ಸರೋವರಕ್ಕೆ ಮಗಳನ್ನು ಎಸೆದು ಕೊಂದ ಕ್ರೂರ ತಾಯಿ !

ರಾಜಸ್ಥಾನದ ಅಜ್ಮೀರ್ನ ಅನಾ ಸಾಗರ್ ಸರೋವರದ ಬಳಿ ತಾಯಿ ತನ್ನ  ಮಗುವನ್ನು ಕೊಲೆ ಮಾಡಿದ ಭೀಕರ ಘಟನೆ ಬೆಳಕಿಗೆ ಬಂದಿದೆ. ಮಹಿಳೆ, ತನ್ನ ಮೂರು ವರ್ಷದ ಮಗಳನ್ನು ಬೆಂಚಿನ ಮೇಲೆ ಮಲಗಿಸಿ ನಿದ್ರೆ ಬಂದ ನಂತರ, ಆಕೆಯೇ ಮಗಳನ್ನು ಸರೋವರಕ್ಕೆ ತಳ್ಳಿದ್ದಾಳೆ. ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ ಮತ್ತು ಪ್ರಕರಣದ ತನಿಖೆ ಮುಂದುವರಿಸಿದೆ.

ಆರೋಪಿಯನ್ನು ಅಂಜಲಿ ಅಲಿಯಾಸ್ ಪ್ರಿಯಾ ಸಿಂಗ್ ಎಂದು ಗುರುತಿಸಲಾಗಿದೆ. ಆಕೆ ಮೂಲತಃ ಉತ್ತರ ಪ್ರದೇಶದ ಬನಾರಸ್ ಜಿಲ್ಲೆಯ ಸಕುಲ್ಪುರದವಳಾಗಿ ತಿಳಿದು ಬಂದಿದೆ. ಪೊಲೀಸರು ಮಾಹಿತಿ ನೀಡಿರುವಂತೆ, ಮಂಗಳವಾರ ತಡರಾತ್ರಿ ಅನಾ ಸಾಗರ್ ಸರೋವರದ ಬಳಿ ಕೆಲವು ಗಂಟೆಗಳ ಕಾಲ ಅಂಜಲಿ ಮತ್ತು ಮಗು ಹತ್ತಿರದಲ್ಲಿದ್ದಾಗ ಈ ಕೃತ್ಯ ನಡೆಯಿತು.

ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆಯಿಂದ, ರಾತ್ರಿ 10 ರಿಂದ ಬೆಳಗಿನ 1:30 ರವರೆಗೆ ಮಗು ಅಂಜಲಿ ಜೊತೆ ಇರುವುದನ್ನು ದೃಢಪಟ್ಟಿದ್ದಾರೆ. ನಂತರ, ವಿಚಾರಣೆಯ ವೇಳೆ ಅಂಜಲಿ ತನ್ನ ಮಗಳನ್ನು ರೇಲಿಂಗ್ ಕಾಣದ ಭಾಗದಿಂದ ಸರೋವರಕ್ಕೆ ತಳ್ಳಿದ್ದಾಳೆ ಎಂದು ಒಪ್ಪಿಕೊಂಡಿದ್ದು, ನಂತರ ಪೊಲೀಸರು ಮಗುವಿನ ಶವವನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಗಮನಿಸಿದ್ದಂತೆ, ಅಂಜಲಿಯ ಪತಿ ಈಗ ಬನಾರಸ್‌ನಲ್ಲಿ ಅವಳ ನಾಪತ್ತೆಯ ಬಗ್ಗೆ ದೂರು ದಾಖಲಿಸಿದ್ದಾರೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author