Film News:
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ವಭಾವನೆ ಹಾಗೆ ತಾನು ಬೆಳೆದು ತನ್ನ ಜೊತೆ ಇರುವವರನ್ನು ಬೆಳೆಸುವಂತಹ ಗುಣ. ಬೆನ್ನು ತಟ್ಟಿ ಬಾನೆತ್ತರಕ್ಕೆ ಅವರನ್ನು ಬೆಳೆಸುತ್ತಾರೆ ಡಿ ಭಾಸ್. ಇಲ್ಲೂ ಅಂತಹ ಸಪರ‍್ಟೀವ್ ಸನ್ನಿವೇಶ ನಡೆದಿದೆ. ಆದ್ರೆ ಇಲ್ಲಿ ಬಜಾರ್ ಹುಡ್ಗ ದರ್ಶನ್ ಕಾಲಿಗೆ ಬಿದ್ದಿದ್ದಾರೆ.
ದರ್ಶನ್ ಹಾಗೂ ಧನ್ವೀರ್ ನಡುವೆ ಗುರು ಶಿಷ್ಯರ ಬಾಂಧವ್ಯ ಇದೆ. ದರ್ಶನ್ ಧನ್ವೀರ್ ಅಣ್ಣ ಅಂತಲೇ ಕರೀತಾರೆ. ಪ್ರತಿ ಸಿನಿಮಾದಲ್ಲೂ ದರ್ಶನ್ ಬಜಾರ್ ಹುಡುಗನಿಗೆ ಸಾತ್ ನೀಡುತ್ತಲೇ ಬಂದಿದ್ದಾರೆ. ಅವರ ನಡುವಿನ ಅವಿನಾಭಾವ ಸಂಬಂಧದಿಂದಲೇ ರ‍್ಶನ್ ಧನ್ವೀರ್ ಪ್ರತಿ ಸೆಲೆಬ್ರೇಶನ್ ಗೂ ಜೊತೆಯಾಗ್ತಾರೆ.
‘ಬಜಾರ್’ ಹಾಗೂ ‘ಬೈಟು ಲವ್’ ಸಿನಿಮಾಗಳಿಂದ ಭರವಸೆ ಮೂಡಿಸಿರುವ ಯುವ ನಟ ಧನ್ವೀರ್ ಗೌಡ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಧನ್ವೀರ್ ಹುಟ್ಟುಹಬ್ಬದ ಸಂಭ್ರಮದಲ್ಲೇ ಜಯತರ‍್ಥ ನರ‍್ದೇಶನದ ‘ಕೈವ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಕೂಡ ರಿಲೀಸ್ ಆಗಿತ್ತು. ಸಂಜೆ ಚಾಲೆಂಜಿಂಗ್ ಸ್ಟಾರ್ ರ‍್ಶನ್ ಜೊತೆ ಕೇಕ್ ಕತ್ತರಿಸಿ ಧನ್ವೀರ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ತಾನು ಬೆಳೆದು ತನ್ನವರನ್ನು ಬೆಳೆಸುವ ಗುಣ ಚಾಲೆಂಜಿಂಗ್ ಸ್ಟಾರ್ ರ‍್ಶನ್ ಅವರದ್ದು. ಯುವನಟರನ್ನು ಬೆಂಬಲಿಸುವಲ್ಲಿ ರ‍್ಶನ್ ಸದಾ ಮುಂದೆ ನಿಲ್ಲುತ್ತಾರೆ. ಸಾಕಷ್ಟು ಹೊಸ ಪ್ರತಿಭೆಗಳ ಸಿನಿಮಾ ಕರ‍್ಯಕ್ರಮಗಳಿಗೆ ಬಂದು ಶುಭ ಹಾರೈಸಿದ್ದಾರೆ. ಧನ್ವೀತ್ ನಟನೆಯ ‘ಬಜಾರ್’ ಚಿತ್ರಕ್ಕೂ ಡಿ ಬಾಸ್ ಸಾಥ್ ಕೊಟ್ಟಿದ್ದರು. ಆಡಿಯೋ ರಿಲೀಸ್ ಕರ‍್ಯಕ್ರಮಕ್ಕೆ ಬಂದು ಶುಭ ಹಾರೈಸಿದ್ದರು. ಅಷ್ಟೇ ಅಲ್ಲ ಥಿಯೇಟರ್‌ಗೆ ಬಂದು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ನಟನೆ ಬಗ್ಗೆ ಧನ್ವೀರ್‌ಗೆ ಒಂದಷ್ಟು ಟಿಪ್ಸ್ ಕೂಡ ಕೊಟ್ಟಿದ್ದರು ಎಂದು ಹೇಳಲಾಗುತ್ತಿದೆ.
ದರ್ಶನ್ ಹಾಗೂ ಧನ್ವೀರ್ ನಡುವೆ ಗುರು ಶಿಷ್ಯರ ಬಾಂಧವ್ಯ ಇದೆ. ರ‍್ಶನ್‌ನ ಧನ್ವೀರ್ ಅಣ್ಣ ಅಂತಲೇ ಕರೀತಾರೆ. ಆರ್‌ಆರ್ ನಗರದ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಲ್ಲಿ ಧನ್ವೀರ್ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಬರ್ತ್ಡೇ ಪಾರ್ಟಿಯಲ್ಲಿ ನಟ ದರ್ಶನ್ ಕೂಡ ಭಾಗಿ ಆಗಿದ್ದಾರೆ. ಕೇಕ್ ಕಟ್ ಮಾಡಿ ರ‍್ಶನ್ ಕಾಲಿಗೆ ಬಿದ್ದು ಧನ್ವೀರ್ ಆಶರ‍್ವಾದ ಪಡೆದುಕೊಂಡಿದ್ದಾರೆ. ರ‍್ಯಾಪರ್ ಆಲ್‌ಓಕೆ, ಹಾಸ್ಯ ನಟ ಶಿವರಾಜ್ ಕೆ. ಆರ್ ಪೇಟೆ ಸೇರಿದಂತೆ ಧನ್ವೀರ್ ಗೌಡ ಆಪ್ತರು ಪರ‍್ಟಿಯಲ್ಲಿ ಭಾಗವಹಿಸಿದ್ದರು. ಈ ವಿಡಿಯೋ ಮತ್ತು ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.
ರಮೇಶ್ ಅರವಿಂದ್ ಹುಟ್ಟು ಹಬ್ಬಕ್ಕೆ ವಿಶ್ ಮಾಡಲು ಬಯಸುವಿರಾ..?! ಇಲ್ಲಿದೆ ಫೋನ್ ನಂಬರ್..!