ಬೆಂಗಳೂರು ನಗರದ ಬೂದಿಗೆರೆ ಕ್ರಾಸ್ ಬಳಿ ರಸ್ತೆ ಅಪಘಾತದಲ್ಲಿ ಕಾಲೇಜು ವಿದ್ಯಾರ್ಥಿನಿ ಮೃತಪಟ್ಟಿದ್ದರು. ಈ ಘಟನೆಗೆ ರಸ್ತೆ ಗುಂಡಿಯೇ ಕಾರಣ ಎಂದು ಬಿಜೆಪಿಯು ಆರೋಪಿಸಿದ್ದಾರೆ. ಆದ್ರೆ ಈಗ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಂಗಳವಾರ ಈ ಆರೋಪವನ್ನು ತಳ್ಳಿ ಹಾಕಿದ್ದು, ಈ ಹೇಳಿಕೆ “ಫೇಕ್” ಎಂದು ಟೀಕಿಸಿದ್ದಾರೆ.
ಇದು ಬಿಜೆಪಿ ಹುಟ್ಟುಹಾಕಿರುವ ಸುಳ್ಳು ಕತೆ. ನಮ್ಮ ಸರ್ಕಾರ ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿದೆ. ಈ ಆರೋಪಗಳ ಮೂಲಕ ಬಿಜೆಪಿ ಜನರಲ್ಲಿ ಭ್ರಾಂತಿ ಮೂಡಿಸಲು ಯತ್ನಿಸುತ್ತಿದೆ. ಬಿಜೆಪಿಯವರ ಕಾರಣದಿಂದಾಗಿ ಇದೆಲ್ಲವೂ ಸೃಷ್ಟಿಯಾಗಿದೆ ಎಂದು ತಿರುಗೇಟು ನೀಡಿದರು.
ಬೆಂಗಳೂರಿನ ಬೂದಿಗೆರೆ ಕ್ರಾಸ್ ಬಳಿ ಬೈಕ್‌ನಲ್ಲಿ ತೆರಳುತ್ತಿದ್ದ ಬಿಕಾಂ ವಿದ್ಯಾರ್ಥಿನಿ ರಸ್ತೆ ಗುಂಡಿ ತಪ್ಪಿಸಲು ಯತ್ನಿಸಿದಾಗ ಅವರ ಮೇಲೆ ಲಾರಿ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಘಟನೆ ಬಳಿಕ ಬೆಂಗಳೂರು ರಸ್ತೆಗಳ ದುಸ್ಥಿತಿಯು ಪ್ರಯಾಣಿಕರ ಜೀವಕ್ಕೆ ಅಪಾಯ ತಂದಿದೆ ಎಂದು ಬಿಜೆಪಿ ಟೀಕೆ ಮಾಡಿತ್ತು.
750 ಕೋಟಿ ರೂ. ನಿಗದಿ ಪಡಿಸಿ ಗುತ್ತಿಗೆದಾರರಿಗೆ ಗುಂಡಿ ಮುಚ್ಚುವ ಗಡುವು ನೀಡಿದ್ದಿರಿ. ಆದರೆ ಫಲಿತಾಂಶವೇನು? ಈ ಹಣ ಎಲ್ಲಿ ಹೋಯ್ತು? ಎಂದು ಬಿಜೆಪಿ ತನ್ನ ‘X’ ನಲ್ಲಿ ಪ್ರಶ್ನಿಸಿದೆ. ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದರಿಂದ ವಿದ್ಯಾರ್ಥಿನಿಯೊಬ್ಬಳು ಪ್ರಾಣ ಕಳೆದುಕೊಂಡಿರುವುದು ದುರದೃಷ್ಟಕರ ಎಂದು ಪೋಸ್ಟ್ ಕೂಡ ಮಾಡಿದೆ.
ಈ ಎಲ್ಲ ಆರೋಪಗಳಿಗೆ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಅಪಘಾತವನ್ನು ರಾಜಕೀಯ ನೋಡೋದು ಅತ್ಯಂತ ದುರದೈವದ ಸಂಗತಿ. ವಿದ್ಯಾರ್ಥಿನಿಯ ಸಾವಿಗೆ ನಾವು ಸಹ ಆಘಾತದಲ್ಲಿದ್ದೇವೆ. ಆದರೆ ಬಿಜೆಪಿ ಆರೋಪಗಳು ನಿರಾಧಾರ. ಪರಿಶೀಲನೆ ನಂತರ ಮಾತ್ರ ಕಾರಣ ಸ್ಪಷ್ಟವಾಗುವುದು ಎಂದು ಹೇಳಿದರು.
ವರದಿ : ಲಾವಣ್ಯ ಅನಿಗೋಳ