ತುಮಕೂರಿನಲ್ಲಿ “ಕ್ರಾಂತಿ” ಪ್ರಚಾರ ಜೋರೋ ಜೋರು..!
ಕನ್ನಡ ಚಿತ್ರರಂಗದಲ್ಲೀಗ ಹೊಸ ಪರ್ವ ಶುರುವಾಗಿದೆ. ಬಿಗ್ ಸ್ಟಾರ್ಸ್ಗಳ ಬಿಗ್ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸಾಗೋದಕ್ಕೆ ಸಜ್ಜಾಗ್ತಿವೆ. ಡಿ-ಬಾಸ್ ದರ್ಶನ್ ನಟನೆಯ ಕ್ರಾಂತಿ ಸಿನಿಮಾ ದಿನಕ್ಕೊಂದು ಹೊಸ ಸುದ್ದಿ ಮೂಲಕ ಕುತೂಹಲ ಮೂಡಿಸ್ತಿದೆ. ಸದ್ದಿಲ್ಲದೇ ಕ್ರಾಂತಿ ಸಿನಿಮಾತಂಡ ವಿದೇಶಕ್ಕೆ ಹಾರಿದ್ದು, ಹಾಡುಗಳ ಚಿತ್ರೀಕರಣದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಈ ಬಗ್ಗೆ ಸ್ವತಃ ಡಿಬಾಸ್ ತಮ್ಮ ಟ್ವಿಟ್ಟರ್ ಪೇಜ್‌ನಲ್ಲಿ ಅಪ್ಡೇಟ್ ನೀಡಿದ್ದು, ಸದ್ಯ ಕ್ರಾಂತಿ ಚಿತ್ರದ ಚಿತ್ರೀಕರಣವನ್ನು ಪೋಲ್ಯಾಂಡ್‌ನಲ್ಲಿ ಮಾಡ್ತಿದ್ದೇವೆ ಅಂತ ತಮ್ಮ ಸೆಲೆಬ್ರೆಟಿಗಳಿಗೆ ಧನ್ಯವಾದ ತಿಳಿಸಿದ್ರು.
ಈ ವಿಷಯ ಒಂದೆಡೆಯಾದರೆ, ಕ್ರಾಂತಿ ಸಿನಿಮಾಗಾಗಿ ಡಿ-ಭಕ್ತಗಣ ರಿಲೀಸ್ ದಿನಕ್ಕಾಗಿ ಎದುರುನೋಡ್ತಿದ್ದಾರೆ. ಶೂಟಿಂಗ್ ಮುಗಿಯೋ ಮೊದಲೇ ರಾಜ್ಯದ ಮೂಲೆ ಮೂಲೆಯಲ್ಲೂ ದರ್ಶನ್ ಅಭಿಮಾನಿಗಳು ಕ್ರಾಂತಿ ಪ್ರಚಾರ ಜೋರಾಗೇ ನಡೆಸ್ತಿದ್ದಾರೆ. ಕ್ರಾಂತಿ ಚಿತ್ರದ ಪೋಸ್ಟರ್ ಜೊತೆಗೆ ಡಿ-ಬಾಸ್ ಸೂಟು ಬೂಟು ತೊಟ್ಟಿರೋ ಹೊಸ ಫೋಟೋವನ್ನೂ ಕೂಡ ಅಭಿಮಾನಿಗಳು ಹಿಡಿದು ಪ್ರಚಾರ ನಡೆಸ್ತಿದ್ದಾರೆ. ವಿಶೇಷ ಅಂದ್ರೆ ಇಂದು ತುಮಕೂರಿನಲ್ಲಿ ಚಿನ್ನದ ರಥದಲ್ಲಿ ಡಿ-ಬಾಸ್ ಫೋಟೋ ಜೊತೆಗೆ ಕ್ರಾಂತಿ ಪೋಸ್ಟರ್ ಹಿಡಿದು ರ‍್ಯಾಲಿ ಮಾಡಿದ್ದಾರೆ ಅಭಿಮಾನಿಗಳು.
ಜಿಟಿ ಜಿಟಿ ಮಳೆಯಿದ್ದರೂ ಸಹ ಲೆಕ್ಕಿಸದೇ ಕ್ರಾಂತಿ ಪ್ರಚಾರಕ್ಕೆ ಡಿ-ಭಕ್ತಗಣ ಜಮಾಯಿಸಿದ್ದರು. ತುಮಕೂರಿನ ಟೌನ್ ಹಾಲ್ ಸರ್ಕಲ್ಲಿನಿಂದ ಬಿ.ಹೆಚ್ ಮಾರ್ಗವಾಗಿ ಬಾರ್ ಲೈನ್ ರಸ್ತೆ ಕೆಆರ್ ಬಡಾವಣೆ ೨ನೇ ಕ್ರಾಸ್‌ವರೆಗೂ ಕಾಲ್ನಡಿಗೆಯಲ್ಲಿ ಚಿನ್ನದ ರಥದೊಂದಿಗೆ ಕ್ರಾಂತಿ ಚಿತ್ರದ ಪ್ರಮೋಷನ್‌ಗಾಗಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ರು. ಮೀಡಿಯಾಗಳ ಪ್ರಚಾರವಿಲ್ಲದೇ ಬಿಡುಗಡೆಗೆ ಸಜ್ಜಾಗ್ತಿರೋ ನಟ ದರ್ಶನ್ ನಟನೆಯ ಮೊದಲ ಚಿತ್ರ “ಕ್ರಾಂತಿ” ಸಿನಿಮಾವಾಗಿದೆ.
ಆದರೆ ಮೀಡಿಯಾಗಳ ಪ್ರಚಾರಕ್ಕೂ ಮೀರಿ ತಮ್ಮ ನೆಚ್ಚಿ ನಟನ ಸಿನಿಮಾ ಕ್ರಾಂತಿಗೆ ಅಭಿಮಾನಿಗಳು ಎಲ್ಲೆಡೆ ಜೋರಾಗಿಯೇ ಪ್ರಚಾರ ಮಾಡ್ತಿದ್ದಾರೆ. ವಿ.ಹರಿಕೃಷ್ಣ ನಿರ್ದೇಶಿಸ್ತಿರೋ ಈ ಚಿತ್ರದಲ್ಲಿ ದರ್ಶನ್‌ಗೆ ನಟಿ ರಚಿತಾ ರಆಮ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ವರ್ಷಾಂತ್ಯದೊಳಗೆ “ಕ್ರಾಂತಿ” ಸಿನಿಮಾ ಭರ್ಜರಿಯಾಗಿ ತೆರೆಕಾಣಲಿದೆ.