Sunday, April 13, 2025

Latest Posts

Darshan Case: ಜೈಲಿನಲ್ಲಿ ನಟ ದರ್ಶನ್​ ದರ್ಬಾರ್: ಮಗನ ಪರ ಮದರ್ ಇಂಡಿಯಾ ಬ್ಯಾಟಿಂಗ್

- Advertisement -

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ (Actor Darshan)​ಗೆ ಜೈಲಿನಲ್ಲಿ ರಾಜಾತಿಥ್ಯ ಕೊಡುತ್ತಿರುವುದು ಸದ್ಯ ಭಾರಿ ಸಂಚಲನಕ್ಕೆ ಕಾರಣವಾಗಿದೆ. ಈ ಬಗ್ಗೆ ಮಾಜಿ ಸಂಸದೆ ಸುಮಲತಾ ಅಂಬರೀಶ್ (Sumalatha Ambarish)​ ಪ್ರತಿಕ್ರಿಯಿಸಿದ್ದು, ದರ್ಶನ್​ ನನಗೆ ಆಪ್ತರು, ಹತ್ತಿರದವರು. ಈ ವಿಚಾರವಾಗಿ ನಾನು ಮಾತನಾಡಿದ್ರೆ ಕಾಂಟ್ರವರ್ಸಿ ಆಗುತ್ತೆ ಎಂದು ಹೇಳಿದ್ದಾರೆ.

 

ಜೈಲಿನಲ್ಲಿ ಹೀಗೆ ನಡೆಯುತಿರೋದು ಇದೇ ಮೊದಲ ಎಂಬುವುದನ್ನು ನಾವು ಮೊದಲು ನೋಡಬೇಕು. ಜೈಲಿನಲ್ಲಿ ಹಣ ಕೊಟ್ಟರೆ ಯಾವ ಸೌಲಭ್ಯ ಬೇಕಾದರೂ ಸಿಗುತ್ತೆ ಎಂದು ಐಪಿಎಸ್​ ಅಧಿಕಾರಿ ಡಿ.ರೂಪಾ ಈ ಹಿಂದೆಯೇ ಹೇಳಿದ್ದರು. ಇದು ಕೇವಲ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮಾತ್ರ ಆಗಿಲ್ಲ ಎಂದಿದ್ದಾರೆ.

ಪ್ರಪಂಚದಲ್ಲಿರೋ ಎಲ್ಲಾ ಜೈಲುಗಳಲ್ಲಿ ಇಂತಹ ಭ್ರಷ್ಟಾಚಾರ ನಡೆಯುತ್ತಿದೆ. ಅಮೆರಿಕದ ಜೈಲುಗಳಲ್ಲೂ ಡ್ರಗ್ಸ್, ಸಿಗರೇಟ್ ಎಲ್ಲವೂ ಸಿಗುತ್ತದೆ. ಇದು ಭ್ರಷ್ಟಾಚಾರ, ಇದನ್ನು ಸರಿ ಅಂತ ನಾನು ಹೇಳುವುದಿಲ್ಲ. ಇದು ಸಿಸ್ಟಮ್​ನಲ್ಲಿರೋ ಸಮಸ್ಯೆ ಅಂತ ಸುಮಲತಾ ಅಂಬರೀಶ್​ ತಿಳಿಸಿದ್ದಾರೆ.

ಇನ್ನು, ಜೈಲಿನ ಗಾರ್ಡನ್​ನಲ್ಲಿ ರೌಡಿಶೀಟರ್​ ವಿಲ್ಸನ್​ ಗಾರ್ಡನ್​ ನಾಗನ ಜೊತೆ ನಟ ದರ್ಶನ್​ ಕುಳಿತಿರುವ ಫೋಟೋ ಬಗ್ಗೆ ಮಾತನಾಡಿದ ಅವ್ರು, ಜೈಲಲ್ಲಿ ಯಾರಾದ್ರೂ ಒಳ್ಳೆಯವರು ಇರ್ತಾರಾ..? ಅಲ್ಲಿ ಇರೋದೇ ರೌಡಿಗಳು.. ಅಲ್ಲಿ ಒಳ್ಳೆಯವರು ಎಲ್ಲಿ ಇರ್ತಾರೆ ಅಂತ ಸುಮಲತಾ ಹೇಳಿದ್ದಾರೆ.

- Advertisement -

Latest Posts

Don't Miss