ದರ್ಶನ್ ಭೇಟಿಯಾದ ತಾಯಿ ಹಾಗೂ ಸಹೋದರ

ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಜೈಲು ವಾಸದಲ್ಲಿದ್ದಾರೆ.
ಅವರನ್ನು ನೋಡಲು ಇಂದು ದರ್ಶನ್ ತಾಯಿ ಮೀನಾ ತೂಗುದೀಪ, ಸಹೋದರ ದಿನಕರ್, ಪತ್ನಿ ವಿಜಯಲಕ್ಷ್ಮೀ, ಮಗ ವಿನೀಶ್ ಭೇಟಿ ನೀಡಿದ್ದರು.

ಈ ವೇಳೆ ದರ್ಶನ್ ಅವರ ತಾಯಿ ಮೀನಾ ತೂಗುದೀಪ, ಮಗ ದರ್ಶನ್ ಅವರಿಗೆ ಧೈರ್ಯ ತುಂಬಿದ್ದಾರೆ. ತಾಯಿ ಅವರನ್ನ ನೋಡುತ್ತಿದ್ದಂತೆ ದರ್ಶನ್ ಭಾವುಕರಾಗಿದ್ದಾರೆ.

ಇದು ಕಷ್ಟಕಾಲ. ಧೈರ್ಯವಾಗಿ ಇರಬೇಕು ಎಂದು ತಾಯಿ ಮೀನಾ ತೂಗುದೀಪ ಅವರು ಧೈರ್ಯ ತುಂಬಿದ್ದಾರೆ.
ಸಹೋದರ ದಿನಕರ್ ತೂಗುದೀಪ ಕೂಡ ಅಣ್ಣನಿಗೆ ಧೈರ್ಯ ತುಂಬಿದ್ದಾರೆ. ಅತ್ತ ಪತ್ನಿ ವಿಜಯಲಕ್ಷ್ಮಿ ಅವರೂ ಸಹ ದರ್ಶನ್ ಜೊತೆ ಒಂದಷ್ಟು ಮಾತಾಡಿದ್ದು, ಧೈರ್ಯದಿಂದ ಇರಿ ಎಂದಿದ್ದಾರೆ.

ಫ್ಯಾನ್ಸ್ ಪೂಜೆ- ಹರಕೆ: ಅತ್ತ ಅಭಿಮಾನಿಗಳು ದರ್ಶನ್ ಹೊರ ಬರುವಿಕೆಯನ್ನು ಎದುರು ನೋಡುತ್ತಿದ್ದಾರೆ. ಎಲ್ಲೆಡೆ ಪೂಜೆ ಸಲ್ಲಿಸಿ ಹರಕೆ ಕಟ್ಟಿಕೊಳ್ಳುತ್ತಿದ್ದಾರೆ.

About The Author