Sunday, September 8, 2024

Latest Posts

ದರ್ಶನ್ ‘ರಾಬರ್ಟ್’ಗೆ ಆಯ್ತು ಯು/ಎ ಸೆನ್ಸಾರ್…ಮಾರ್ಚ್ 11ಕ್ಕೆ ಥಿಯೇಟರ್ ಅಂಗಳಕ್ಕೆ ಬರ್ತಿದ್ದಾರೆ ಡಿಬಾಸ್….!

- Advertisement -

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ಸಿನಿಮಾ ರಾಬರ್ಟ್ ಸಿನಿಮಾ ಸೆನ್ಸಾರ್ ಪಾಸಾಗಿದೆ. ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಪಡೆದು‌ ಇದೇ ತಿಂಗಳ 11ಕ್ಕೆ ಥಿಯೇಟರ್ ಅಂಗಳಕ್ಕೆ ಬರ್ತಿದೆ.

ಈಗಾಗ್ಲೇ ಟ್ರೇಲರ್ ಹಾಗೂ ಸಾಂಗ್ಸ್ ಮೂಲಕ ಸಖತರ ಸದ್ದು ಸುದ್ದಿ ಮಾಡಿರುವ ಡಿಬಾಸ್ ಸಿನಿಮಾ ನೋಡೋದಿಕ್ಕೆ ದಚ್ಚಜ ಅಭಿಮಾನಿ‌ಗಣ ಕಾತುರದಿಂದ ಕಾಯ್ತಿದೆ.

ಕನ್ನಡ ಮಾತ್ರವಲ್ಲದೇ ತೆಲುಗು ಭಾಷೆಯಲ್ಲಿ ತೆರೆಗೆ ಬರ್ತಿರುವ ರಾಬರ್ಟ್ ನೋಡೋದಿಕ್ಕೆ ತೆಲುಗು ಮಂದಿ ಕಾತುರರಾಗಿದ್ದಾರೆ. ಇತ್ತೀಚೆಗಷ್ಟೇ ಹೈದ್ರಾಬಾದ್ ಹಾಗೂ ಹುಬ್ಬಳ್ಳಿಯಲ್ಲಿ ಅದ್ಧೂರಿಯಾಗಿ ಪ್ರೀ-ರಿಲೀಸ್ ಕಾರ್ಯಕ್ರಮ ನೆರವೇರಿತ್ತು.

ಉಳಿದಂತೆ ಸಿನಿಮಾದಲ್ಲಿ ಡಿಬಾಸ್ ಗೆ ಜೋಡಿಯಾಗಿ ಭದ್ರಾವತಿ ಬ್ಯೂಟಿ ಆಶಾ ಭಟ್ ನಟಿಸಿದ್ದು, ಉಮಾಪತಿ ಬಂಡವಾಳ ಹೂಡಿದ್ದಾರೆ.

- Advertisement -

Latest Posts

Don't Miss