Sunday, March 3, 2024

Latest Posts

ಭಾರತ ಹಾಗೂ ಆಸಿಸ್ ಫೈನಲ್ ಪಂದ್ಯಕ್ಕೆ ಚಿಯರ್ ಮಾಡೋಕೆ ಬರ್ತಿದ್ದಾರೆ ‘ಡಿ’ ಬಾಸ್

- Advertisement -

Bengaluru News: ಬೆಂಗಳೂರು : ಇಡೀ ವಿಶ್ವವೇ ಕಾತರದಿಂದ ಕಾಯುತ್ತಿರುವ ವಿಶ್ವಕಪ್ ಫೈನಲ್ಗೆ ಕ್ಷಣಗಣನೆ ಶುರುವಾಗಿದೆ. ಇಂದಿನ ಭಾರತ ಹಾಗೂ ಆಸ್ಟ್ರೇಲಿಯಾ ಫೈನಲ್ ಪಂದ್ಯಕ್ಕೆ ಮೆರಗು ತುಂಬಲು ನಟ ದರ್ಶನ್ ಅವರು ಆಗಮಿಸಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್ ಕನ್ನಡ ಕಾಮೆಂಟ್ರಿ ಬಾಕ್ಸ್ನಲ್ಲಿ ಕೂತು ಪಂದ್ಯಕ್ಕೆ ಚಿಯರ್ ಮಾಡಲು ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರು ಆಗಮಿಸಿದ್ದಾರೆ. ಇಂದಿನ ಮ್ಯಾಚ್‌ನಲ್ಲಿ ನಮ್ಮ ಜೊತೆ ಇರಲಿದ್ದಾರೆ ನಟ ದರ್ಶನ್ ಎಂದು ಸ್ಟಾರ್ ಸ್ಪೋರ್ಟ್ಸ್ ಕನ್ನಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಕಾಂಗರೂ ಪಡೆಯನ್ನು ಕಟ್ಟಿಹಾಕುವುದಕ್ಕೆ ಭಾರತ ಸಜ್ಜಾಗಿದೆ. ಈ ಸಲ ಕಪ್ ನಮ್ದೇ ಅಂತಿರುವ ಭಾರತ ನಾಳೆಯ ಪಂದ್ಯಕ್ಕೆ ರಣತಂತ್ರ ರೂಪಿಸಿದೆ. ಕ್ರಿಕೆಟ್ ದಿಗ್ಗಜರು, ಸಿನಿಮಾ ತಾರೆಯರು ಈಗಾಗಲೇ ಭಾರತ ತಂಡಕ್ಕೆ ಶುಭಕೋರಿ, ಭಾರತ ತಂಡವನ್ನು ಹುರಿದುಂಬಿಸಿದ್ದಾರೆ.

ಇನ್ನೂ ಭಾರತ ತಂಡ ವಿಶ್ವಕಪ್ ಟ್ರೋಪಿ ಎತ್ತಿ ಹಿಡಿಯಲಿ ಅಂತ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಒಂದು ಸಾಂಗ್ ರೆಡಿ ಮಾಡಿದ್ದಾರೆ.

ಸೋಲಿಲ್ಲದ ಸರದಾರ ಭಾರತ

ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮದಗಜಗಳ ಹೋರಾಟ ನಡೆಯಲಿದ್ದು, ಕ್ರಿಕೆಟ್ ಜಗತ್ತು ಈ ಪಂದ್ಯದ ಮೇಲೆ ಚಿತ್ತ ನೆಟ್ಟಿದೆ. ವಿಶ್ವಕಪ್ ಟೂರ್ನಿಯಲ್ಲಿ ಭಾರತ ಆಡಿದ ಎಲ್ಲಾ ಪಂದ್ಯಗಳನ್ನು ಗೆಲ್ಲುವ ಮೂಲಕ ಫೈನಲ್‌ಗೆ ಬಂದಿದೆ. ಇತ್ತ, ಆಸ್ಟ್ರೇಲಿಯಾ 2 ಪಂದ್ಯ ಸೋತು 7 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಸೆಮಿಫೈನಲ್‌-2ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಫೈನಲ್‌ಗೆ ಲಗ್ಗೆ ಇಟ್ಟಿದೆ.

ಭಾರತ ವಿಶ್ವಕಪ್‌ ಗೆದ್ದರೆ 100 ಕೋಟಿ ರೂ ಬಂಪರ್‌ ಬಹುಮಾನ!: ಆಸ್ಟ್ರೋಟಾಕ್‌ ಸಿಇಒ ಘೋಷಣೆ

ಇಸ್ರೇಲ್ ಪ್ರಧಾನಿಯನ್ನು ಗುಂಡಿಕ್ಕಿ ಕೊಲ್ಲಬೇಕು ಎಂದ ಕಾಂಗ್ರೆಸ್ ಸಂಸದ.

ತಲೆತಲಾಂತರದಿಂದ ಮಠದ ಭಕ್ತರಾದ ನಾವು ಮುರುಘಾ ಶರಣರ ಜೊತೆ ಇರುತ್ತೇವೆ; ಶಾಸಕ ವಿರೇಂದ್ರ ಪಪ್ಪಿ

- Advertisement -

Latest Posts

Don't Miss