Film News:
ಡಿಬಾಸ್ ದರ್ಶನ್ ಹಾಗು ಬಜಾರ್ ಹುಡುಗ ಧನ್ವೀರ್ ಗೌಡ ಸಂಬಂಧದ ಬಗ್ಗೆ ಹೇಳೋದೆ ಬೇಕಿಲ್ಲ.ಆದ್ರೆ ಇಲ್ಲಿ ಮತ್ತೆ ಧನ್ವೀರ್ ದರ್ಶನ್ ಸ್ನೇಹಕ್ಕೆ ಸಾಕ್ಷ್ಯವೊಂದು ಸಿಕ್ಕಿದೆ. ಇದರಿಂದಾಗಿ ಕರುನಾಡೇ ಖುಷಿ ಪಟ್ಟಿದೆ. ಹಾಗಿದ್ರೆ ಏನದು ಸಂಬಂಧದ ಮತ್ತೊಂದು ಮೆಲುಕು ಇಲ್ಲಿದೆ ಕಂಪ್ಲೀಟ್ ಕಹಾನಿ…
ಡಿಬಾಸ್ ದರ್ಶನ್ ಹಾಗು ಧನ್ವೀರ್ ಗೌಡ ಅವಿನಾಭಾವ ಸಂಬಂಧದ ಬಗ್ಗೆ ಹೇಳೋದೇ ಬೇಕಿಲ್ಲ ಯಾಕಂದ್ರೆ ಕರುನಾಡೇ ಶೋಕದಾರ್ ನನ್ನು ದರ್ಶನ್ ಶಿಷ್ಯ ಎಂಬುವುದಾಗಿಯೇ ಕರೀತಾರೆ. ಅವರ ಅವಿನಾವಭಾವ ಸಂಬಂಧಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಿದೆ.
ಧನ್ವೀರ್ ಗೌಡ ಪ್ರತಿ ಫಂಕ್ಷನ್ ನಲ್ಲೂ ಅಲ್ಲಿ ಸ್ಪೆಷಲ್ ಅಟ್ರಾಕ್ಷನ್ ಅಂದ್ರೆ ಅದು ಡಿ ಬಾಸ್ ದರ್ಶನ್ ಎಲ್ಲಾ ಸಮಯದಲ್ಲೂ ಇವರಿಬ್ಬರು ಸಹೋರರಂತೆ ಕಾಣಸಿಗುತ್ತಾರೆ. ಇಲ್ಲಿ ಮತ್ತೆ ಧನ್ವೀರ್ ಗೌಡ ತಮ್ಮ ಬಾಸ್ ಮೇಲಿನ ಪ್ರೀತಿಯನ್ನು ಸಾಬೀತು ಪಡಿಸಿದ್ದಾರೆ.
ಹೌದು ಇತ್ತೀಚೆಗಷ್ಟೇ ಸಿನಿ ನಟ ನಟಿಯರಿಗೆ ಚಿತ್ತಾರ ಮ್ಯಾಗಜಿನ್ ಕೆಲವೊಂದು ಅವಾರ್ಡ್ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ಚಿತ್ತಾರ ಅವಾರ್ಡ್ ಗೆ ಅನೇಕ ಸ್ಟಾರ್ಸ್ ಬಂದಿದ್ದು ಕಾರ್ಯಕ್ರಮಕ್ಕೆ ಬಹಳಷ್ಟು ಮೆರಗು ನೀಡಿತ್ತು.ಕಾರ್ಯಕ್ರಮದ ನಿರೂಪಣೆಯನ್ನು ನಿರಂಜನ್ ದೇಶ್ ಪಾಂಡೆ ಬಹಳ ಅದ್ಭುತ ವಾಗಿ ನೆರವೇರಿಸಿದ್ರು. ಅಷ್ಟಕ್ಕೂ ದರ್ಶನ್ ಹಾಗೂ ಚಿತ್ತಾರ ಅವಾರ್ಡ್ ಗೆ ಏನ್ ಸಂಬಂಧ ಎಂಬ ಪ್ರಶ್ನೆ ಮೂಡಬಹುದು. ಹೌದು ನಿಮ್ಮ ಪ್ರಶ್ನೆ ಸರಿಯಾಗಿದೆ. ದರ್ಶನ್ ಹಾಗು ಚಿತ್ತಾರ ಅವಾರ್ಡ್ ಗೆ ಸಂಬಂಧ ಇದೆ. ಅದುವೇ ಅಭಿಮಾನದ ಸಂಬಂಧ. ಸ್ಟಾರ್ ನಟ ಧನ್ವೀರ್ ಗೌಡ ತನಗೆ ಸಿಕ್ಕಿದಂತಹ ಅವಾರ್ಡ್ ನ್ನು ಡಿ ಬಾಸ್ ಗೆ ಅರ್ಪಿಸಿದ್ದಾರೆ.
