ಆಂಧ್ರ, ತೆಲಂಗಾಣ, ಒಡಿಶಾದಲ್ಲಿ ಮೊಂಥಾ ಚಂಡಮಾರುತ ಪ್ರಳಯದ ಭೀತಿ ಸೃಷ್ಟಿಸಿದೆ. ಆದ್ರೆ, ಕರ್ನಾಟಕದ ಹಲವೆಡೆ ಮಳೆ ಅಬ್ಬರ ನಿಂತಿದ್ದು ಬಿಸಿಲು ಆರಂಭವಾಗಿದೆ. ಇನ್ಮುಂದೆ ಕೆಲವೇ ಕೆಲವು ಕಡೆ ಹೊರತುಪಡಿಸಿ ಉಳಿದೆಲ್ಲಾ ಕಡೆ, ಒಣಹವೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೀದರ್, ಕಲಬುರಗಿ, ವಿಜಯಪುರದಲ್ಲಿ ಮಳೆಯಾಗಲಿದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಯಾದಗಿರಿ, ರಾಯಚೂರು, ಕೊಪ್ಪಳ, ಹಾವೇರಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಭಾಲ್ಕಿ, ಔರಾದ್ನಲ್ಲಿ ಹೆಚ್ಚು ಮಳೆಯಾಗಿದೆ. ಹುಮ್ನಾಬಾದ್, ಬೀದರ್, ಚಿಂಚೋಳಿ, ಕಮಲಾಪುರ, ತರೀಕೆರೆ, ಮೂಡುಬಿದಿರೆ, ಪೊನ್ನಂಪೇಟೆ, ಗೇರುಸೊಪ್ಪ, ಗುರುಮಿಟ್ಕಲ್, ಮಂಗಳೂರು, ಸೈದಾಪುರ, ಸೇಡಂ, ಉಪ್ಪಿನಂಗಡಿ, ವಿರಾಜಪೇಟೆಯಲ್ಲಿ ಸಾಧಾರಣ ಮಳೆಯಾಗಲಿದೆ.
ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರಿನಲ್ಲಿ ಒಣಹವೆ ಇರಲಿದೆ.
ಬೆಂಗಳೂರಿನಲ್ಲಿ ಶುಭ್ರ ಆಕಾಶವಿದ್ದು, 24.3ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.9ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ಇದೆ. 2 ದಿನಗಳಿಂದ ಬೆಳಗ್ಗೆಯೆಲ್ಲಾ ಬಿಸಿಲು ಇದ್ರೆ, ಸಂಜೆಯಾಗುತ್ತಿದ್ದಂತೆ ಚಳಿ ಶುರುವಾಗಿದೆ. ಇಷ್ಟು ದಿನ ಮಳೆ ಅಂತಿದ್ದ ಜನರೀಗ ಚಳಿಯಿಂದ ನಡುಗುವಂತಾಗಿದೆ.

