ಪ್ರಕೃತಿ ವಿಕೋಪಗಳಿಂದ ರೈತರು ಬೆಳೆದಿರುವ ಬೆಳೆಗಳು ಸರಿಯಾದ ಬೆಳೆಯದೆ ರೈತರಿಗೆ ನಷ್ಟ ಅನುಭವಿಸುವಂತಾಗುತ್ತಿದೆ. ಅಂತಹ ಸಂದರ್ಭದಲ್ಲಿ ಸರ್ಕಾರವು ನೀಡುವ ವಿಮೆಯ ಮೊತ್ತವು ರೈತರಿಗೆ ಸಹಾಯವಾಗುತ್ತದೆ. ರೈತರು ತಾವು ಬೆಳೆದ ಬೆಳೆಗಳಿಗೆ ಜುಲೈ ತಿಂಗಳ ಒಳಗಾಗಿ ಬೆಳೆ ವಿಮೆ ಮಾಡಿಸಿಕೊಳ್ಳಬೇಕು.
ಕರ್ನಾಟಕ ರೈತ ಸುರಕ್ಷಾ ಪ್ರಧಾನ್ ಮಂತ್ರಿ, ಫಸಲ್ ಭಿಮಾ ಯೋಜನೆಯ ಬೆಳೆ ವಿಮೆ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಅತಿವೃಷ್ಟಿ, ಅನಾವೃಷ್ಟಿ, ಸೇರಿದಂತೆ ಹಲವಾರು ಕಾರಣಗಳಿಂದ ರೈತರಿಗರ ಬೆಳೆ ನಷ್ಟ ಉಂಟಾದಾಗ ರೈತರಿಗೆ ವಿಮಾ ರಕ್ಷಣೆ ಮತ್ತು ಆರ್ಥಿಕ ಬೆಂಬಲ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.
ಮುಸುಕಿನ ಜೋಳ, ಭತ್ತ, ಜೋಳ, ಸಜ್ಜೆ, ನವಣೆ, ತೊಗರಿ, ಹೆಸರು, ಸೂರ್ಯಕಾಂತಿ, ಎಳ್ಳು, ಶೇಂಗಾ, ಹತ್ತಿ ಬೆಳೆಗಳಿಗೆ ಇದೇ ತಿಂಗಳ 31ರೊಳಗೆ ರೈತರು ವಿಮೆ ಮಾಡಿಸಿಕೊಳ್ಳಲು ಕೊನೆ ದಿನಾಂಕವಾಗಿದೆ. ಹೆಸರು ಬೆಳೆಗೆ ಜುಲೈ 15 ವಿಮಾ ಕಟ್ಟುವ ಕೊನೆಯ ದಿನವಾಗಿದ್ರೆ, ಸೂರ್ಯಕಾಂತಿ ಬೆಳೆಗೆ ಜುಲೈ16ರ ಕೊನೆ ದಿನವಾಗಿದೆ.
ದ್ರಾಕ್ಷಿ, ದಾಳಿಂಬೆ, ಮಾವು ಹಾಗೂ ಹಸಿ ಮೆಣಸಿನಕಾಯಿ ಬೆಳೆಗಳಿಗೆ ಬೆಳೆವಿಮೆ ಪಾವತಿಸಲು ಜುಲೈ 31ರವರೆಗೆ ಅವಕಾಶ ನೀಡಲಾಗಿದೆ. ರೈತರು ಕೊನೆಯ ದಿನಾಂಕದೊಳಗೆ ಬೆಳೆ ವಿಮೆ ಮಾಡಿಸಿಕೊಳ್ಳಿ ಬೆಳೆಗಳನ್ನು ಆಯಾ ತಾಲ್ಲೂಕಿಗೆ ವಿಂಗಡಣೆ ಮಾಡಲಾಗಿದೆ.
ಹಾಗಾದ್ರೆ ಅರ್ಜಿ ಸಲ್ಲಿಸಲು ಯಾವೆಲ್ಲಾ ದಾಖಲೆಗಳು ಬೇಕು ಅಂತಾ ನೋಡುವುದಾದರೆ.. ಜಮೀನಿನ ಪಹಣಿ ಅಂದರೆ ಉತಾರ್, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಬೇಕಾಗಿದೆ. ನಿಮ್ಮ ಹತ್ತಿರದ ಸಿಎಸ್‍ಸಿ ಕೇಂದ್ರ ಅಥವಾ ಗ್ರಾಮ್ ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.