ಶೋಕ್ಧಾರ್,ಬಜಾರ್ ಬೈ ಟು ಲವ್ ಹೀಗೆ ಅನೇಕ ಚಿತ್ರಗಳ ನಾಯಕನಾಗಿ ಕರುನಾಡಿನ ಮನೆ ಮಾತಾಗಿರುವ, ಹೆಂಗಳೆಯರ ಹೃದಯ ಕದ್ದ ಧನ್ವೀರ್ ಗೌಡ ಚಿತ್ತಾರ ಅವಾರ್ಡ್ ಕಾರ್ಯಕ್ರಮಕ್ಕೆ ಖಡಕ್ ಆಗಿಎಂಟ್ರಿ ಕೊಟ್ಟು ನೆರೆದವರ ಗಮನ ಸೆಳೆದ್ರು. ತಮ್ಮ ಪ್ರೀತಿಯ ಮೋಹಕ ತಾರೆ ರಮ್ಯಾ ಅವರಿಂದ ಅವಾರ್ಡ್ ಪಡೆದು ಡಬಲ್ ಖುಷಿಯನ್ನು ಹೊರ ಹಾಕಿದ್ರು. ಜೊತೆಗೆ ಈ ವೇಳೆ ಈ ಅವಾರ್ಡನ್ನು ನನ್ನ ಪ್ರೀತಿಯ ದರ್ಶನ್ ಸರ್ ಗೆ ಅರ್ಪಿಸುತ್ತೇನೆ ಎಂದು ಹೇಳಿ ಮತ್ತೆ ಡಿ ಬಾಸ್ ಹಾಗು ಧನ್ವೀರ್ ಅ ವಿನಾಭಾವ ಸಂಬಂಧಕ್ಕೆ ಸಾಕ್ಷಿಯಾದ್ರು.
ಇದೇ ಸಂದರ್ಭ ನಿರಂಜನ್ ದೇಶ್ ಪಾಂಡೆ ಧನ್ವೀರ್ ಗೌಡ ಅವರನ್ನು ಸ್ವಲ್ಪ ಕಾಲೆಳೆದ ಸನ್ನಿವೇಶವೂ ನಡೆಯಿತು. ಅದೇನೆ ಆದ್ರೂ ತಮಗೆ ಬಂದ ಅವಾರ್ಡನ್ನು ದರ್ಶನ್ ಗೆ ಅರ್ಪಿಸಿದ್ದು ಮಾತ್ರ ಡಿ ಭಾಸ್ ಅಭಿಮಾನಿಗಳಿಗೆ ಮತ್ತಷ್ಟು ಖುಷಿ ತಂದುಕೊಟ್ಟಿದ್ದು ಸುಳ್ಳಲ್ಲ.
ಸಾನ್ಯಾ ನನ್ನ ಲವರ್ ಎಂದ ರಾಕೇಶ್..! ಬಿಗ್ ಬಾಸ್ ನಲ್ಲಿ ಹೊಸ ಲವ್ ಸ್ಟೋರಿ ಶುರೂ..!