Monday, December 23, 2024

Latest Posts

Dharshan : ಡಿ ಬಾಸ್ ಸಿನಿ ರಂಗಕ್ಕೆ 26 ವರ್ಷಗಳ ಸಂಭ್ರಮ…! ಸಂಭ್ರಮಕ್ಕೆ ಅಭಿಮಾನಿಗಳ ವಿಭಿನ್ನ ಪ್ರಯತ್ನ..!

- Advertisement -

Film News : ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರರಂಗಕ್ಕೆ ಎಂಟ್ರಿ  ಕೊಟ್ಟು 26 ವರ್ಷಗಳೇ ಕಳೆದಿದೆ. ದರ್ಶನ್ ಅಂದ್ರೆ ಮಾಸ್ ಬಾಕ್ಸಾಫೀಸ್ ಸುಲ್ತಾನ್ ಮಾಸ್ ಕಮರ್ಷಿಯಲ್ ಸಿನಿಮಾಗಳಿಂದಲೇ ಅಭಿಮಾನಿಗಳಿಗೆ ಹೆಚ್ಚು ಹತ್ತಿರವಾದರು. ಸಿನಿ ಲೋಕಕ್ಕೆ ಎಂಟ್ರಿ ಕೊಟ್ಟು ಹಿಟ್ ಕೊಟ್ಟ ದಚ್ಚು  ಗೆ ಇದೀಗ ಸಿನಿರಂಗದಲ್ಲಿ  26 ವರ್ಷ ಪೂರೈಸಿದ ಸಂಭ್ರಮ. ಈ ಸಂಭ್ರಮವನ್ನು ಸೋಶಿಯಲ್  ಮೀಡಿಯಾದಲ್ಲಿ ದಚ್ಚು ಅಭಿಮಾನಿಗಳು ವಿಭಿನ್ನವಾಗಿ  ಆಚರಿಸುತ್ತಿದ್ದಾರೆ. 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 26 ವರ್ಷ ಕಳೆದಿದೆ. ದರ್ಶನ್  ಖ್ಯಾತ ಖಳನಟ ತೂಗುದೀಪ ಶ್ರೀನಿವಾಸ್ ಮಗನಾದರೂ ಚಿತ್ರರಂಗಕ್ಕೆ ಲೈಟ್ ಬಾಯ್ ಆಗಿ ಪ್ರವೇಶಿಸುವಂತಾಯಿತು. ಮುಂದೆ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿ ನಂತರ ಹೀರೊ ಆಗಿ ಸಕ್ಸಸ್ ಕಂಡರು. ಮುಂದೆ ಬಾಕ್ಸಾಫೀಸ್ ಸುಲ್ತಾನ್ ಎನಿಸಿಕೊಂಡರು.

ಮಾಸ್ ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ನೆಲೆ ಕಂಡುಕೊಂಡ ದರ್ಶನ್ ಇತ್ತೀಚಿನ ವರ್ಷಗಳಲ್ಲಿ ಕಥೆಗಳ ಆಯ್ಕೆಯಲ್ಲಿ ಪ್ರಯೋಗ ಮಾಡುತ್ತಿದ್ದಾರೆ. ಪೌರಾಣಿಕ, ಐತಿಹಾಸಿಕ ಸಿನಿಮಾಗಳಲ್ಲಿ ನಟಿಸಿ ಗೆಲ್ಲುತ್ತಿದ್ದಾರೆ. ಈಗಾಗಲೇ 50ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ದರ್ಶನ್ ದೊಡ್ಡ ಅಭಿಮಾನಿಗಳ ಬಳಗ ಸೃಷ್ಟಿಸಿಕೊಂಡಿದ್ದಾರೆ. ತಮ್ಮ ನೇರ ನಡೆ, ನುಡಿ, ಸಹಾಯಗುಣ ಹಾಗೂ ಪ್ರಾಣಿ ಪ್ರೇಮದಿಂದಲೂ ದರ್ಶನ್ ತಮ್ಮ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ ದಚ್ಚು.

ಚಿತ್ರರಂಗದಲ್ಲಿ ಸಾಕಷ್ಟು ಏಳುಬೀಳು ಕಂಡು ದರ್ಶನ್ ಈಗ ಸೂಪರ್ ಸ್ಟಾರ್ ಪಟ್ಟಕ್ಕೇರಿದ್ದಾರೆ. 1997ರಲ್ಲಿ ಬಂದ ‘ಮಹಾಭಾರತ’ ಚಿತ್ರದಲ್ಲಿ ದರ್ಶನ್ ಮೊದಲ ಬಾರಿಗೆ ಪುಟ್ಟ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು. ಮುಂದೆ ಮೂರ್ನಾಲ್ಕು ವರ್ಷ ಐದಾರು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಿದ್ದರು.

ಪಿ. ಎನ್ ಸತ್ಯ ನಿರ್ದೇಶನದ ‘ಮೆಜೆಸ್ಟಿಕ್’ ಸಿನಿಮಾದಲ್ಲಿ ದರ್ಶನ್ ಹೀರೊ ಆಗಿ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದರು. ಕರಿಯ, ದಾಸ, ಕಲಾಸಿಪಾಳ್ಯ ಹೀಗೆ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿ ಮಾಸ್ ಪ್ರೇಕ್ಷಕರ ಮನಗೆದ್ದರು. ಲಾಂಗ್ ಹಿಡ್ದು ಸೂಪರ್ ಸಕ್ಸಸ್ ಕಂಡ ನಟರಲ್ಲಿ ದರ್ಶನ್ ಕೂಡ ಒಬ್ಬರು. ಸೋತಾಗಲೆಲ್ಲಾ ಮತ್ತೆ ಮತ್ತೆ ಎದ್ದು ಬಂದ ದರ್ಶನ್  ಈಗ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ರಾಜನಂತೆ ಮೆರೆಯುತ್ತಿದ್ದಾರೆ.

