪಕನೇ ಬೆಸ್ಟ್ ಅಂದ ಜನ

- Advertisement -

Hindi Bigg Boss: ಹಲವು ವರ್ಷಗಳಿಂದ ನೋಡುತ್ತ ಬಂದ ರಿಯಾಲಿಟಿ ಶೋನಲ್ಲಿ ಸಡನ್ನಾಗಿ ನಿರೂಪಕ ಅಥವಾ ಜಡ್ಜ್ ಚೇಂಜ್ ಆದ್ರೆ, ಶೋ ನೋಡಲು ಜನ ಅಷ್ಟೊಂದು ಕುತೂಹಲ ತೋರಿಸುವುದಿಲ್ಲ. ಏಕೆಂದರೆ ಅವರು ಮೊದಲ ನಿರೂಪಕರ ನಿರೂಪಣೆಗೆ ಹೊಂದಿಕೊಂಡಿರುತ್ತಾರೆ. ಕಡೆಗೆ ಬರುವ ನಿರೂಪಕ ಉತ್ತಮರಾಾಗಿದ್ದರೂ, ಅವರನ್ನು ಭೇಷ್ ಎನ್ನಲು ಜನ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ.

ಉದಾಹರಣೆಗೆ ನಮಗೆ ಬಿಗ್‌ಬಾಸ್ ನಿರೂಪಣೆಯನ್ನು ಕಿಚ್ಚ ಸುದೀಪ್ ಬಿಟ್ಟರೆ, ಆ ಸ್ಥಾನದಲ್ಲಿ ಯಾವುದೇ ಬೇರೆ ನಟನನ್ನು ಜಸ್ಟ್ ಇಮ್ಯಾಜಿನ್ ಮಾಡಿಕೊಳ್ಳಲು ಕೂಡ ಸಾಧ್ಯವಾಗೋದಿಲ್ಲ. ಯಾಕಂದ್ರೆ ನಾವು ಕಿಚ್ಚನ ನಿರೂಪಣೆಗೆ ಹೊಂದಿಕೊಂಡು ಬಿಟ್ಟಿದ್ದೇವೆ. ಅದೇ ರೀತಿ ಹಿಂದಿ ಬಿಗ್‌ಬಾಸ್ ಫ್ಯಾನ್ಸ್ ಕೂಡ ನಟ ಸಲ್ಮಾನ್ ಖಾನ್ ನಿರೂಪಣೆಗೆ ಹೊಂದಿಕೊಂಡಿದ್ದಾರೆ.

ಅವರ ಸ್ಥಳಕ್ಕೆ ಬೇರೆಯವರು ಬಂದರೆ, ಆ ಕೆಲಸವನ್ನು ನೀಟಾಗಿ ನಿಭಾಯಿಸಬಲ್ಲರೆಂಬ ನಂಬಿಕೆ ಅವರಿಗಿಲ್ಲ. ಅದರಂತೆ ಹಿಂದಿ ಬಿಗ್‌ಬಾಸ್ ಓಟಿಟಿಗೆ ನಟ ಅನಿಲ್ ಕಪೂರ್ ಅವರನ್ನು ಕರೆ ತರಲಾಗಿದೆ. ಆದ್ರೆ ಶೋ ಶುರುವಾಗಿ ಕೆಲವೇ ಕೆಲವು ವಾರವಾಯ್ತು. ಈಗಲೇ ಜನ ಅನಿಲ್ ಕಪೂರ್ ನಿರೂಪಣೆ ಕಳಪೆ, ಸಲ್ಮಾನ್ ಭಾಯ್ ಬೆಸ್ಟ್ ಅಂತಾ ಹೇಳ್ತಿದ್ದಾರೆ.

ಏಕೆಂದರೆ, ಬಿಗ್‌ಬಾಸ್‌ ಮನೆಯಲ್ಲಿ ನಡೆಯಬಾರದ ಘಟನೆಗಳೆಲ್ಲವೂ ನಡೆಯುತ್ತಿದೆ. ಆದರೆ ಅನಿಲ್ ಕಪೂರ್ ಮಾತ್ರ, ಅಂಥವರಿಗೆ ಬೈಯ್ಯದೇ, ವಾರ್ನಿಂಗ್‌ ಕೊಡದೇ, ಸುಮ್ಮನೆ ಕಾರ್ಯಕ್ರಮ ನಡೆಸಿಕೊಂಡು ಹೋಗುತ್ತಿದ್ದಾರೆ. ಹಾಾಗಾಗಿ ಬಿಗ್‌ಬಾಸ್ ವೀಕ್ಷಕರು, ಈ ಸ್ಥಳದಲ್ಲೇನಾದ್ರೂ ಸಲ್ಮಾನ್ ಇದ್ದಿದ್ದರೆ, ಚೆನ್ನಾಗಿ ಬೈದುಬಿಡುತ್ತಿದ್ದರು. ಜನ್ಮ ಜಾಲಾಡುತ್ತಿದ್ದರು. ಅನಿಲ್ ಕಪೂರ್ ಅಂಥದ್ದೇನೂ ಮಾಡುತ್ತಿಲ್ಲವೆಂದು ಬೇಸರ ಹೊರಹಾಕಿದ್ದಾರೆ. ಅಲ್ಲದೇ ಅನಿಲ್ ನಿರೂಪಣೆ ವೈಖರಿ ಯಾರಿಗೂ ಇಷ್ಟವಾಗುತ್ತಿಲ್ಲ.

- Advertisement -

Latest Posts

Don't Miss