ಉತ್ತರಕಾಶಿ ಜಿಲ್ಲೆ ಪ್ರಖ್ಯಾತ ಪ್ರವಾಸಿ ತಾಣ. ಸಾವಿರಾರು ಪ್ರವಾಸಿಗರು ದಿನನಿತ್ಯ ಬರುತ್ತಿರುತ್ತಾರೆ. ಆಗಸ್ಟ್ 5ರಂದು ಸಂಭವಿಸಿದ ಭೀಕರ ಮೇಘಸ್ಫೋಟದಿಂದ, ಧಾರಾಳಿ ಗ್ರಾಮ ಸರ್ವನಾಶವಾಗಿದೆ. ಪ್ರವಾಸಿಗರು ಸೇರಿ ನೂರಾರು ಜನರು ನಾಪತ್ತೆಯಾಗಿದ್ದು, ಹಲವರು ಬಲಿಯಾಗಿದ್ದಾರೆ.
ಮೇಘಸ್ಫೋಟದಿಂದ ಗುಡ್ಡವೇ ಕುಸಿದಿದ್ದು, ಪ್ರವಾಹದ ನೀರಲ್ಲಿ ಕಲ್ಲು, ಬಂಡೆ, ಮರಗಳು ತೇಲಿ ಬಂದಿದ್ವು. ಹರ್ಸಿಲ್ ಪ್ರದೇಶದಲ್ಲಿದ್ದ ಸೇನಾ ಶಿಬಿರ, ಹೋಟೆಲ್ಸ್, ರೆಸ್ಟೋರೆಂಟ್ಸ್, ಹೋಂ ಸ್ಟೇ, ಮನೆ, ಕಟ್ಟಡ, ಮಾರುಕಟ್ಟೆಯ ಗುರುತು ಸಿಗದಷ್ಟು ನಾಮಾವಶೇಷವಾಗಿದೆ. 2ನೇ ದಿನವೂ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಪೊಲೀಸರು, ಆರ್ಮಿ ಫೋರ್ಸ್ ರಕ್ಷಣಾ ಕಾರ್ಯಾಚರಣೆ ಮಾಡ್ತಿದೆ.
ಇದುವರೆಗೆ 200ಕ್ಕೂ ಹೆಚ್ಚು ಜನರನ್ನು ರಕ್ಷಿಸಿ, ಸುರಕ್ಷಿತ ಪ್ರದೇಶಕ್ಕೆ ಕಳಿಸಲಾಗಿದೆ. ಹೋಟೆಲ್, ಶಾಲೆಗಳಲ್ಲಿ ತಾತ್ಕಾಲಿಕ ಆಶ್ರಯ ಕಲ್ಪಿಸಲಾಗಿದೆ. ಅವೇಶಷಗಳಡಿ ಸಿಲುಕಿದವರ ರಕ್ಷಣೆಗೆ ಹರಸಾಹಸ ಪಡ್ತಿದ್ದಾರೆ. ಜನರ ಪತ್ತೆಗಾಗಿ ಸ್ನಿಫರ್ ನಾಯಿಗಳು ಮತ್ತು ಯಂತ್ರೋಪಕರಣಗಳನ್ನು ಬಳಸಿಕೊಳ್ಳಲಾಗ್ತಿದೆ.
ಕ್ಷಣಕ್ಷಣಕ್ಕೂ ಗಂಗಾ ನದಿ ನೀರಿನ ಮಟ್ಟ ಏರಿಕೆಯಾಗ್ತಿದ್ದು, ಉತ್ತರಕಾಶಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅಲ್ಮೋರಾ, ಪಿಥೋರಗಢ, ಚಮೋಲಿ, ರುದ್ರಪ್ರಯಾಗ್‌ನಲ್ಲೂ ಶಾಳೆಗಳು, ಅಂಗನವಾಡಿಗಳು ಕ್ಲೋಸ್ ಆಗಿವೆ. ಹರಿದ್ವಾರ ಬಳಿ ಹಳಿಗ ಮೇಲೆ ಬೃಹತ್‌ಗಾತ್ರ ಬಂಡೆಗಳು ಬಿದ್ದಿದ್ದು, ರೈಲು ಸಂಚಾರ ಅಸ್ತವ್ತಸ್ತಗೊಂಡಿದೆ. ಆಗಸ್ಟ್ 10ರವರೆಗೆ ಎಚ್ಚರಿಕೆಯಿಂದ ಇರುವಂತೆ, ಹವಾಮಾನ ಇಲಾಖೆ ಸೂಚಿಸಿದೆ.
ಹಿಮಾಚಲ ಪ್ರದೇಶದಲ್ಲೂ ಭಾರೀ ಮಳೆಯಾಗ್ತಿದ್ದು, ಮಂಡಿ ಜಿಲ್ಲೆಯಾದ್ಯಂತ ಭೂಕುಸಿತ ಹೆಚ್ಚಾಗ್ತಿದೆ. ಒಟ್ಟು 453 ರಸ್ತೆಗಳು ಬಂದ್ ಆಗಿವೆ. 192 ಮಂದಿ ಕಣ್ಮರೆಯಾಗಿದ್ದು, 1200 ಕೋಟಿ ಮೌಲ್ಯದ ಆಸ್ತಿ ಹಾನಿಯಾಗಿದೆ. ಎಡಬಿಡದೆ ಮಳೆಯಾಗ್ತಿದ್ದು, ಬಿಯಾಸ್ ಮತ್ತು ಉಪನದಿಗಳ ಆರ್ಭಟ ಜೋರಾಗಿದೆ. ಹೀಗಾಗಿ ಸಾರ್ವಜನಿಕ ಮತ್ತು ತುರ್ತು ಸೇವೆಗಳ ಸಂಚಾರ ಕಷ್ಟವಾಗಿದೆ.