ಲಾಕ್ ಡೌನ್ ಕಂಪ್ಲೀಟ್ ಆಗಿದ್ದು ಆಯ್ತು.. ಸ್ನೇಹಿತರ ಜೊತೆ ದಚ್ಚು ಜಾಲಿ ರೈಡಿಂಗ್ ಗೂ ಮುಗಿತು. ಇನ್ನೇನಿದ್ರೂ ಶೂಟಿಂಗ್ ಅಖಾಡಕ್ಕೆ ಎಂಟ್ರಿ ಕೊಡೋದೊಂದೇ ಬಾಕಿ. ದಚ್ಚು ಸಿನಿಮಾ ಶೂಟಿಂಗ್ ಶುರುವಾಗೋದು ಯಾವಾಗ..? ರಾಜವೀರ ಮದಕರಿ ಸಿನಿಮಾದ ಅಪ್ ಡೇಟ್ ಕೊಡೋದು ಯಾವಾಗ ಅಂತಾ ಕಾಯ್ತಿದ್ದ ದಚ್ಚು ಅಭಿಮಾನಿ ಬಳಗಕ್ಕೆ ನಯಾ ಸಮಾಚಾರವೊಂದು ಸಿಕ್ಕಿದೆ.

ಸೆಟ್ಟೇರಿದ ದಿನದಿಂದಲೂ ಸಖತ್ ಸುದ್ದಿಯಲ್ಲಿರೋ ರಾಜವೀರ ಮದಕರಿ ಸಿನಿಮಾದ ಶೂಟಿಂಗ್ ಡೇಟ್ ಫಿಕ್ಸ್ ಆಗಿದೆ. ಸಂಕ್ರಾಂತಿ ಹಬ್ಬಕ್ಕೆ ಡಿಬಾಸ್ ರಾಜವೀರ ಮದಕರಿ ಶೂಟಿಂಗ್ ಅಖಾಡಕ್ಕೆ ಎಂಟ್ರಿ ಕೊಡಲಿದ್ದಾರಂತೆ. ಮೊದ್ಲೆ ಈ ಸಿನಿಮಾ ಐತಿಹಾಸಿ ಚಿತ್ರ. ಹೀಗಿರುವಾಗ ಒಬ್ಬರು, ಇಬ್ಬರಿಂದ ಶೂಟಿಂಗ್ ಮಾಡೋದಿಕ್ಕೆ ಆಗೋಲ್ಲ. ದೊಡ್ಡ ಸೆಟ್ ಹಾಕಿ ನೂರಾರು ಕಲಾವಿದರ ನೇತೃತ್ವದಲ್ಲಿ ಶೂಟಿಂಗ್ ನಡೆಸಲಾಗುತ್ತದೆ. ಹೀಗಾಗಿ ರಾಜವೀರ ಮದಕರಿ ಟೀಂ ಯಾರಿಗೂ ಕೊರೋನಾ ಸೋಂಕು ಹರಡದಂತೆ ಕಾಳಜಿ ವಹಿಸ್ತಿದೆ. ವ್ಯಾಕ್ಸಿನ್ ಬಂದಿರೋದ್ರಿಂದ ಸಂಕ್ರಾಂತಿ ಹಬ್ಬಕ್ಕೆ ಶೂಟಿಂಗ್ ಮಾಡಲು ಭರ್ಜರಿ ತಯಾರಿ ನಡೆಸಿದೆಯಂತೆ.

ಈಗಾಗ್ಲೇ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅಂಡ್ ಟೀಂ ಸಾಕಷ್ಟು ಕಡೆಯಲ್ಲಿ ಲೋಕೇಷನ್ ಹುಡುಕಾಟ ನಡೆಸಿದ್ದು, ಎಲ್ಲಿ ಶೂಟಿಂಗ್ ಮಾಡಲಿದ್ದಾರೆ ಅನ್ನೋದು ಕಾದು ನೋಡ್ಬೇಕು.