- Advertisement -
www.karnatakatv.net:ರಾಜ್ಯ- ಉತ್ತರಕನ್ನಡಜಿಲ್ಲೆ ಕಾರವಾರದ ದಾಂಡೇಲಿಯ ಕೋಗಿಲಬನ ಗ್ರಾಮಕ್ಕೆ ಒಂದು ಬೃಹತ್ ಮೊಸಳೆ ಎಂಟ್ರಿ ಕೊಟ್ಟಿದೆ. ಇಂದು ಬೆಳಗ್ಗೆ ರಸ್ತೆಯಲ್ಲಿ ನಿಧಾನವಾಗಿ ಹೆಜ್ಜೆ ಹಾಕುತ್ತಾ, ಕಾಣಿಸಿಕೊಂಡ ಬೃಹತ್ ಗಾತ್ರದ ಮೊಸಳೆಯನ್ನ ನೋಡಿ ಜನ ಗಾಬರಿಯಾಗಿದ್ದಾರೆ. ಕಾಳಿ ನದಿಯಿಂದ ಗ್ರಾಮಕ್ಕೆ ಬಂದಿದ್ದ ಮೊಸಳೆ ರಸ್ತೆಯುದ್ದಕ್ಕೂ ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಸಂಚಾರ ನಡೆಸಿದೆ. ಅದೃಷ್ಟವಶಾತ್ ಯಾರ ಮೇಲೆಯೂ ದಾಳಿ ನಡೆಸಿಲ್ಲ. ಆದ್ರೂ, ಅಲ್ಲಿದ್ದ ಜನ ಭಯದಿಂದಲೇ ವಿಡಿಯೋ ಸೆಲ್ಫಿ ಕ್ಲಿಕ್ಕಿಸಿದ್ದಾರೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಮೊಸಳೆಯನ್ನ ಸೆರೆ ಹಿಡಿದು, ಜನರ ಆತಂಕವನ್ನ ದೂರ ಮಾಡಿದ್ದಾರೆ.
- Advertisement -