Friday, March 14, 2025

Latest Posts

Dharshan : ದರ್ಶನ್, ಕಾಲಿಗೆ ಏಟಾಗಿದ್ದರೂ ಯುಕೆ ಫ್ಲೈಟ್ ಏರಿದ್ದು ಯಾಕೆ ..?!

- Advertisement -

Film News : ಡಿ ಬಾಸ್ ಕನ್ನಡಿಗರ ಪಾಲಿಗೆ  ಅಚ್ಚು ಮೆಚ್ಚಿನ ನಟ ಇದೀಗ ತನ್ನ ಕಾಲಿಗೆ ಸ್ವಲ್ಪ ಗಾಯ ಮಾಡಿಕೊಂಡು ಸುದ್ದಿಯಾಗುವುದರ ಜೊತೆಗೆ ಮತ್ತೆ ಕಾಲು ನೋವಿನ ಜೊತೆಗೆ ವಿದೇಶಕ್ಕೆ ಹಾರಿದ್ದಾರೆ. ಅದು ಕೂಡಾ ಕೇವಲ 10  ದಿನಗಳಿಗಾಗಿ ಹಾಗಿದ್ರೆ ದರ್ಶನ್  ಮತ್ತೆ ಯಾವುದಾದರೂ ಹೊಸ ಸಿನಿಮಾದ ಶೂಟಿಂಗ್ ತೆರಳಿದ್ರಾ ವಿದೇಶ ಕ್ಕೆ ದಿಢೀರ್ ಪ್ರವಾಸ ಕೈಗೊಂಡಿದ್ದು ಯಾಕೆ ಹೇಳ್ತೀವಿ ಈ ಸ್ಟೋರಿಯಲ್ಲಿ……….

ಸದ್ಯ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿರುವ ಡಿ ಬಾಸ್ ಚಿತ್ರ ಕಾಟೇರ . ಅದಕ್ಕೂ ಮುಂಚೆ ಗರಡಿಯಲ್ಲಿ ಪ್ರೇಕ್ಷಕರಿಗೆ  ರಂಜಿಸಲು ಡಿ ಬಾಸ್ ಬರುತ್ತಿರುವುದಾದರೂ ಬಹು ನಿರೀಕ್ಷೆಯ ಚಿತ್ರ ಕಾಟೇರ.

Image

ಕಾಟೇರ ಚಿತ್ರದ ನಿರೀಕ್ಷೆಯಲ್ಲಿರೋ ಅಭಿಮಾನಿಗಳಿಗೆ ಇತ್ತೀಚೆಗೆ  ದರ್ಶನ್ ಕಾಲಿಗೆ  ಪೆಟ್ಟಾದ  ಸುದ್ದಿಯನೂ ಕೇಳಿ ಬಂದಿತ್ತು.  ಆದರೆ ಯಾವುದೇ ಚಿತ್ರದ ಶೂಟಿಂಗ್  ವೇಳೆ ಕಾಲಿಗೆ  ಗಾಯ ಆಗಿಲ್ಲ ಎಂಬುವುದಾಗಿ ನಿರ್ದೇಶಕ ತರುಣ್ ಸುಧೀರ್ ಸ್ಪಷ್ಟನೆ ನೀಡಿದ್ದರು. ಇನ್ನು ಈ ಗಾಯ ಹೇಗಾಯಿತು ಎಂಬುವುದರ ಸುಳಿವು ನೀಡಿಲ್ಲ.

ಜೊತೆಗೆ ಕಾಲಿಗೆ ಗಾಯ ಆಗಿದ್ದಂದು ಆಸ್ಪತ್ರೆ ಗೆ ಕುಂಟುತ್ತಲೇ ಹೋಗಿ ಅಭಿಮಾನಿ ಮುಖ ನೋಡಿ ಸ್ಮೈಲ್ ಮಾಡಿದ್ದ ವೋಡಿಯೋ ಫುಲ್  ವೈರಲ್  ಆಗಿತ್ತು. ದರ್ಶನ್ ಕಾಲಿಗೆ ಗಾಯವಾಗಿದ್ದ ಮರುದಿನವೇ ಶೂಟಿಂಗ್ ಸೆಟ್ ನಲ್ಲಿ ಮತ್ತೆ  ದರ್ಶನ್ ಕಾಣಿಸಿಕೊಂಡಿದ್ದರು. ಯಾರಿಗೂ ನನ್ನಿಂದ ಶೂಟಿಂಗ್ ಸೆಟ್ ನಲ್ಲಿ ತೊಂದರೆ ಆಗಬಾರದೆಂದು ಹೇಳಿ ದಚ್ಚು ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು.

