Film News:
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಅಂದ್ರೆ ಅಭಿಮಾನಿಗಳಿಗೆ ಅದೇನೋ ಸಂಭ್ರಮ ಸಡಗರ. ತನ್ನ ಬಾಸ್ ಸಿನಿಮಾವನ್ನು ಪ್ರಚಾರ ಮಾಡುವಲ್ಲಿ ಫ್ಯಾನ್ಸ್ ಬ್ಯುಸಿಯಾಗ್ತಾರೆ. ಆದ್ರೆ ಇಲ್ಲಿ ಇನ್ನೂ ಹೆಸರೇ ನಿಗದಿಯಾಗದ ಸಿನಿಮಾಕ್ಕೆ ಅಭಿಮಾನಿಗಳು ಪ್ರಚಾರ ನೀಡ್ತಿದ್ದಾರೆ. ಅದು ಹೇಗೆ ಅಂತೀರಾ ಈ ಸ್ಟೋರಿ ನೋಡಿ….
ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ರಿಲೀಸ್ ಆದ್ರೆ ಅಭಿಮಾನಿಗಳಿಗೆ ಹಬ್ಬ. ಕರುನಾಡಿನಲ್ಲಿ ಸಂಭ್ರಮ ಮನೆ ಮಾಡಿರುತ್ತೆ . ಹೌದು ದರ್ಶನ್ ಅಭಿಮಾನಿಗಳು ತನ್ನ ಬಾಸ್ ಸಿನಿಮಾಕ್ಕೆ ಅಷ್ಟೊಂದು ಪ್ರಾಮುಖ್ಯತೆ ನೀಡ್ತಾರೆ. ದರ್ಶನ್ ಹೊಸ ಸಿನಿಮಾ ಬರುತ್ತೆ ಅಂತ ಸುಳಿವು ಸಿಕ್ರೆ ಸಾಕು ಅಭಿಮಾನಿಗಳ ಸಂತೋಷ ಹೇಳ ತೀರದು.ಅಭಿಮಾನಿಗಳೇ ತನ್ನ ನೆಚ್ಚಿನ ನಟನ ಚಿತ್ರದ ಪ್ರೊಮೋಷನ್ ನಲ್ಲಿ ತೊಡಗ್ತಾರೆ.
ಡಿ ಬಾಸ್ ಬಹು ನಿರೀಕ್ಷಿತ ಚಿತ್ರ ಕ್ರಾಂತಿ ಸಿನಿಮಾಕ್ಕಾಗಿ ಕರುನಾಡೇ ಕಾತರದಿಂದ ಕಾಯುತ್ತಿದೆ. ಇದುವರೆಗೂ ಕೆಲವೊಂದು ಪೋಸ್ಟರ್ ಮಾತ್ರ ರಿಲೀಸ್ ಮಾಡಿ ಪ್ಯಾನ್ಸ್ ಕ್ಯೂರಿಯಾಸಿಟಿಗೆ ನಿತ್ಯ ಕಾವು ಕೊಡುತ್ತಿರೋ ಕ್ರಾಂತಿ ಯಾವಾಗ ರಿಲೀಸ್ ಆಗತ್ತೋ ಎಂದು ಕಾದು ಕುಳಿತಿದ್ದಾರೆ ಅಭಿಮಾನಿಗಳು. ಜೊತೆಗೆ ಕೇವಲ ಪೋಸ್ಟರ್ ಹಾಗು ಸಣ್ಣದೊಂದು ಚಿತ್ರದ ವೀಡಿಯೋ ತುಣುಕು ಮಾತ್ರ ಬಿಡುಗಡೆ ಮಾಡಿದ ಚಿತ್ರತಂಡ ಇನ್ನೂ ರಿಲೀಸ್ ಬಗ್ಗೆ ಮಾಹಿತಿ ನೀಡಿಲ್ಲ. ಆದರೂ ಫ್ಯಾನ್ಸ್ ಮಾತ್ರ ಕ್ರಾಂತಿ ಪ್ರಚಾರದಲ್ಲಿ ತೊಡಗಿದರು. ಜೊತೆಗೆ ಇದೀಗ ದರ್ಶನ್ ಹೆಸರೇ ಇಡದ ಹೊಸ ಚಿತ್ರಕ್ಕೂ ಅಭಿಮಾನಿಗಳು ಪ್ರಚಾರದಲ್ಲಿ ತೊಡಗಿದ್ದಾರೆ.
ಹೌದು ಡಿ ಬಾಸ್ ದರ್ಶನ್ 56ನೇ ಸಿನಿಮಾಕ್ಕೆ ಇದೀಗಲೇ ಮುಹೂರ್ತ ನೆರವೇರಿದೆ. ಕನಸಿನ ರಾಣಿ ಮಾಲಾಶ್ರೀ ಮಗಳು ಕೂಡಾ ಈ ಸಿನಿಮಾದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಇನ್ನೂ ಹೆಸರು ಮಾತ್ರ ಈ ಚಿತ್ರಕ್ಕೆ ನಿಗದಿಯಾಗಿಲ್ಲ. ಆದರೆ ಎಲ್ಲೆಡೆ ಡಿ 56 ಎಂಬ ಪೋಸ್ಟರ್ ಮಾತ್ರ ಸಖತ್ತಾಗೆ ಸದ್ದು ಮಾಡುತ್ತಿದೆ. ಗಣೇಶೋತ್ಸವದಲ್ಲೂ ಡಿ 56 ಹವಾ ಜೋರಾಗಿದೆ. ಅಭಿಮಾನಿಗಳು ಗಣೇಶನ ಮೂರ್ತಿಗಳ ಜೊತೆಗೆ ಬೃಹತ್ ಡಿ 56 ಪೋಸ್ಟರ್ ಪ್ರದರ್ಶಿಸಿ ಹೆಸರೇ ಇಡದ ಡಿ ಬಾಸ್ ಚಿತ್ರಕ್ಕೆ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ.