Dharwad News: ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಅಕ್ರಮ ಮದ್ಯದಂಗಡಿಗಳ ಆಟ ಜೋರಾಗಿದೆ. ಅಬಕಾರಿ ನಿಯಮಗಳನ್ನೇ ಗಾಳಿಗೆ ತೂರಿ ರಾಜಾರೋಷವಾಗಿ ಎಣ್ಣೆ ಮಾರಾಟ ಮಾಡತ್ತಾರೆ. ಜನರು ಬಂದು ತಗೋತ್ತಾರೆ. ಯಾರು ಹೇಳೋರಿಲ್ಲ. ಕೇಳೋರಿಲ್ಲ. ಇಷ್ಟಾದರೂ ಸಹಿತ ಪೊಲೀಸರಾಗಲಿ, ಅಬಕಾರಿ ಇಲಾಖೆ ಅಧಿಕಾರಿಗಳಾಗಲಿ ಯಾರು ಕೂಡಾ ಬಂದು ಪ್ರಶ್ನೆ ಮಾಡುತ್ತಿಲ್ಲ. ಹೀಗಾಗಿ ಅವರು ಆಡಿದ್ದೆ ಆಟ ಎನ್ನುವ ಹಾಗೇ ಆಗಿದೆ.
ಹೀಗೆ ಪ್ರಿಮಿಯರ್ ವೈನ್ಸ್ ಎಂದು ಬೋರ್ಡ್ ಹಾಕಿಕೊಂಡು ರಾಜಾರೋಷವಾಗಿ ಮದ್ಯ ಮಾರಾಟ ಮಾಡುವ ಈ ಅಂಗಡಿಗೆ ಸರ್ಕಾರದ ಸಿಎಲ್-2 ಪರವಾನಗಿ ಇದೆ. ಇದು ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ ಇದೆ. ಆದರೆ ವಾಸ್ತವದಲ್ಲಿ ಇಲ್ಲಿ ಸಿಎಲ್ -2 ನಿಯಮಗಳನ್ನೇ ಗಾಳಿಗೆ ತೂರಿ ಭರ್ಜರಿಯಾಗಿ ಟೇಬಲ್ ಹಾಕಿ ಮದ್ಯವನ್ನು ಮಾರಾಟ ಮಾಡತ್ತಾರೆ. ಹಾಗಂತ ಪೊಲೀಸರಾಗಲಿ, ಅಬಕಾರಿ ಇಲಾಖೆಯ ಅಧಿಕಾರಿಗಳಾಗಲಿ ಕ್ರಮಕ್ಕೆ ಮುಂದಾಗುತ್ತಿಲ್ಲ.
ಅಷ್ಟೇ ಅಲ್ಲದೇ ಈ ಬಾರ್’ನಲ್ಲಿ ಖರೀದಿಸುವ ಮದ್ಯವು ಕೂಡಾ MRP ಬೆಲೆಗಿಂತ ಹೆಚ್ಚಿಗೆ ಪಡೆಯುತ್ತಾರೆ. ಇದನ್ನು ಸ್ವತಃ ಬಾರ್ ಮಾಲೀಕರೇ ಒಪ್ಪಿಕೊಳ್ಳತ್ತಾರೆ. ಜನರು ಕೂಡಾ ಆರೋಪಿಸಿದ್ದಾರೆ. ಆದರೆ ಇಲ್ಲಿ ಇಷ್ಟೇಲ್ಲ ನಡೆದರೂ ಸಹ ಅಬಕಾರಿ ಇಲಾಖೆ, ಜಿಲ್ಲಾಧಿಕಾರಿ ಕೈಕಟ್ಟಿ ಕುಳಿತ್ತಿದ್ದಾರೆ.
ಒಟ್ಟಿನಲ್ಲಿ ಮದ್ಯ ಮಾರಾಟ ವಿಷಯಕ್ಕೆ ಸಂಬಂಧಿಸಿದಂತೆ ಕುಂದಗೋಳ ತಾಲೂಕಿನ ಭಾಗದಲ್ಲಿ ದೇಶದ ಯಾವುದೇ ಕಾನೂನು ಅನ್ವಯ ಆಗತ್ತಾ ಇಲ್ಲ. ಹೀಗಾಗಿ ಜಿಲ್ಲಾಧಿಕಾರಿಗಳು ಅಬಕಾರಿ ಸಚಿವರು ಗಮನ ಹರಿಸಬೇಕಿದೆ.
ಸಂಗಮೇಶ ಸತ್ತಿಗೇರಿ, ಕರ್ನಾಟಕ ಟಿವಿ, ಧಾರವಾಡ