ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೆ ಜೈಲು ಸೇರಿರುವ ದರ್ಶನ್ ಅವರನ್ನು ನೆನೆದು ಪತ್ನಿ ವಿಜಯಲಕ್ಷ್ಮಿ ಅವರು ಬೇಸರದಲ್ಲಿದ್ದಾರೆ. ದರ್ಶನ್ ಅವರ ನೆನಪಿನಲ್ಲಿ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ದರ್ಶನ್ ಅವರು ಎಲ್ಲೋ ನೋಡುತ್ತಾ, ಮೌನವಾಗಿ ನಿಂತಿರುವ ಪೋಟೋವೊಂದನ್ನು ಹಾಕಿ, ಅದಕ್ಕೆ ಒಡೆದ ಕೆಂಪು ಹೃದಯದ ಹಾರ್ಟ್ ಇಮೊಜಿಯನ್ನು ಹಾಕಿದ್ದಾರೆ. ಅಷ್ಟೇ ಅಲ್ಲದೆ ಅದಕ್ಕೆ ಸ್ಯಾಡ್ ಮ್ಯೂಸಿಕ್ ಕೂಡ ಕಾಕಿದ್ದಾರೆ.
ಈ ಪೋಸ್ಟ್ ಗೆ ಸಾಕಷ್ಟು ಕಮೆಂಟ್ ಗಳು ಬರುತ್ತಿದ್ದು, ದರ್ಶನ್ ಅಭಿಮಾನಿಗಳು ಕುಗ್ಗದೀರಿ ಅತ್ತಿಗೆ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಕಾಮೆಂಟ್ ಅಲ್ಲಿ ಧೈರ್ಯ ತುಂಬುತ್ತಿದ್ದಾರೆ. ಇನ್ನೊಂದು ಕಡೆ, ದರ್ಶನ್ ಅವರು ಕಳೆದ ವರ್ಷ ಜೂನ್‌ನಲ್ಲಿ ಅರೆಸ್ಟ್ ಆಗಿದ್ದರು. ಕರ್ನಾಟಕ ಹೈಕೋರ್ಟ್‌ನಿಂದ ಜಾಮೀನು ಪಡೆದು ಅವರು ಹಾಯಾಗಿ ಸುತ್ತಾಡಿಕೊಂಡಿದ್ದರು.
ನಂತರ ಸುಪ್ರೀಂಕೋರ್ಟ್ ಜಾಮೀನು ರದ್ದು ಮಾಡಿ ಆದೇಶ ಹೊಡಿಸಿದೆ. ಅಲ್ಲದೆ, ದರ್ಶನ್‌ಗೆ ಯಾವುದೇ ಐಷಾರಾಮಿ ಸವಲತ್ತು ಸಿಗದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಕೆ ಕೊಟ್ಟಿದೆ. ಈ ಕಾರಣದಿಂದಲೇ ದರ್ಶನ್ ಜೈಲಿನಲ್ಲಿ ಸಾಕಷ್ಟು ತೊಂದರೆ ಎದುರಿಸಬೇಕಕಾದ ಪರಿಸ್ಥಿತಿ ಬಂದಿದೆ. ದರ್ಶನ್ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇಡಲಾಗಿದೆ. ದರ್ಶನ್ ಆರಂಭದಲ್ಲಿ ಇಲ್ಲೇ ಇದ್ದರು. ಅವರಿಗೆ ಐಷಾರಾಮಿ ಸವಲತ್ತು ಒದಗಿಸಲಾಯಿತು. ಇದರ ಫೋಟೋಗಳು ಕೂಡ ವೈರಲ್ ಆದವು.
ಈ ಬಾರಿ ಜೈಲಿನ ಮ್ಯಾನ್ಯುಯಲ್ ಪ್ರಕಾರವೇ ಅಧಿಕಾರಿಗಳು ದರ್ಶನ್‌ರನ್ನ ನಡೆಸಿಕೊಳ್ಳುತ್ತಿದ್ದಾರೆ. ಕಟ್ಟುನಿಟ್ಟಾಗಿ ಅವರಿಗೆ ಜೈಲು ಊಟವನ್ನೇ ನೀಡಬೇಕಿದೆ. ಮನೆಯಿಂದ ಯಾವುದೇ ಊಟವನ್ನು ತರುವಂತಿಲ್ಲ. ಜೈಲಿನ ಮೆನುವಿನಂತೆ ಊಟ-ತಿಂಡಿ ನೀಡಲಾಗುತ್ತಿದೆ. ಕಳೆದ ಬಾರಿ ಮನೆ ಊಟದ ವ್ಯವಸ್ಥೆ ಇತ್ತು. ಆದರೆ, ಈ ಬಾರಿ ಅದಕ್ಕೆ ಬ್ರೇಕ್ ಬಿದ್ದಿದೆ.
ಸದ್ಯ ಬೆಂಗಳೂರಿನಲ್ಲಿ ಮಳೆಯ ವಾತಾವರಣ ಇದೆ. ಹೀಗಾಗಿ ಹವಾಮಾನ ತಂಪಾಗಿದೆ. ಈ ವೇಳೆ ಹೊದ್ದುಕೊಳ್ಳಲು ಒಂದು ಬೆಡ್‌ಶೀಟ್ ಸಾಕಾಗೋದಿಲ್ಲ. ಹೀಗಾಗಿ, ದರ್ಶನ್ ಎರಡು ಬೆಡ್‌ಶೀಟ್ ಕೇಳಿದ್ದಾರೆ. ಆದರೆ, ಜೈಲಿನ ಮ್ಯಾನ್ಯುಯಲ್ ಪ್ರಕಾರ ಒಂದೇ ಬೆಡ್ ಶೀಟ್ ನೀಡಲಾಗಿದೆ. ನಂತರ ಮರು ಮಾತಾಡದೇ ಅವರು ಒಂದೇ ಬೆಡ್‌ಶೀಟ್ ಪಡೆದು ಹೋಗಿದ್ದಾರೆ ಎನ್ನಲಾಗಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