International News: ಮೆಕ್ಸಿಕೋ ದಲ್ಲಿ ಹೀಗೊಂದು ವಿಶೇಷ ಘಟನೆ ನಡೆದಿದೆ. ಮೆಕ್ಸಿಕನ್ ಮೇಯರ್ ಒಬ್ಬ ಮೊಸಳೆಯನ್ನು ಮದುವೆಯಾಗಿ ಅಚ್ಚರಿ ಮೂಡಿಸಿದ ಘಟನೆ ನಡೆದಿದೆ.
ಈ ಮದುವೆ ನಡೆದದ್ದು ದಕ್ಷಿಣ ಮೆಕ್ಸಿಕೊದ ಸಣ್ಣ ಪಟ್ಟಣ ಸ್ಯಾನ್ ಪೆಡ್ರೊ ಹುವಾಮೆಲುಲಾದಲ್ಲಿ. ಚೊಂಟಲ್ ಸಮುದಾಯಕ್ಕೆ ಸೇರಿದ ಜನರು ಈ ಪ್ರದೇಶದಲ್ಲಿ ವಾಸಿಸುತ್ತಾರೆ. ಈ ಪಟ್ಟಣದ ಮೇಯರ್ ವಿಕ್ಟರ್ ಹ್ಯೂಗೋ ಸೋಸಾ ಅವರು ಸಂಪ್ರದಾಯದಂತೆ ‘ಅಲಿಸಿಯಾ ಆಡ್ರಿಯಾನಾ’ ಎಂಬ ಹೆಸರಿನ ಹೆಣ್ಣು ಮೊಸಳೆ ಜೊತೆ ಹಸೆಮಣೆ ಏರಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಈ ವೀಡಿಯೋ ಕೂಡಾ ಇದೀಗ ವೈರಲ್ ಆಗುತ್ತಿದೆ.
ಇನ್ನು ಮೆಕ್ಸಿಕೋ ಸಂಪ್ರದಾಯದಲ್ಲಿ ಮೊಸಳೆಯನ್ನು ಮದುವೆಯಾದರೆ ಅದೃಷ್ಟ ತರುತ್ತದೆ ಎಂಬುದಾಗಿ ಮೇಯರ್ ಗೆ ಹೇಳಲಾಗಿತ್ತಂತೆ ಈ ಕಾರಣದಿಂದಲೇ ಮೇಯರ್ ಈ ವಿವಾಹವಾಗಿದ್ದಾನೆ ಎಂದು ಹೇಳಲಾಗಿದೆ.
The mayor of Mexico’s San Pedro Huamelula married a crocodile as part of a ritual to usher in a good harvest pic.twitter.com/JYByIWYbRb
— Reuters (@Reuters) July 2, 2023
Spain: ಭಾರ ಜಾಸ್ತಿ ಇದೆಯೆಂದು ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿದ ಪೈಲೆಟ್