ದರ್ಶನ್ ಅವರು ಜೈಲಿನಲ್ಲಿ ಹೇಗಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲೂ, ಜನಸಾಮಾನ್ಯರಲ್ಲೂ ಹೆಚ್ಚಾಗಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಿಗಳು ನವೆಂಬರ್ 3ರಂದು ಬೆಂಗಳೂರಿನ 64ನೇ ಸಿಸಿಹೆಚ್ ಕೋರ್ಟ್ಗೆ ಹಾಜರಾಗಿದ್ದರು. ವಿಚಾರಣೆ ವೇಳೆ ಪವಿತ್ರಾ ಗೌಡ ತುಂಬಾ ಟೆನ್ಷನ್ನಲ್ಲಿದ್ದರೆಂದು ಮೂಲಗಳು ಹೇಳುತ್ತಿವೆ.
ವಿಚಾರಣೆ ಮುಗಿದ ಬಳಿಕ ಜೈಲಿಗೆ ಹೋದ ಪವಿತ್ರಾ ಮೌನಕ್ಕೆ ಶರಣಾಗಿ ಕಣ್ಣೀರು ಹಾಕಿದರೆಂಬ ಸುದ್ದಿ ಹೊರಬಂದಿದೆ. ಕೋರ್ಟ್ ಆವರಣದಲ್ಲಿ ಪವಿತ್ರಾ ಗೌಡ ಅವರ ಮಗಳು ತಾಯಿಯನ್ನು ನೋಡಲು ಬಂದಾಗ ಪವಿತ್ರಾ ಭಾವುಕರಾದರು. ಮಗಳನ್ನು ಕಂಡು ಕಣ್ಣೀರು ಹಾಕಿದ ಪವಿತ್ರಾ, ನಂತರ ಜೈಲಿಗೆ ಹೋದ ಬಳಿಕ ಊಟ ಮಾಡದೇ, ಯಾರೊಂದಿಗೂ ಮಾತನಾಡದೇ ಇದ್ದರೆಂದು ತಿಳಿದುಬಂದಿದೆ. ಇತ್ತೀಚಿನವರೆಗೆ ಜೈಲಿನಲ್ಲಿ ಆಕ್ಟೀವ್ ಆಗಿದ್ದ ಪವಿತ್ರಾ, ಈಗ ಸಂಪೂರ್ಣ ಮೌನವಾಗಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.
ಇನ್ನೊಂದೆಡೆ ಕ್ವಾರಂಟೈನ್ ಸೆಲ್ನಲ್ಲಿರುವ ದರ್ಶನ್ ಮತ್ತು ಅವರ ಬಳಗ ಕೂಲ್ ಆಗಿದ್ದಾರೆ. ಕೋರ್ಟ್ಗೆ ಬಂದಾಗಲೂ ದರ್ಶನ್ ಅಭಿಮಾನಿಗಳತ್ತ ನಗುತ್ತಾ ಕೈಬೀಸಿದ್ದರು. ವಿಚಾರಣೆ ವೇಳೆ ಸಹ ಶಾಂತವಾಗಿದ್ದ ಅವರು ಜೈಲಿಗೆ ಹೋದ ಬಳಿಕವೂ ಆರಾಮವಾಗಿದ್ದಾರೆ ಎಂದು ತಿಳಿದುಬಂದಿದೆ. ಕೋರ್ಟ್ನಲ್ಲಿ ಪವಿತ್ರಾ ದರ್ಶನ್ ಜೊತೆ ಮಾತನಾಡಲು ಪ್ರಯತ್ನಿಸಿದರೂ, ದರ್ಶನ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲವೆಂಬುದು ವರದಿಯಾಗಿದೆ. ಈ ಘಟನೆ ಪವಿತ್ರಾಳ ಮನಸ್ಥಿತಿಗೆ ಮತ್ತಷ್ಟು ನೋವು ತಂದಂತಿದೆ.
ಒಂದೆಡೆ ದರ್ಶನ್ನ ಮೌನ, ಮತ್ತೊಂದೆಡೆ ಒಂಟಿಯಾದ ಮಗಳು. ಈ ಎರಡೂ ಕಾರಣಗಳಿಂದ ಪವಿತ್ರಾ ಗೌಡ ಭಾವುಕರಾಗಿದ್ದು, ಜೈಲಿನೊಳಗಿನ ವಾತಾವರಣಕ್ಕೂ ಈ ಘಟನೆಗಳ ಪ್ರಭಾವ ಸ್ಪಷ್ಟವಾಗಿ ಗೋಚರಿಸುತ್ತಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

