ಭಾರತದ ವಾಹನ ಮಾರುಕಟ್ಟೆಯಲ್ಲಿ ಈ ವರ್ಷದ ಮೊದಲಾರ್ಧದಲ್ಲಿ ಉತ್ತಮ ಸಂಖ್ಯೆಯಲ್ಲಿ ಕಾರುಗಳನ್ನು ಮಾರಾಟ ಮಾಡಲಾಗಿದೆ. ಗ್ರಾಹಕರು ಕೂಡ ನಾಮುಂದು – ತಾಮುಂದು ಎಂಬಂತೆ ಖರೀದಿ ಮಾಡಿದ್ದಾರೆ. ಇತ್ತೀಚೆಗೆ, ಜನವರಿಯಿಂದ ಜೂನ್ ಅವಧಿಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡ ಪ್ರಮುಖ 10 ಕಾರುಗಳ ಪಟ್ಟಿ ಪ್ರಕಟಗೊಂಡಿದೆ. ಮಾರುತಿ ಸುಜುಕಿಯ 6, Tata 2, Hyundai ಹಾಗೂ Mahindra ಕಂಪನಿಯ ತಲಾ 1 ಕಾರುಗಳು ಸ್ಥಾನವನ್ನು ಪಡೆದಿವೆ.
ಈ ಪಟ್ಟಿಯಲ್ಲಿ Maruti Suzuki Wagonr ಹ್ಯಾಚ್‌ಬ್ಯಾಕ್ ಮೊದಲ ಸ್ಥಾನದಲ್ಲಿದೆ. ಇದೇ ವರ್ಷದ ಮೊದಲಾರ್ಧದಲ್ಲಿ ಒಟ್ಟು 1,01,424 ಯುನಿಟ್ ಕಾರುಗಳನ್ನು ಮಾರಾಟ ಮಾಡಲಾಗಿದೆ. 2024ರ ಮೊದಲಾರ್ಧದಲ್ಲಿ 99,668 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ ಸಂಖ್ಯೆಯೊಂದಿಗೆ ಹೋಲಿಕೆ ಮಾಡಿದರೆ, ಮಾರಾಟ ಪ್ರಮಾಣವು ಶೇಕಡ 2% ಪ್ರಗತಿಯಾಗಿದೆ. ಇದರ ಎಕ್ಸ್-ಶೋರೂಂ ಬೆಲೆ 5.54 ಲಕ್ಷದಿಂದ 7.62 ಲಕ್ಷ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯುತ್ತದೆ.
Hyundai Creta SUV ಯಲ್ಲಿ ಎರಡನೇ ಸ್ಥಾನದಲ್ಲಿದೆ. ಈ ವರ್ಷದ ಮೊದಲಾರ್ಧದಲ್ಲಿ ಬರೋಬ್ಬರಿ 100,560 ಯುನಿಟ್ Creta ಕಾರುಗಳನ್ನು ಮಾರಾಟಗೊಳಿಸಲಾಗದೆ. ಇದರೊಂದಿಗೆ ಮಾರಾಟ ಪ್ರಮಾಣವು ಶೇಕಡ 10% ಬೆಳವಣಿಗೆಯಾಗಿದೆ. 2024ರ ಮೊದಲಾರ್ಧದಲ್ಲಿ 91,348 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಸಾಮಾನ್ಯ ಕ್ರೆಟಾ 11 ಲಕ್ಷದಿಂದ 20 ಲಕ್ಷ ಹಾಗೂ Creta electric 18 ಲಕ್ಷದಿಂದ 24 ಲಕ್ಷ ದರವನ್ನು ಪಡೆದಿದೆ.
Maruti Suzuki Dzire ೩ನೇ ಸ್ಥಾನದಲ್ಲಿದೆ, ಸರಿ ಸುಮಾರು 96,101 ಯುನಿಟ್ ಕಾರುಗಳನ್ನು ಮಾರಾಟ ಮಾಡಲಾಗಿದೆ. Maruti Suzuki Brezza SUV ೪ನೇ ಸ್ಥಾನದಲ್ಲಿದೆ ಮತ್ತು ಇದೇ ವರ್ಷದ ಮೊದಲಾರ್ಧದಲ್ಲಿ 93,729 ಯುನಿಟ್ ಕಾರುಗಳ ಮಾರಾಟವಾಗಿದೆ. Maruti Suzuki Swift ಹ್ಯಾಚ್‌ಬ್ಯಾಕ್ ೫ನೇ ಸ್ಥಾನದಲಿದೆ ಮತ್ತು 93,098 ಯುನಿಟ್ ಕಾರುಗಳು ಮಾರಾಟ. Maruti Suzuki Ertiga mpv ೬ನೇ ಸ್ಥಾನದಲ್ಲಿದೆ. ಸರಿ ಸುಮಾರು 91,991 ಕಾರುಗಳ ಮಾರಾಟ. Maruti Suzuki Fronx ೭ನೇ ಸ್ಥಾನದಲ್ಲಿದೆ ಮತ್ತು 88,066 ಯುನಿಟ್ ಕಾರುಗಳನ್ನು ಮಾರಾಟ ಮಾಡಲಾಗಿದೆ. ಈಗೇ ಈ ಎಲ್ಲಾ ಕಾರುಗಳು ವರ್ಷದ ಮೊದಲಾರ್ಧದಲ್ಲಿ ಭರ್ಜರಿ ಸೇಲ್ ಆಗಿ ಟಾಪ್ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