ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಜೈಲು ಸೇರಿರುವ ಎಲ್ಲಾ ಹದಿನೇಳು ಆರೋಪಿಗಳು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದರು. ಆದರೆ, ಇದೀಗ ಒಬ್ಬೊಬ್ಬರೇ ಕಾನೂನು ಹೋರಾಟಕ್ಕೆ ಇಳಿದಿದ್ದಾರೆ. ಮೊದಲು ಪವಿತ್ರಾಗೌಡ ಅವರು ದರ್ಶನ್ ಅವರಿಗಿಂತ ಮೊದಲೇ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಅವರು ಎ1 ಆರೋಪಿ. ಅವರಿಂದಲೇ ರೇಣುಕಾಸ್ವಾಮಿ ಅವರ ಕೊಲೆಯಾಗಿದೆ ಎಂಬ ಮಾತುಗಳು ಕೇಳಿಬಂದಿವೆ. ಅದೇನೆ ಇದ್ದರೂ, ಕೊಲೆಯಲ್ಲಿ ಮಾತ್ರ ಅವರೆಲ್ಲರೂ ಒಗ್ಗಟ್ಟು ಪ್ರದರ್ಶಿಸಿದ್ದರು. ಆದರೆ, ಇದೀಗ ಕಾನೂನು ಹೋರಾಟ ವಿಷಯದಲ್ಲಿ ಮಾತ್ರ ಒಬ್ಬೊಬ್ಬರೇ ಹೋರಾಡಲು ಸಜ್ಜಾಗುತ್ತಿದ್ದಾರೆ.
ಸ್ಟೋನಿ ಬ್ರೋಕ್ಸ್ ಪಬ್ ಮಾಲೀಕ ಎ10 ಆರೋಪಿ ವಿನಯ್ ಕೂಡ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿ ಆ.27ಕ್ಕೆ ಮುಂದೂಡಿದೆ. ಸದ್ಯ ಜಾಮೀನು ಕೋರಿ ಪವಿತ್ರಾ ಮತ್ತು ವಿನಯ್ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಇವರಿಬ್ಬರ ಅರ್ಜಿಯನ್ನೂ ತಿರಸ್ಕರಿಸಿ, ಮುಂದಿನ ವಿಚಾರಣೆಗೆ ಮುಂದೂಡಿದೆ.
ದರ್ಶನ್ ಭೇಟಿ ಇಲ್ಲ: ಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ಪವಿತ್ರಾಗೌಡ, ಅದೇ ಜೈಲಿನಲ್ಲಿರುವ ದರ್ಶನ್ ಅವರನ್ನು ಇದುವರೆಗೂ ಭೇಟಿ ಮಾಡಿಲ್ಲ. ಜೈಲಿನ ನಿಂiÀiಮಾವಳಿ ಪ್ರಕಾರ, ಭೇಟಿಗೆ ಅವಕಾಶವಿದೆ. ಆದರೆ, ಅವರ ಮಧ್ಯೆ ಈವರೆಗೆ ಯಾವುದೇ ಮಾತಿಲ್ಲ, ಭೇಟಿಯೂ ಇಲ್ಲ. ಹಾಗಾದರೆ ದರ್ಶನ್ ಪವಿತ್ರಾಗೌಢ ಅವರಿಬ್ಬರ ಸಂಬಂಧ ಮುರಿದುಬಿತ್ತಾ? ಈ ಪ್ರಶ್ನೆ ಸದ್ಯ ಎಲ್ಲೆಡೆ ಹರಿದಾಡುತ್ತಿದೆ. ಸ್ವಾಮಿ ಕೇಸಲ್ಲಿ ಜೈಲು ಸೇರಿದ ನಂತರ, ಒಂದೇ ಜೈಲಿನಲ್ಲಿದ್ದರೂ, ನಾನೊಂದು ತೀರ, ನೀನೊಂದು ತೀರ ಎನ್ನುವಂತಾಗಿದೆ ದಚ್ಚು- ಪವಿತ್ರಾ ಬದುಕು.
ಅದೇನೆ ಇರಲಿ, ದರ್ಶನ್ ಅವರನ್ನು ಭೇಟಿ ಮಾಡಲು ಸಿನಿಮಾರಂಗದ ಅನೇಕ ಗಣ್ಯರು ಹೋಗಿದ್ದಾರೆ. ಈಗಲೂ ಹೋಗುತ್ತಲೇ ಇದ್ದಾರೆ. ಈ ಮಧ್ಯೆ ಹೋದವರೆಲ್ಲರೂ, ಪವಿತ್ರಾ ಗೌಡ ಸಹವಾಸ ಬಿಟ್ಟುಬಿಡು ಎನ್ನುವ ಕಿವಿಮಾತು ಕೂಡ ಹೇಳಿದ್ದಾರೆ ಎನ್ನಲಾಗಿದೆ.