‘ಲಾಲಿಹಾಡು’ ರೀತಿಯ ಸಿನಿಮಾಗಳಲ್ಲಿ ನಟಿಸಿ ಪ್ರಯೋಗ ಮಾಡಿದ್ದರು. ಆದರೆ ಅಷ್ಟಾಗಿ ಸಕ್ಸಸ್ ಸಿಗಲಿಲ್ಲ. ಬಳಿಕ ಮಾಸ್ ಸಿನಿಮಾಗಳಲ್ಲೇ ಹೆಚ್ಚು ನಟಿಸುತ್ತಾ ಹೋದರು. ‘ಸಾರಥಿ’, ‘ಬುಲ್‌ಬುಲ್’, ‘ನವಗ್ರಹ’, ‘ಯಜಮಾನ’ ಹೀಗೆ ಹಲವು ಸಿನಿಮಾಗಳು ಹಿಟ್ ಲಿಸ್ಟ್ ಸೇರಿದವು. ಪೌರಾಣಿಕ, ಐತಿಹಾಸಿಕ ಪಾತ್ರ ಆರಂಭದಲ್ಲಿ ಒಂದಷ್ಟು ರೊಮ್ಯಾಂಟಿಕ್ ಸಿನಿಮಾಗಳಲ್ಲಿ ನಟಿಸೋ ಪ್ರಯತ್ನ ಮಾಡಿದ ದರ್ಶನ್ ಬಳಿಕ ಅಂತಹ ಕಥೆಗಳನ್ನು ಆಯ್ಕೆ ಮಾಡಿಕೊಳ್ಳಲಿಲ್ಲ.

‘ಕ್ರಾಂತಿ ವೀರಸಂಗೊಳ್ಳ ರಾಯಣ್ಣ’ ಆಗಿ 11 ವರ್ಷಗಳ ಹಿಂದೆ ಬಾಕ್ಸಾಫೀಸ್ ಶೇಕ್ ಮಾಡಿದ್ದರು. ‘ಕುರುಕ್ಷೇತ್ರ’ ಸಿನಿಮಾದಲ್ಲಿ ದುರ್ಯೋಧನನಾಗಿ ಅಬ್ಬರಿಸಿ ಗೆದ್ದರು. ದರ್ಶನ್ ಚಿತ್ರರಂಗದಲ್ಲಿ 26 ವರ್ಷ ಪೂರೈಸಿದ ಸಂಭ್ರಮವನ್ನು ಅಭಿಮಾನಿಗಳು ಆಚರಿಸುತ್ತಿದ್ದಾರೆ. ಸ್ಪೆಷಲ್ ಡಿಸಿಪಿ ಡಿಸೈನ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. ಇತ್ತೀಚೆಗೆ ದರ್ಶನ್ ತಮ್ಮ ಅಭಿಮಾನಿಗಳಿಗಾಗಿ ಎದೆ ಮೇಲೆ ‘ನನ್ನ ಪ್ರೀತಿಯ ಸೆಲೆಬ್ರಿಟೀಸ್’ ಎಂದು ಟ್ಯಾಟೂ ಹಾಕಿಸಿಕೊಂಡಿದ್ದರು. ನನ್ನ ಎದೆಯಲ್ಲಿ ನನ್ನ ಅಭಿಮಾನಿಗಳು ಇದ್ದಾರೆ ಎಂದು ಸಾರಿ ಹೇಳಿದ್ದರು. ಅಭಿಮಾನಿಗಳು ಅದೇ ಅರ್ಥದಲ್ಲಿ ಸಿಡಿಪಿ ಡಿಸೈನ್ ಮಾಡಿದ್ದು ವೈರಲ್ ಆಗುತ್ತಿದೆ. ಸದ್ಯ ದರ್ಶನ್ ‘ಕಾಟೇರ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನೇನು ದಸರಾ  ಸಮಯಕ್ಕೆ  ಈ ಚಿತ್ರ ತೆರೆಕಾಣಲಿದೆ ಎಂಬ ಮಾಹಿತಿಯೂ ಇದೆ.

Goldenstar Ganesh: ಗಣೇಶನಿಗೆ ವಿಘ್ನ ತಂದಿಟ್ಟ ಕಟ್ಟಡ ಕಾಮಗಾರಿ

Bollywood: ‘ಕಾಲ್ ಮಿ ಬೇ’ ಚಿತ್ರದಲ್ಲಿ ಅನನ್ಯ ಪಾಂಡೆ ಮತ್ತು ಗುರ್ಫತೇ ಪಿರ್ಜಾದಾ ಅವರೊಂದಿಗೆ ವೀರ್ ದಾಸ್

Mollywood: ಚಲನಚಿತ್ರ ನಿರ್ಮಾಪಕ ಸಿದ್ದಿಕ್ ಹೃದಯಾಘಾತ

- Advertisement -

Latest Posts

Don't Miss