ನಟ ದರ್ಶನ್ ಜಾಮೀನು ಭವಿಷ್ಯ ಮತ್ತೆ ಮುಂದೂಡಿಕೆಯಾಗಿದೆ. ಇವತ್ತು ಸುಪ್ರೀಂಕೋರ್ಟ್‌ನಲ್ಲಿ ದರ್ಶನ್ ಜಾಮೀನು ರದ್ದು ಮಾಡುವಂತೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೀತು. ನ್ಯಾಯಮೂರ್ತಿ ಪಾರ್ದ್ರಿವಾಲಾ ನೇತೃತ್ವದ ದ್ವಿಸದಸ್ಯ ಪೀಠ ಖಡಕ್ ಪ್ರಶ್ನೆಗಳನ್ನ ಕೇಳಿ ವಿಚಾರಣೆಯನ್ನು ಜುಲೈ 22ಕ್ಕೆ ಮುಂದೂಡಿದೆ.
2024ರ ಜೂನ್‌ನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆಯಾಗಿತ್ತು. ಪ್ರಕರಣದಲ್ಲಿ ದರ್ಶನ್ A2 ಆರೋಪಿಯಾಗಿದ್ರು. ಬೆನ್ನು ನೋವಿನ ಕಾರಣ ಹೇಳಿ 2024ರ ಡಿಸೆಂಬರ್ ನಲ್ಲಿ ಬೇಲ್ ಪಡೆದು ಹೊರಗೆ ಬಂದಿದ್ರು. ನಂತರ ಸುಪ್ರೀಂಕೋರ್ಟ್ಗೆ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಿತ್ತು. ಪ್ರಮುಖ 7 ಆರೋಪಿಗಳ ಬೇಲ್ ರದ್ದು ಮಾಡುವಂತೆ ಮನವಿ ಮಾಡಿ ಅರ್ಜಿ ಸಲ್ಲಿಸಿಲಾಗಿತ್ತು. ಸದ್ಯ ಪ್ರಕರಣದ ಎಲ್ಲಾ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದೆ. ಸದ್ಯ, ಬೇಲ್ ಮೇಲೆ ಹೊರಗೆ ಬಂದಿರುವ ದಚ್ಚು, ಡೆವಿಲ್ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಹೈಕೋರ್ಟ್ ಅನುಮತಿ ಮೇರೆಗೆ ಥೈಲ್ಯಾಂಡ್ ನಲ್ಲಿ ನಡೆಯುತ್ತಿರುವ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ.
ಇಂದು ಸುಪ್ರೀಂಕೋರ್ಟ್ ನಲ್ಲಿ ಸರ್ಕಾರದ ಅರ್ಜಿ ವಿಚಾರಣೆ ನಡೆದಿದ್ದು ದರ್ಶನ್ ಪರ ವಕೀಲ ಕಪಿಲ್ ಸೀಬಲ್ ಅವರು, ಬಂಧನದ ಕಾರಣಗಳನ್ನಷ್ಟೇ ಕೊಡಿ ಎಂದು ವಾದವನ್ನು ಮಾಡಿದರು. ಇದಕ್ಕೆ ಸುಪ್ರೀಂಕೋರ್ಟ್, ಬಂಧನ ಕಾನೂನು ಬದ್ದವಾಗಿಲ್ಲ ಅಂದರೆ ಉತ್ತರ ಕೊಡಿ ಎಂದು ರಾಜ್ಯ ಸರ್ಕಾರದ ಪರ ವಕೀಲರಿಗೆ ಸುಪ್ರೀಂ ಸೂಚನೆ ನೀಡಿದೆ. ನಂತರ ಈ ವಿಚಾರಣೆಯನ್ನು ಹೈಕೋರ್ಟ್ ಜುಲೈ 22ಕ್ಕೆ ಮುಂದೂಡಿಕೆ ಮಾಡಿದೆ.
ಸರ್ಕಾರದ ವಾದ ಏನಾಗಿತ್ತು ..?
ರೇಣುಕಾಸ್ವಾಮಿಯನ್ನು ಚಿತ್ರಹಿಂಸೆ ನೀಡಿ ಕೊಂದಿದ್ದಾರೆ. ರೇಣುಕಾಸ್ವಾಮಿ ದೇಹದ 37 ಭಾಗಗಳಲ್ಲಿ ಇರಿದ ಗಾಯಗಳಾಗಿವೆ. ಆರೋಪಿ ದರ್ಶನ್ ಪ್ರಭಾವಿ ವ್ಯಕ್ತಿ. ಸಾಕ್ಷಿಗಳ ಜೊತೆ ಓಡಾಡುತ್ತಿದ್ದಾರೆ. ಬೆನ್ನುನೋವು ಅಂತಾ ಹೇಳಿ ಹೊರಗಡೆ ಓಡಾಡಿಕೊಂಡಿದ್ದಾರೆ. ಹೀಗಾಗಿ ಜಾಮೀನು ರದ್ದು ಮಾಡಬೇಕು.
ದರ್ಶನ್ ಪರ ವಕೀಲರ ವಾದ ಏನಾಗಿತ್ತು?
ಆರೋಪಿ ದರ್ಶನ್ ಪರ ಯಾವುದೇ ಸಾಕ್ಷಿಗಳಿಲ್ಲ. ಯಾವ ಜಾಗದಲ್ಲೂ ಸಾಕ್ಷಿ ಸಿಕ್ಕಿಲ್ಲ. ರೇಣುಕಾಸ್ವಾಮಿಯನ್ನು ದರ್ಶನ್ ಕೊಲೆ ಮಾಡಿದ್ದಾರೆ ಅನ್ನೋದಕ್ಕೆ ಯಾವ ಸಾಕ್ಷಿಗಳಿವೆ?. ಕೇವಲ 3 ಸೆಕೆಂಡ್ಗಳ ವೀಡಿಯೋ ಇದೆ ಅಂತಿದ್ದಾರೆ. ಅದರಲ್ಲಿ ಏನು ಗೊತ್ತಾಗುತ್ತೆ. ಈ ವೀಡಿಯೋವ ಸಾಕ್ಷಿಯಾಗಲ್ಲ. ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಪಡೆಯದೇ ಬಂಧಿಸಲಾಗಿದೆ. ಬಂಧನದ ಬಳಿಕ ಹೈವಿಟ್ನೆಸ್ಗಳ ಹೇಳಿಕೆ ಪಡೆಯಲಾಗಿದೆ.
ಸದ್ಯ ಸುಪ್ರೀಂಕೋರ್ಟ್ ಈ ವಿಚಾರಣೆಯನ್ನು ಜುಲೈ 22ಕ್ಕೆ ಮುಂದೂಡಿದ್ದು, ಅವತ್ತೇ ದರ್ಶನ್ ಅವರ ಜಾಮೀನು ಅರ್ಜಿ ಭವಿಷ್ಯ ನಿರ್ಧಾರವಾಗಲಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ




