ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿರುವ ನಟ ದರ್ಶನ್ ತಮಗೆ ಮನೆ ಊಟ ಬೇಕು ಅಂತ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ಮಂಗಳವಾರ ನಡೆದಿದ್ದು, ಸೆಪ್ಟೆಂಬರ್ 5ರವರೆಗೆ ದರ್ಶನ್‌ಗೆ ಜೈಲೂಟವೇ ಗತಿಯಾಗಿದೆ.
ಆರೋಗ್ಯ ಸಮಸ್ಯೆಯ ಕಾರಣವೊಡ್ಡಿ ಮನೆ ಊಟ ಸೇರಿದಂತೆ ಕೆಲವು ವಸ್ತುಗಳಿಗೆ ಬೇಡಿಕೆ ಇಟ್ಟಿರುವ ನಟ ದರ್ಶನ್ ಸಲ್ಲಿಸಿರೋ ಅರ್ಜಿಯನ್ನು ಕೈಗೆತ್ತಿಕೊಂಡ ಹೈಕೋರ್ಟ್ ಏಕಸದಸ್ಯ ಪೀಠ ಸೆಪ್ಟೆಂಬರ್ 5ಕ್ಕೆ ವಿಚಾರಣೆಯನ್ನು ಮುಂದೂಡಿದೆ. ನಟ ದರ್ಶನ್ ಗೆ ಮನೆ ಊಟ ನೀಡಲು ವೈದ್ಯಾಧಿಕಾರಿಗಳು ನಿರಾಕರಿಸಿದ್ದಾರೆ ಎಂದು ರಾಜ್ಯ ಅಭಿಯೋಜಕ ಬೆಳ್ಳಿಯಪ್ಪ ಹೈಕೋರ್ಟ್ಗೆ ತಿಳಿಸಿದರು. ಅದಕ್ಕೆ ಸಂಬAಧಿಸಿರುವ ದಾಖಲೆಗಳನ್ನು ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಸಿರುವುದಾಗಿ ರಾಜ್ಯ ಅಭಿಯೋಜಕ ಬೆಳ್ಳಿಯಪ್ಪ ತಿಳಿಸಿದರು. ಈ ವೇಳೆ ಕೇಂದ್ರ ಕಾರಾಗೃಹದ ವೈದ್ಯಾಧಿಕಾರಿಗಳು ಸಲ್ಲಿಸಿರೋ ವರದಿಯನ್ನು ನೋಡಿ ವಾದ ಮಂಡನೆಗೆ ಸಮಯ ಬೇಕಾಗುತ್ತದೆ. ಹೀಗಾಗಿ ವಾದ ಮಂಡಿಸಲು ಕಾಲಾವಕಾಶ ನೀಡುವಂತೆ ನಟ ದರ್ಶನ್ ಪರ ವಕೀಲರು ಹೈಕೋರ್ಟ್ಗೆ ಮನವಿ ಮಾಡಿದರು. ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ ಏಕಸದಸ್ಯ ಪೀಠ ವಿಚಾರಣೆಯನ್ನು ಸೆಪ್ಟೆಂಬರ್ 5ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ.
ಜೈಲಿನ ವೈದ್ಯಾಧಿಕಾರಿಗಳು ಸಲ್ಲಿಸಿರೋ ವರದಿಯಲ್ಲಿ ಏನಿದೆ..?
01. ಸೆಂಟ್ರಲ್ ಜೈಲಿನಲ್ಲಿ ದರ್ಶನ್‌ಗೆ ಪೌಷ್ಠಿಕ ಆಹಾರವನ್ನು ನೀಡಲಾಗುತ್ತಿದೆ
02. ಆಹಾರ ಸಮಸ್ಯೆ ಬಗ್ಗೆ ಇದುವರೆಗೂ ಯಾವುದೇ ದೂರು ಬಂದಿಲ್ಲ
03. ದರ್ಶನ್ ಕೊಲೆ ಆರೋಪಿ ಆಗಿರುವುದರಿಂದ ಹೊರಗಿನ ಊಟ ಕೊಡಲು ಬರೋದಿಲ್ಲ
04. ಆರೋಗ್ಯ ತಪಾಸಣೆ ವೇಳೆ ದರ್ಶನ್ ಫಿಟ್ & ಫೈನ್ ಆಗಿದ್ದಾರೆ
05. ಯಾವುದೇ ಆರೋಗ್ಯ ಸಮಸ್ಯೆ ಇಲ್ಲ. ಹೀಗಾಗಿ ಮನೆ ಊಟದ ಅವಶ್ಯಕತೆ ಇಲ್ಲ
ಇನ್ನು, ಜೈಲಿನ ವೈದ್ಯಾಧಿಕಾರಿಗಳು ವರದಿ ಸಲ್ಲಿಸುವ ಮೊದಲು ಜುಲೈ 31ರಂದು ನಡೆದಿದ್ದ ವಾದ-ಪ್ರತಿವಾದವನ್ನು ಓದಿದ ನ್ಯಾಯಾಧೀಶರು ಊಟದ ವ್ಯವಸ್ಥೆ ಬಗ್ಗೆ ಏನು ಮಾಡಿದ್ರಿ ಎಂದು ಪ್ರಶ್ನಿಸಿದರು. ಆಗ ಪರಪ್ಪನ ಕೇಂದ್ರ ಕಾರಾಗೃಹದ ವೈದ್ಯಾಧಿಕಾರಿಗಳು ನಟ ದರ್ಶನ್ ಫಿಟ್ & ಫೈನ್ ವರದಿಯನ್ನು ಸಲ್ಲಿಸಿದ್ರು. ಈ ವೇಳೆ ಮಧ್ಯಪ್ರವೇಶಿಸಿದ ನಟ ದರ್ಶನ್ ಪರ ವಕೀಲರು ಈಗ ಕೊಡುತ್ತಿರೋ ಊಟದ ಜೊತೆ ಒಂದು ಚಪಾತಿಯನ್ನಾದರೂ ಕೊಡಿ ಅಂತ ಹೈಕೋರ್ಟ್ಗೆ ಮನವಿ ಮಾಡಿದ್ರು. ಆದ್ರೆ, ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ಏಕಸದಸ್ಯ ಪೀಠ ವಿಚಾರಣೆಯನ್ನ ಸೆಪ್ಟೆಂಬರ್ 5ಕ್ಕೆ ಮುಂದೂಡಿದೆ.