ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಬಗ್ಗೆ ಟೀಕೆ: Phonepe ವಿರುದ್ಧ ಸಮರ ಸಾರಿದ ಕನ್ನಡಿಗರು

News: ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಬಗ್ಗೆ ಟೀಕೆ ಮಾಡಿದ್ದಕ್ಕಾಗಿ, ಫೋನ್ ಪೇ ಸಿಇಓ ಸಮೀರ್ ನಿಗಮ್ ವಿರುದ್ಧ ಕನ್ನಡಿಗರು ಸಮರ ಸಾರಿದ್ದಾರೆ.

ಕನ್ನಡಿಗರಿಗೆ ಉದ್ಯೋದಲ್ಲಿ ಮೀಸಲಾತಿ ನೀಡುವ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂಬ ಸುದ್ದಿ ಕೇಳುತ್ತಿದ್ದ ಹಾಗೆ, ಬೆಂಗಳೂರಿನಲ್ಲಿ ಕಂಪನಿ ಓಪನ್ ಮಾಡಿ, ಕನ್ನಡಿಗರ ಅನ್ನ ತಿನ್ನುವ ಕೆಲವು ದ್ರೋಹಿಗಳು, ಒಂದಾದ ಮೇಲೊಂದರಂತೆ ಟ್ವೀಟ್ ಮಾಡೋಕ್ಕೆ ಶುರು ಮಾಡಿದ್ದರು. ಅದರಲ್ಲಿ ಒಬ್ಬರಾದ ಫೋನ್‌ಪೇ ಸಿಇಓ ಸಮೀರ್ ನಿಗಮ್ ಕೂಡ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಕೊಡುವ ವಿರುದ್ಧ ಮಾತನಾಡಿದ್ದರು.

ನನಗೆ ಈಗ 46 ವರ್ಷ. 15 ವರ್ಷಕ್ಕೂ ಹೆಚ್ಚು ಯಾವ ರಾಜ್ಯದಲ್ಲೂ ಉಳಿದವನಲ್ಲ ನಾನು. ನನ್ನ ತಂದೆ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಅವರನ್ನು ದೇಶದಾದ್ಯಂತ ಕೆಲಸದಲ್ಲಿ ನಿಯೋಜನೆ ಮಾಡುತ್ತಿದ್ದರು. ಅಂಥವರ ಮಕ್ಕಳು ಕರ್ನಾಟಕದಲ್ಲಿ ಕೆಲಸ ಮಾಡಲು ಅರ್ಹರಲ್ಲವೇ..? ನಾನು ಒಂದು ಸಂಸ್ಥೆಯನ್ನು ಕಟ್ಟಿದ್ದೇನೆ. ದೇಶಾದ್ಯಂತ 25 ಸಾವಿರ ಮಂದಿಗೆ ಉದ್ಯೋಗ ನೀಡಿದ್ದೇನೆ. ನನ್ನ ಮಕ್ಕಳು ಅವರ ತವರುನಗರದಲ್ಲಿ ಕೆಲಸ ಮಾಡಲು ಅರ್ಹರಲ್ಲವೇ..? ನಾಚಿಕೆಗೇಡು. ಎಂದು ನಿಗಮ್ ಪೋಸ್ಟ್ ಮಾಡಿದ್ದರು.

ಈ ಪೋಸ್ಟ್‌ಗೆ ವಿರುದ್ಧವಾಗಿ ಕನ್ನಡಿಗರು ಈಗ ಸಮರ ಸಾರಿದ್ದು, ನಿಮ್ಮ ಮೊಬೈಲ್‌ನಲ್ಲಿ ಫೋನ್‌ಪೇ ಆ್ಯಪ್ ಇದ್ದಲ್ಲಿ, ಅದನ್ನು ಡಿಆ್ಯಕ್ಟಿವೇಟ್ ಮಾಡಿ, ಫೋನ್‌ಪೇಗೆ 1 ರೇಟಿಂಗ್ಸ್ ಕೊಟ್ಟು, ಆ್ಯಪ್ ಡಿಲೀಟ್ ಮಾಡಿ ಎಂದು ಕರೆ ನೀಡಲಾಗಿದೆ.

About The Author