Thursday, October 30, 2025

Latest Posts

ಆಂಧ್ರ, ತೆಲಂಗಾಣದಲ್ಲಿ ಜಲಪ್ರಳಯ

- Advertisement -

ಮೊಂಥಾ ಚಂಡಮಾರುತದ ತೀವ್ರತೆಗೆ ಆಂಧ್ರಪ್ರದೇಶ ರಾಜ್ಯದಲ್ಲಿ ಇಬ್ಬರು ಬಲಿಯಾಗಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ 304 ಮಂಡಲಗಳಲ್ಲಿ, 87 ಸಾವಿರ ಹೆಕ್ಟೇರ್‌ ಬೆಳೆಗಳು, 380 ಕಿಲೋ ಮೀಟರ್‌ ರಸ್ತೆಗಳು ಮತ್ತು 14 ಸೇತುವೆಗಳು ಹಾನಿಯಾಗಿವೆ.

ಹತ್ತಿ, ಭತ್ತ, ಮೆಕ್ಕೆಜೋಳ, ಉದ್ದು ಜೊತೆಗೆ 59 ಸಾವಿರ ಹೆಕ್ಟೇರ್‌ನಲ್ಲಿದ್ದ ಬೆಳೆಗಳು ಜಲಾವೃತವಾಗಿವೆ. 78 ಸಾವಿರದ 796 ರೈತರು ಬೆಳೆ ಹಾನಿ ನಷ್ಟಕ್ಕೆ ಒಳಗಾಗಿದ್ದಾರೆ. ಬಿರುಗಾಳಿಗೆ ಬಾಳೆ ಮರಗಳು ನೆಲಸಮವಾಗಿವೆ. ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಹಾವು ಕಡಿತದ 8 ಪ್ರಕರಣಗಳು ದಾಖಲಾಗಿವೆ.

1434 ಹಳ್ಳಿಗಳು ಮ್ತು 48 ಪುರಸಭೆಗಳಲ್ಲಿ 18 ಲಕ್ಷ ಜನರು ಸಂತ್ರಸ್ತರಾಗಿದ್ದಾರೆ. 1209 ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಈಗಾಗಲೇ 16 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್‌ ಮಾಡಲಾಗಿದೆ. ಆಂಧ್ರ ಸರ್ಕಾರದಿಂದ ಮೀನುಗಾರರು, ನೇಕಾರರಿಗೆ, 50 ಕೆ.ಜಿ. ಅಕ್ಕಿ, 1 ಕೆ.ಜಿ. ಬೇಳೆ, 1 ಲೀಟರ್‌ ಎಣ್ಣೆ, 1 ಕೆ.ಜಿ. ಈರುಳ್ಳಿ, 1 ಕೆ.ಜಿ. ಆಲೂಗೆಡ್ಡೆ, 1 ಕೆ.ಜಿ. ಸಕ್ಕರೆ ವಿತರಣೆ ಮಾಡಲಾಗ್ತಿದೆ.

ತೆಲಂಗಾಣದ ನಲ್ಗೊಂಡದಲ್ಲಿ ಸರ್ಕಾರಿ ಗುರುಕುಲ ಶಾಲೆಗೆ ನೀರು ನುಗ್ಗಿದ್ದು, 500 ವಿದ್ಯಾರ್ಥಿಗಳು, 26 ಶಿಕ್ಷಕ ಮತ್ತು ಶಿಕ್ಷಕೇತರ ವರ್ಗದ ಸಿಬ್ಬಂದಿಯನ್ನು ಸ್ಥಳಾಂತರಿಸಲಾಗಿದೆ.

- Advertisement -

Latest Posts

Don't Miss