Saturday, September 14, 2024

Latest Posts

Hubballi : ಅವಳಿನಗರದಲ್ಲಿ ಹೆಚ್ಚಿದ ಸೈಬರ್ ಪ್ರಕರಣಗಳು

- Advertisement -

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚುತ್ತಲೇ ಇವೆ. ಅದೆಷ್ಟೋ ಜಾಗೃತಿ ಮೂಡಿಸಿದರೂ ಜನರು ಮಾತ್ರ ಜಾಗೃತರಾಗುತ್ತಿಲ್ಲ. ಅವಳಿನಗರದಲ್ಲಿ ಕೋಟ್ಯಾಂತರ ರೂಪಾಯಿ ಕಳೆದುಕೊಂಡಿರುವವರಲ್ಲಿ ಬುದ್ಧಿವಂತರೇ ಹೆಚ್ಚಾಗಿರುವ ಸ್ಪೋಟಕ ಮಾಹಿತಿಯೊಂದು ಬೆಳಕಿಗೆ ಬಂದಿದೆ. ಅಷ್ಟಕ್ಕೂ ಏನಿದು ಸ್ಟೋರಿ ಅಂತೀರಾ ತೋರಸ್ತಿವಿ ನೋಡಿ.

ಕೆಲಸ ಕೊಡಿಸುವುದಾಗಿ ಕರೆ ಮಾಡಿ ನಂಬಿಸುವುದು, ಹಣ ಡಬಲ್ ಮಾಡುವ ನೆಪ ಹೇಳಿ ಹಾಗೂ ಆನ್ ಲೈನ್ ಮಾರ್ಕೆಟಿಂಗ್ ಹೆಸರಲ್ಲಿ ವಂಚಿಸುವ ವಂಚಕರು ಹುಬ್ಬಳ್ಳಿ ಧಾರವಾಡ ಅವಳಿನಗರದ ಜನರಲ್ಲಿ ಆತಂಕವನ್ನು ಹುಟ್ಟು ಹಾಕಿದ್ದಾರೆ. ಎಂ.ಎನ್. ಸಿ ಕಂಪನಿ, ಬ್ಯಾಂಕ್ ಸಿಬ್ಬಂದಿ, ಮ್ಯಾನೇಜರ್ ಹೆಸರಲ್ಲಿ ಕರೆ ಮಾಡಿ ಮಕ್ಮಲ್ ಟೋಫಿ ಹಾಕಿರುವ ಅದೆಷ್ಟೋ ಪ್ರಕರಣಗಳನ್ನು ನೋಡಿದ್ದೇವೆ. ಅದರಲ್ಲೂ ವಿದ್ಯಾವಂತ ನಾಗರಿಕರೇ ಹೆಚ್ಚು ಮೋಸ ಹೋಗುತ್ತಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ. ಈಗಾಗಲೇ ಪೊಲೀಸ್ ಕಮೀಷನರೇಟ್ ಸಾಕಷ್ಟು ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಿದೆ. ಹೀಗಿದ್ದರೂ ಜನರು ಮಾತ್ರ ಮೋಸ ಹೋಗುವುದ ಮಾತ್ರ ಕಡಿಮೆಯಾಗುತ್ತಿಲ್ಲ. ಈ ಬಗ್ಗೆ ಪೊಲೀಸ್ ಆಯುಕ್ತರೇ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ ನೋಡಿ..

ಇನ್ನೂ ಕೆಲ‌ದಿನಗಳ ಹಿಂದೆ ಹುಬ್ಬಳ್ಳಿ ಸೈಬರ್ ಕ್ರೈಂ ಠಾಣೆಯಲ್ಲಿ 5 ಲಕ್ಷ ಆನ್‌ಲೈನ್ ವಂಚನೆಯಾದ ಕುರಿತು ಪ್ರಕರಣವೊಂದು ದಾಖಲಾಗಿತ್ತು. ಅದರ ಜಾಡು ಹಿಡಿದು ಹೊರಟ ಇಲಾಖೆಗೆ ವಂಚಕರ ಜಾಲ ದೇಶದೆಲ್ಲೆಡೆ ವಿಸ್ತರಿಸಿರುವುದು ಪೊಲೀಸರಿಗೆ ತಿಳಿದು ಬಂದಿತ್ತು. ಸೈಬರ್ ಮೂಲಕ ವಂಚಿಸಿದ ಹಣ 37 ವಿವಿಧ ಬ್ಯಾಂಕ್‌ಗಳ‌ ಖಾತೆಗಳಿಗೆ ವರ್ಗಾವಣೆಯಾಗಿದ್ದು ಬೆಳಕಿಗೆ ಬಂದಿತ್ತು. ಅದರಾಳಕ್ಕೂ ತನಿಖೆ ಕೈಗೊಂಡಾಗ, 37 ಖಾತೆಗಳಿಂದ 270ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳಿಗೆ ಕೋಟ್ಯಾಂತರ ರೂಪಾಯಿ ಸಕಾರಣವಿಲ್ಲದೆ ವಹಿವಾಟು ಆಗಿರುವುದು ಕಂಡು ಬಂದಿದ್ದು,ಈ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಿ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇಷ್ಟೆಲ್ಲಾ ಮಾಹಿತಿ ಸಾರ್ವಜನಿಕರಿಗೆ ಇದ್ದರೂ ಕೂಡ ಜನರು ಮಾತ್ರ ಜಾಗೃತರಾಗುತ್ತಿಲ್ಲ.

 

ಒಟ್ಟಿನಲ್ಲಿ ಸೈಬರ್ ವಂಚನೆ ಪ್ರಕರಣದ ನಿಯಂತ್ರಣದಲ್ಲಿ ಸಾರ್ವಜನಿಕರೇ ಜಾಗೃತರಾಗಬೇಕಿದೆ. ಅಲ್ಲದೇ ಅಪರಿಚಿತರೊಂದಿಗೆ ವ್ಯವಹರಿಸುವ ಮುನ್ನ ಹಾಗೂ ದೂರವಾಣಿಯಲ್ಲಿ ಮಾಹಿತಿ ಹಂಚಿಕೊಳ್ಳುವಾಗ ಎಚ್ಚರ ವಹಿಸುವ ಕಾರ್ಯವನ್ನು ಮಾಡಬೇಕಿದೆ.

ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ.

- Advertisement -

Latest Posts

Don't Miss