ಕಾವೇರಿ ನದಿಗೆ ಅಡ್ಡಲಾಗಿ ಡ್ಯಾಂ ಕಟ್ಟಿಸಬೇಕು ಎನ್ನುವ ಯೋಚನೆ ಟಿಪ್ಪು ಸುಲ್ತಾನ್‌ಗೆ ಇತ್ತು. ಆದರೆ, ಬಿಜೆಪಿಯವರಿಗೆ ಟಿಪ್ಪು ಸುಲ್ತಾನ್ ಮತ್ತು ಅಲ್ಪಸಂಖ್ಯಾತರ ವಿಚಾರ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಬರೀ ಜಾತಿ ಭೇದ ತಂದಿಡುವ ಕೆಲಸವನ್ನಷ್ಟೇ ಅವರು ಮಾಡುತ್ತಾರೆ ಎಂದು ವಸತಿ ಮತ್ತು ಅಲ್ಪಸಂಖ್ಯಾತರ ಇಲಾಖೆ ಸಚಿವ ಜಮೀರ್ ಅಹ್ಮದ್ ಖಾನ್ ಕಿಡಿಕಾರಿದರು.
ಸರ್ಕಾರ ಕೆಆರ್‌ಎಸ್ ಜಲಾಶಯಕ್ಕೆ ಟಿಪ್ಪು ಹೆಸರಿಡಲು ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ನಾಯಕರು ನೀಡಿರುವ ಹೇಳಿಕೆ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಚಿವ ಜಮೀರ್ ಅಹ್ಮದ್ ಉತ್ತರ ನೀಡಿದ್ದಾರೆ.
ಟಿಪ್ಪುಗೆ ಕಾವೇರಿ ನದಿಗೆ ಡ್ಯಾಂ ನಿರ್ಮಾಣವಾಗಬೇಕು ಎನ್ನುವ ಯೋಚನೆ ಇತ್ತು. ಆದರೆ, ಕೇವಲ ರಾಜಕೀಯ ಮಾಡುವುದು ಮಾತ್ರ ಬಿಜೆಪಿಯವರಿಗೆ ಗೊತ್ತಿದೆ ಎಂದರು. ಮುಸ್ಲಿಮರು ರಸ್ತೆಯಲ್ಲಿ ನಮಾಜ್ ಮಾಡುವುದನ್ನು ತಡೆದೆವು ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ದೊಡ್ಡದಾಗಿ ಹೇಳಿಕೆ ನೀಡಿದ್ದಾರೆ. ರಸ್ತೆಯಲ್ಲಿ ನಮಾಜ್ ಮಾಡುವುದನ್ನು ತಡೆದರೆ ನಾವು ಮನೆಯಲ್ಲೇ ಮಾಡುತ್ತೇವೆ. ಅದನ್ನು ನಿಲ್ಲಿಸಲು ಹೇಳಿ ಎಂದು ಜಮೀರ್ ಸವಾಲು ಹಾಕಿದ್ದಾರೆ.
ಮಹದೇವಪುರದ ಬಗ್ಗೆ ಕೇಳಿದ ಸಚಿವರು – ಅಭಿವೃದ್ಧಿಯಿಲ್ಲ, ಯೋಜನೆಗಳಿಲ್ಲ. ಆದರೂ ಬಿಜೆಪಿಗೆ 1.20 ಮತಗಳ ಲೀಡ್! ಹೇಗೆ ಸಾಧ್ಯ? ಇದು ಜನರ ಮತವೋ ಅಥವಾ EVM ಯಂತ್ರದ ಮಾಯಾಜಾಲವೋ? ರಾಹುಲ್ ಗಾಂಧಿ ಈ ಬಗ್ಗೆ ಅಧ್ಯಯನ ಮಾಡ್ತಿದ್ದಾರೆ. ಸಾಕ್ಷಿಗಳೂ ಇದ್ದಾವೆ. ಆಗಸ್ಟ್ 8 ರಂದು ನಾವು ಪ್ರತಿಭಟನೆ ಮಾಡ್ತೀವಿ. ಬಿಜೆಪಿಯವರು ಅಡ್ಡಿಪಡಿಸುತ್ತಿದ್ದಾರೆ. ಆದರೆ ನಾವು ಹಿಂದೆ ಸರಿಯಲ್ಲ, ನಮ್ಮ ಪ್ರತಿಭಟನೆ ಮುಂದುವರೆಯುತ್ತದೆ ಎಂದಿದ್ದಾರೆ.