ಮಂತ್ರಾಲಯಕ್ಕೆ ಹರಿದು ಬಂದ ಕೋಟಿ – ಕೋಟಿ ಕಾಣಿಕೆ!

ಮಂತ್ರಾಲಯಕ್ಕೆ ರಾಘವೇಂದ್ರ ಸ್ವಾಮಿಯ ಭಕ್ತರು ಅಪಾರ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಹಲವರ ಬದುಕಲ್ಲಿ ರಾಯರು ಪವಾಡ ಮಾಡಿದ್ದಾರೆ ಅಂತ ಭಕ್ತರು ನಂಬಿದ್ದಾರೆ. ಹೀಗಾಗಿ ಮಂತ್ರಾಲಯಕ್ಕೆ ಹೋಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಮಂತ್ರಾಲಯದಲ್ಲಿ ಹುಂಡಿ ಎಣಿಸುವ ಕಾರ್ಯ ನಡೆದಿದ್ದು, ಕೇವಲ 21 ದಿನಗಳಲ್ಲಿ 3.06 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಮಂತ್ರಾಲಯದಲ್ಲಿ ನವೆಂಬರ್ ಹಾಗೂ ಡಿಸೆಂಬರ್ ತಿಂಗಳ 21 ದಿನಗಳಲ್ಲಿ 3,6,81,661 ರೂ. ಕಾಣಿಕೆ ಬಂದಿದೆ.

ಗುರುರಾಘವೇಂದ್ರ ಸ್ವಾಮಿ ಮಠಕ್ಕೆ ಎರಡು ತಿಂಗಳಲ್ಲಿ ಕೋಟ್ಯಂತರ ರೂಪಾಯಿ ಕಾಣಿಕೆ ಸಂಗ್ರಹವಾಗಿದ್ದು, ಕಾಣಿಕೆಯಲ್ಲಿ 2,97,44,661 ರೂ. ಕರೆನ್ಸಿ ನೋಟುಗಳು ಹಾಗೂ 9,37,000 ರೂ. ನಾಣ್ಯಗಳು ಕೂಡ ಇವೆ. ಅಲ್ಲದೇ, 23 ಗ್ರಾಂ ಚಿನ್ನ, 490 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಹುಂಡಿಯಲ್ಲಿ ಪತ್ತೆಯಾಗಿವೆ

About The Author