www.karnatakatv.net :ರಾಯಚೂರು : ಜಿಲ್ಲೆಯಲ್ಲಿ 3 ದಿನಗಳಿಂದ ಸುರಿದ ಬಾರಿ ಮಳೆಯಿಂದ ಬೆಳೆಗಳು ನಾಶವಾಗಿವೆ.
ಹೌದು.. ಮಳೆಯಿಂದ ರೈತರಲ್ಲಿ ಖುಷಿಯನ್ನು ಕಾಣುವ ಹೋತ್ತಲ್ಲೆ ಈಗ ಮಳೆಯಿಂದಲೇ ಬೆಳೆದ ಬೆಳೆಗಳು ನಾಶವಾಗುತ್ತಿರುವುದು ಬೆಸರವನ್ನು ತಂದಿದೆ. ರಾಯಚೂರಿನ ಹುಣಿಸಿಹಾಳಹುಡ, ರಘುನಾಥಹಳ್ಳಿಯಲ್ಲಿ ಮಳೆಯಿಂದ ಹೆಚ್ಚು ಬೆಳೆ ಹಾನಿಯಾಗಿವೆ.
ಹತ್ತಿ, ಭತ್ತ, ತೊಗರಿ ಬೆಳೆಗಳು ಮಳೆಯಿಂದ ಹೊಲಗಳಲ್ಲಿ ಮಳೆ ನೀರು ತುಂಬಿ ಬೆಳೆಗಳು
ಕೊಳೆಯುತ್ತಿವೆ. ಅತೀಯಾದ ಮಳೆಗೆ ಜಮೀನುಗಳೆಲ್ಲ ಕೆರೆಯಂತಾಗಿವೆ, ಇನ್ನೂ ಜಮೀನುಗಳಲ್ಲಿ ನೀರು ಹರಿಯುತ್ತಿರುವುದರಿಂದ ಬೆಳೆಗಳಿಗೆ ನಾನಾ ರೋಗ ಬಾಧೆ ಬರುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ.
ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಅತೀವೃಷ್ಟಿಯಿಂದ ಹಾನಿ ಸಾದ್ಯತೆ ಎಚ್ಚು ಕಾಡುತ್ತಿದ್ದು, ಬೆಳೆಹಾನಿಯಿಂದ ಕಂಗಾಲಾಗಿರುವ ಜಿಲ್ಲೆಯ ರೈತರಿಗೆ ಸರ್ಕಾರ ಸಮಸ್ಯೆ
ಪರಿಹರಿಸುತ್ತದೆಯೇ ಎಂದು ನೋಡಬೇಕಿದೆ.
ಅನಿಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು