Wednesday, December 4, 2024

Latest Posts

ಊಟ ಮಾಡುವ ಪ್ಲೇಟ್‌ನಿಂದಲೇ ಪರಿಚಾರಿಕೆಯ ಮುಖಕ್ಕೆ ಹೊಡೆದ ಗ್ರಾಹಕ: ವೀಡಿಯೋ ವೈರಲ್

- Advertisement -

International News: ರೆಸ್ಟೋರೆಂಟ್ ಒಂದರಲ್ಲಿ ಮಹಿಳಾ ಪರಿಚಾರಿಕೆಯ ಮೇಲೆ ಗ್ರಾಹಕನೋರ್ವ, ಎಲ್ಲರೆದುರು, ಊಟದ ತಟ್ಟೆಯಿಂದಲೇ ಮುಖದ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಈ ವೀಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಆ ವ್ಯಕ್ತಿ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ಲಂಡನ್‌ ಸ್ಟ್ರಾಟ್‌ಫೋರ್ಡ್ ನಲ್ಲಿರುವ ನಂದೋಸ್ ಯುಕೆ ಎಂಬ ರೆಸ್ಟೋರೆಂಟ್ ನಲ್ಲಿ ಈ ಘಟನೆ ಮಾರ್ಚ್ ತಿಂಗಳಲ್ಲಿ ನಡೆದಿದೆ. ಆದರೆ, ಇದೀಗ ಈ ವೀಡಿಯೋ ವೈರಲ್ ಆಗಿದೆ. ಈ ರೆಸ್ಟೋರೆಂಟ್‌ಗೆ ಪತ್ನಿ ಮತ್ತು ಮಗುವಿನ ಜೊತೆ ಓರ್ವ ವ್‌ಯಕ್ತಿ ಊಟ ಮಾಡಲು ಬಂದಿದ್ದ. ಆರ್ಡರ್ ನೀಡಿದ ಬಳಿಕ, ಪರಿಚಾರಿಕೆ ಆ ಆರ್ಡರ್ ತೆಗೆದುಕೊಂಡು ಬಂದು, ಟೇಬಲ್‌ ಮೇಲೆ ಇಟ್ಟಳು.

ಆ ತಕ್ಷಣ, ಆ ವ್ಯಕ್ತಿ ಆಕೆಯ ಮುಖಕ್ಕೆ ಊಟ ಮಾಡುವ ಪ್ಲೇಟ್‌ನಿಂದ ಹೊಡೆದಿದ್ದಾನೆ. ಈ ವೇಳೆ ಅವನೊಂದಿಗೆ ಬಂದಿದ್ದ ಪತ್ನಿ ಮತ್ತು ಮಗು ಹೆದರಿ ಆ ಸ್ಥಳದಿಂದ ಎದದ್ದು ನಡೆದಿದ್ದಾರೆ. ಆತ ಬಿಲ್ ಪೇ ಮಾಡುವ ವೇಳೆಯೂ ಆತನ ಮುಖದಲ್ಲಿ ಸಿಟ್ಟಿರುವುದು ನೀವು ವೀಡಿಯೋದಲ್ಲಿ ನೋಡಬಹುದು. ಸ್ಥಳದಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಎಲ್ಲ ದೃಶ್ಯ ರೆಕಾರ್ಡ್ ಆಗಿದೆ.

ಇನ್ನು ಯಾಕೆ ಈ ವ್ಯಕ್ತಿ ಆಕೆಯ ಮುಖಕ್ಕ ಹೊಡೆದ ಎಂಬ ಬಗ್ಗೆ ವರದಿಯಾಗಿಲ್ಲ. ಊಟ ಲೇಟಾಗಿ ತಂದಿರಬಹುದು ಎಂದು ಹಲವರು ಅಂದಾಜಿಸಿದ್ದಾರೆ. ಹಸಿವಾಗಿದ್ದು, ಊಟ ಲೇಟಾಗಿ ಬಂದಿದ್ದಕ್ಕೆ, ಸಿಟ್ಟಾಗಿದ್ದ ಈತ, ಆಕೆಯ ಮೇಲೆ ಹಲ್ಲೆ ಮಾಡಿರಬಹುದು ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

ಈ ವೀಡಿಯೋ ಟ್ವೀಟರ್‌ನಲ್ಲಿ ವೈರಲ್ ಆಗುತ್ತಿದ್ದು, ಹಲ್ಲೆ ನಡೆಸಿದ ವ್ಯಕ್ತಿಯ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಈತ ಎಲ್ಲರೆದುರೇ ಈ ರೀತಿ ಮಾಡುತ್ತಿರರುವುದನ್ನು ಮತ್ತು ಇವನ ವರ್ತನೆಗೆ, ಈತನ ಪತ್ನಿ ಮತ್ತು ಮಗು ಹೆದರಿದ್ದನ್ನು ನೋಡಿದರೆ, ನಾಲ್ಕು ಗೋಡೆ ಮಧ್ಯೆ ಈತ ಹೇಗೆ ವರ್ತಿಸಬಹುದೆಂದು ನಾವು ಊಹೆ ಮಾಡಲು ಕೂಡ ಅಸಾಧ್ಯವೆಂದು ಕಾಮೆಂಟ್ ಮಾಡಿದ್ದಾರೆ.

ಇನ್ನು ಸೋಶಿಯಲ್ ಮೀಡಿಯಾದಲ್ಲಿ ಈ ವ್ಯಕ್ತಿಯ ವಿರುದ್ಧ ಜನ ಆಕ್ರೋಶ ಹೊರಹಾಕಿದ್ದು, ಈತನನ್ನು ಅರೆಸ್ಟ್ ಮಾಡಿ, ಜೈಲಿಗೆ ಹಾಕಬೇಕು ಎಂದು ಆಗ್ರಹಿಸಿದ್ದಾರೆ. ಆದರೆ ಸ್ಥಳೀಯ ಪೊಲೀಸರು ಮಾತ್ರ ಈ ಬಗ್ಗೆ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ.

- Advertisement -

Latest Posts

Don't Miss