ಹೊಯ್ಸಳ ಆಡಿಯೋವನ್ನ ಆನಂದ್ ಆಡಿಯೋ ದಾಖಲೆಯ ಮೊತ್ತಕ್ಕೆ ಕೊಳ್ಳುವುದರ ಮೂಲಕ ಧನಂಜಯ ಟಾಪ್ ಸ್ಟಾರ್‌ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ. ಡಾಲಿ ಕರಿಯರ್‌ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿರುವ ನಮ್ಮ ಕೆಆರ್‌ಜಿ ಸ್ಟುಡಿಯೋಸ್‌ನ ಮಾಸ್ ಎಂಟರ್ಟೇನರ್ ಇದೇ ಮಾರ್ಚ್ 30ಕ್ಕೆ ನಿಮ್ಮ ಮುಂದೆ ಬರಲಿದೆ.
ಡಾಲಿ ಧನಂಜಯ ಅವರ 25ನೇ ಚಿತ್ರ ಅನ್ನುವುದು ಈ ಚಿತ್ರದ ಮತ್ತೊಂದು ವಿಶೇಷತೆಯಾಗಿದ್ದು ಅದಕ್ಕೆ ತಕ್ಕ ನಿರೀಕ್ಷೆಯನ್ನು ಮೀರಿಸುವಂತೆ ಸಿನಿಮಾ ಮೂಡಿ ಬಂದಿದೆ. ಧನಂಜಯ ಅವರ ಕರಿಯರ್‌ನಲ್ಲೇ ಅತಿ ಹೆಚ್ಚಿನ ಮೊತ್ತು ಕೊಟ್ಟು ಆಡಿಯೋ ಹಕ್ಕುಗಳನ್ನ ಆನಂದ್ ಆಡಿಯೋ ಖರೀದಿಸಿದೆ. ಅಲ್ಲಿಗೆ ಧನಂಜಯ ಕನ್ನಡದ ಟಾಪ್ ಸ್ಟಾರ್‌ಗಳ ಪಟ್ಟಿಗೆ ಸೇರಿದ್ದಾರೆ. ಕಾಂತಾರ ಮೂಲಕ ಇಡೀ ದೇಶದ ತುಂಬಾ ಹವಾ ಕ್ರಿಯೇಟ್ ಮಾಡಿರೋ ಅಜನೀಶ್ ಲೋಕನಾಥ್ ಅವರು ಹೊಯ್ಸಳನಿಗೆ ಸಂಗೀತ ನೀಡಿದ್ದಾರೆ. ಹಾಡುಗಳು ಯಾವಾಗ ಬರತ್ತಪ್ಪ ಅನ್ನೋ ಕಾಯುವಂತಹ ಪರಿಸ್ಥಿತಿ ಸೃಷ್ಟಿಸೋದಕ್ಕೆ ಇದಕ್ಕಿಂತ ಇನ್ನೇನು ಬೇಕು?
ಧನಂಜಯ ಅವರು ಖಡಕ್ ಪೋಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರ ಸಾಮಾಜಿಕ ಸಮಸ್ಯೆಗಳ ಬಗ್ಗೆ ಕೂಡಾ ಮಾತಾಡುತ್ತದೆ. ಬೆಳಗಾವಿ ಮತ್ತು ಸುತ್ತಮುತ್ತಲ ಜಾಗಗಳನ್ನ ಆಧರಿಸಿ ಹೊಯ್ಸಳ ಕಥೆಯನ್ನ ಹೆಣೆಯಲಾಗಿದೆ. ಚಿತ್ರತಂಡ ಚಿತ್ರೀಕರಣ ಮುಗಿಸಿದ್ದು ಮಾರ್ಚ್ 30ಕ್ಕೆ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಬಿಡುಗಡೆಯ ಸಿದ್ಧತೆಗಳು ನಡೆಯುತ್ತಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕೊನೆಯ ಹಂತ ತಲುಪಿವೆ. ಚಿತ್ರತಂಡ ಸದ್ಯಕ್ಕೆ ಡಬ್ಬಿಂಗ್‍ನಲ್ಲಿ ಬ್ಯುಸಿಯಾಗಿದೆ.
ಬಡವ ರಾಸ್ಕಲ್ ಚಿತ್ರದಲ್ಲಿ ಡಾಲಿ ಜೊತೆಗೆ ಮಿಂಚಿದ್ದ ಅಮೃತಾ ಅಯ್ಯಂಗಾರ್ ಅವರು ಮತ್ತೊಮ್ಮೆ ಧನಂಜಯ ಅವರಿಗೆ ಜೋಡಿಯಾಗಿದ್ದಾರೆ. ನವೀನ್ ಶಂಕರ್, ಅವಿನಾಶ್ ಬಿಎಸ್, ಮಯೂರಿ ನಟರಾಜ ಮತ್ತು ಪ್ರತಾಪ್ ನಾರಾಯಣ್ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಜಯ್ ಎನ್ ಅವರು ಬರವಣಿಗೆ-ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಕೆಆರ್‌ಜಿ ಸ್ಟುಡಿಯೋಸ್‌ನ ಕಾರ್ತಿಕ್ ಮತ್ತು ಯೋಗಿ ಜಿ ರಾಜ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ರತ್ನನ್ ಪ್ರಪಂಚ ಯಶಸ್ಸಿನ ನಂತರ ಅವರ ಮತ್ತೊಂದು ಪ್ರಯತ್ನವಾಗಿ ಈ ಚಿತ್ರ ಮೂಡಿಬರುತ್ತಿದೆ. ಹೊಂಬಾಳೆ ಫಿಲ್ಮ್ಸ್ ಖ್ಯಾತಿಯ ವಿಜಯ್ ಕಿರಗಂದೂರು ಚಿತ್ರವನ್ನ ಪ್ರೆಸೆಂಟ್ ಮಾಡುತ್ತಿದ್ದಾರೆ.