ರೈತರ ದಿನಾಚರಣೆ ಪ್ರಯುಕ್ತ ಡಿಬಾಸ್ ದರ್ಶನ್ ಮತ್ತು ನವರಸ ನಾಯಕ ಜಗ್ಗೇಶ್ ಸೇರಿ ಹಲವರು ರೈತರಿಗೆ ಶುಭಕೋರಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ನಟ ದರ್ಶನ್ ತುಗೂದೀಪ, ರೈತರು ನಿಜವಾದ ವೀರರಾಗಿದ್ದಾರೆ. ಏಕೆಂದರೆ ಅವರ ಸಮರ್ಪಣೆ ಮತ್ತು ಶ್ರಮದಿಂದ ಬಂಜರು ಭೂಮಿಯನ್ನು ಆಹಾರವನ್ನು ಉತ್ಪಾದಿಸುವ ಭೂಮಿಯಾಗಿ ಪರಿವರ್ತಿಸಿ, ಅವರು ತಮ್ಮ ಹೃದಯ ಮತ್ತು ಆತ್ಮವನ್ನು ಮಣ್ಣಿನಲ್ಲಿರಿಸಿ, ಅದನ್ನು ಜೀವಿಸಲು ಮತ್ತು ನಮಗೆ ಆಹಾರವನ್ನು ಕೊಡುತ್ತಾರೆ. ಅವರ ಪ್ರಯತ್ನಕ್ಕೆ ಧನ್ಯವಾದಗಳು ಮತ್ತು ಅವರ ಕಠಿಣ ಪರಿಶ್ರಮಕ್ಕೆ ನಮಸ್ಕರಿಸೋಣ.. ರೈತರ ದಿನಾಚರಣೆಯ ಶುಭಾಶಯಗಳು ಎಂದು ಶುಭಕೋರಿದ್ದಾರೆ.

ಇನ್ನು ಕಲೆ ಕಲಾವಿದರು, ಕನ್ನಡಿಗರು, ರೈತರು ಎಂದು ಸದಾ ಒಳ್ಳೆಯದನ್ನ ಬೆಂಬಲಿಸುವ ನವರಸ ನಾಯಕ ಜಗ್ಗೇಶ್ ಕೂಡ ರೈತರಿಗೆ ರೈತರ ದಿನಾಚರಣೆಯ ಶುಭಾಶಯ ಕೋರಿದ್ದಾರೆ. ಅವರು ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, ತಾತ, ಚಿಕ್ಕಪ್ಪಂದಿರು ಹೂಡುತ್ತಿದ್ದ ನೇಗಿಲ ಮೇಲೆ ಬೆಳೆದ ರೈತರ ಕುಡಿ ನಾನು. 100%ಗೆ 50% ಯುವಕರು ಈ ಕಾಯಕ ಬಿಟ್ಟು ಅಲ್ಪ ಆದಾಯಕ್ಕೆ ಪಟ್ಟಣದ ಜೀವನಕ್ಕೆ ಹೋಗಿಬಿಟ್ಟರು. ಬಣಗೂಡುತ್ತಿದೆ ಹೊಲಗದ್ದೆ ಖಾಲಿ ಕೊಟ್ಟಿಗೆ. ಒಣಗಿದೆ ಗೊಬ್ಬರದ ಗುಂಡಿ. ಓ ಮನಸೇ ಮಣ್ಣಲ್ಲಿ ಇರುವ ಸುಖ ಎಲ್ಲಿಯೂ ಸಿಗದು. ಮರಳಿ ಮಣ್ಣಿಗೆ. ಕೊಂಡು ತಿನ್ನುವುದಕ್ಕಿಂತ ಬೆಳೆದು ತಿನ್ನುವ. ಜೈ ಕಿಸಾನ್ ಎಂದು ಜಗ್ಗೇಶ ಶುಭಾಶಯ ಕೋರಿದ್ದಾರೆ.