Image

ಅಲ್ಲದೆ ಇದೀಗ ಕಾಟೇರ ಚಿತ್ರದ ಶೂಟಿಂಗನ್ನು 10 ದಿನಗಳ ಕಾಲ ನಿಲ್ಲಿಸಲಾಗಿದೆ. ನಟ ನಟಿಯರಿಗೆ ಬಿಡುವು ನೀಡಲಾಗಿದೆ. ಈ ಕಾರಣದಿಂದಲೇ ದರ್ಶನ್ ಇದೀಗ ಸ್ನೇಹಿತರ ಜೊತೆ  ವಿದೇಶಕ್ಕೆ ತೆರಳಿದ್ದಾರೆ. ಹೌದು ವಿಶ್ರಾಂತಿ ಪಡೆಯಲು ವಿದೇಶಕ್ಕೆ  ಹಾರಿದ್ಧಾರೆ ದರ್ಶನ್ . ಕಾಲಿಗೆ ಗಾಯವಾಗಿದ್ದು ಇದೀಗ ಕಾಟೇರ ಚಿತ್ರದ ಶೂಟಿಂಗ್ ನಿಂದ ಕೊಂಚ ಬಿಡುವು  ಮಾಡಿಕೊಂಡು ವಿದೇಶಕ್ಕೆ ಹಾರಿದ್ದಾರೆ.

ಯುಕೆ ಫೈಟ್ ನಲ್ಲಿ ಸ್ನೇಹಿತನೊಬ್ಬನ ಕ್ಯಾಮರಾಕ್ಕೂ ಫೋಸ್ ನೀಡಿದ್ದಾರೆ. 10 ದಿನಗಳ ಕಾಲ ಸಿನಿಮಾ ಚಿತ್ರೀಕರಣಕ್ಕೆ ಬ್ರೇಕ್ ನೀಡಲಾಗಿದೆ ಇದೇ ಕಾರಣದಿಂದಾಗಿ ದಚ್ಚು ಸ್ನೇಹಿತರ ಜೊತೆ ಯುಕೆಗೆ ಹಾರಿದ್ದಾರೆ. ದರ್ಶನ್  ಸ್ನೇಹಿತ ಸಚ್ಚಿದಾನಂದ್ ಮತ್ತು ಇತರ ನಾಲ್ಕು ಸ್ನೇಹಿತರೊಂದಿಗೆ ಯುಕೆ ಗೆ ಹಾರಿದ್ದಾರೆ. ಯುಕೆಗೆ ಬಂದಿಳಿದು ಸ್ನೇಹಿತನ ಕ್ಯಾಮಾರಾಕ್ಕೆ  ಫೋಸ್ ನೀಡಿದ್ದು ಇದೀಗ ಆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ಇನ್ನು  ಬಹು  ನಿರೀಕ್ಷೆಯ ಕಾಟೇರ ಚಿತ್ರ  ದಸರಾಗೆ ತೆರೆ ಮೇಲೆ  ಬರಲಿದೆ.   ತರುಣ್ ಸುದೀರ್ ನಿರ್ದೇಶನದ ಈ  ಚಿತ್ರಕ್ಕೆ ಸುಧಾಕರ್ ರಾಜ್ ಛಾಯಾಗ್ರಹಣ ವಿ  ಹರಿಕೃಷ್ಣ ಸಂಗೀತ , ಮಾಸ್ತಿ ಸಂಭಾಷಣೆ ಇದೆ. ಇನ್ನೂ  ದಸರಾಕ್ಕೂ ಮುನ್ನ ವರಮಹಾಲಕ್ಷ್ಮೀ ಇಲ್ಲ ಗಣೇಶನ ಹಬ್ಬಕ್ಕೆ ಸ್ಪೆಷಲ್  ಪೋಸ್ಟರ್ ಕೂಡಾ ರಿಲೀಸ್ ಆಗುವ ಸಾಧ್ಯತೆ ಇದೆ.

Jawan: ಜವಾನ್ ಸಿನಿಮಾದ ಹಾಡಿನ ಚಿತ್ರೀಕರಣ್ಕಕ್ಕೆ ಸುರಿದ ದುಡ್ಡು ಎಷ್ಟು ಕೋಟಿ ಗೊತ್ತಾ?

PRK Production-ಜುಲೈ 28 ರಂದು ಆಚಾರ್ ಆಂಡ್ ಕೋ ಸಿನಿಮಾ ರಿಲೀಸ್

Deepika Das : ಮರಳುಗಾಡಿನಲ್ಲಿ ಹದ್ದಿಗೆ ಚುಂಬಿಸಿದ ನಾಗಿಣಿ…!

- Advertisement -

Latest Posts

Don't Miss