www.karnatakatv.net: ತಮಿಳುನಾಡಿನ ಸೂಪರ್ ಸ್ಟಾರ್ ರಜನಿಕಾಂತ್ ಗೆ ಅ.25ರಂದು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ದೊರಯಲಿದೆ.
ರಜನಿಕಾಂತ್ ಗೆ ಅ.25 ರಂದು ಡಬ್ಬಲ್ ಧಮಾಕ ಇದ್ದು ಒಂದೇಡೆ ಮಗಳು ಸೌಂದರ್ಯ ತಯಾರಿಸಿರುವ ‘ಹೂಟೆ’ ಆ್ಯಪ್ ಲೋಕಾರ್ಪಣೆಗೊಂಡರೆ. ಇನ್ನೊಂದೆಡೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯು ದೊರೆಯಲಿದೆ. ಈ ದಿನ 2 ವಿಶೇಷ ಕಾರ್ಯಕ್ರಮಗಳು ನಡೆಯಲಿದ್ದು, ಅದರಬಗ್ಗೆ ಟ್ವೀಟ್ ಮಾಡಿದ್ದಾರೆ. `ಅ.25ರಂದು ನಾನು ದೆಹಲಿಯಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಲಿದ್ದೇನೆ. ಅದರೊಂದಿಗೆ ನನ್ನ ಮಗಳು ತಯಾರಿಸಿರುವ ಹೂಟೆ ಆ್ಯಪ್ ಲೋಕಾರ್ಪಣೆಗೊಳ್ಳಲಿದೆ. ಆ ಆ್ಯಪ್ ಜನರಿಗೆ ಅವರ ವಿಚಾರಗಳನ್ನು ಮಾತಿನ ಮೂಲಕ ಹೇಳಿ ಕೊಳ್ಳಲು ವೇದಿಕೆ ಕಲ್ಪಿಸಲಿದ್ದು, ಅದರಲ್ಲಿ ಮೊದಲ ಧ್ವನಿ ನನ್ನದೇ ಆಗಿರಲಿದೆ’ ಎಂದು ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಭಿಮಾನಿಗಳ ಪ್ರೀತಿಯ ತಲೈವಾ, ಭಾರತದ ಅತ್ಯುನ್ನತ ಚಲನಚಿತ್ರ ಗೌರವ 51 ನೇ ದಾದಾಸಾಹೇಬ್ ಫಾಲ್ಕೆ ಅವಾರ್ಡ್ ಪಡೆಯುತ್ತಿದ್ದಾರೆ. ಪ್ರಶಸ್ತಿಯನ್ನು 2019ರ ಎಪ್ರಿಲ್ ತಿಂಗಳಿನಲ್ಲೇ ಪ್ರಕಟಿಸಲಾಗಿತ್ತಾದರೂ ಕೋವಿಡ್ ಕಾರಣದಿಂದ ಪ್ರದಾನ ಮಾಡಲು ಸಾಧ್ಯವಾಗಿರಲಿಲ್ಲ.